ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಷ್ಟ್ರೀಯ ಆಟಗಾರ್ತಿ ಈಗ ನಿತ್ಯಸುಮಂಗಲಿ !

By Staff
|
Google Oneindia Kannada News

ರಾಯಪುರ್, ಆ. 4 : ದೇಶದ ಪ್ರತಿಭಾವಂತ ಆಟಗಾರರಿಗೆ ಸರಕಾರ ಸೂಕ್ತ ನೆರವು ನೀಡಿದಿರುವ ಹಿನ್ನೆಲೆಯಲ್ಲಿ ಸಾಕಷ್ಟು ಜನ ಹೊಟ್ಟೆ ಪಾಡಿಗಾಗಿ ವಿವಿಧ ಕೆಲಸದಲ್ಲಿ ತೊಡಗಿರುವ ಸುದ್ದಿಗಳ ವರದಿ ಆಗುತ್ತಲೇ ಇವೆ. ಆಸ್ಸಾಂ ಮೂಲದ ರಾಷ್ಟ್ರೀಯ ಮಟ್ಟದ ಆಟಗಾರ್ತಿಯಾಗಿದ್ದ ನಿಶಾ ಶೆಟ್ಟಿ (26) ಕೂಡಾ ಹೊರತಲ್ಲ. ಅಸ್ಸಾಂ ಪೊಲೀಸರು ವೇಶ್ಯಾವೃತ್ತಿ ದಂಧೆಗೆ ಸಂಬಂಧಿಸಿದಂತೆ ನಿಶಾ ಮತ್ತು ಆಕೆಯೊಂದಿಗಿದ್ದ ಇಬ್ಬರು ಮಹಿಳೆಯರನ್ನು ಬಂಧಿಸಿದ್ದಾರೆ. ಇದು ಅಚ್ಚರಿಯ ಸಂಗತಿಯಾದರೂ ಸತ್ಯ ಘಟನೆ.

ವೇಶ್ಯಾವೃತ್ತಿ ನಡೆಸುತ್ತಿದ್ದಾರೆ ಎಂಬ ಆರೋಪದ ಮೇಲೆ ಕಳೆದ ಜುಲೈ 31 ರಂದು ನಿಶಾ ಮತ್ತು ಇಬ್ಬರು ಮಹಿಳೆಯರನ್ನು ಅಸ್ಸಾಂ ಪೊಲೀಸರು ಬಂಧಿಸಿದ್ದರು. ನಂತರ ತನಿಖೆಯ ವೇಳೆಯಲ್ಲಿ ನಿಶಾ ಅವರಿಂದ ದೊರೆತ ಮಾಹಿತಿ ನಿಜಕ್ಕೂ ಬೆಚ್ಚಿಬೀಳಿಸುವಂತಿವೆ. ನಾನು 1998ರಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಅಸ್ಸಾಂ ರಾಜ್ಯದಿಂದ ಭಾಗವಹಿಸಿದ್ದೆ. ಆನಂತರ ನನ್ನ ಕ್ರೀಡಾ ಜೀವನ ಆರಕ್ಕೆ ಏರಲಿಲ್ಲ. ಮೂರಕ್ಕೆ ಇಳಿಯಲಿಲ್ಲ. 2007ರಲ್ಲಿ ನನ್ನ ಪತಿ ಮೂತ್ರಪಿಂಡ ಸಮಸ್ಯೆಯಿಂದ ತೀರಿಕೊಂಡರು. ನನಗೆ ಜೀವನ ನಡೆಸುವುದೇ ದೊಡ್ಡ ಸಮಸ್ಯೆಯಾಗಿ ಕಾಡತೊಡಗಿತು. ನನ್ನ ಜೊತೆಗೆ 5 ವರ್ಷದ ಹೆಣ್ಣು ಮಗು ಸಾಕುವ ಜವಾಬ್ದಾರಿಯೂ ನನ್ನ ಹೆಗಲೇರಿತು. ನನಗೆ ಅಸ್ಸಾಂ ಸರಕಾರ ಯಾವ ಸಹಾಯವನನ್ನು ಮಾಡಲಿಲ್ಲ ಎಂದು ತಿಳಿಸಿದ್ದಾರೆ.

ಒಂದು ವಿಷಾದಕರ ಸಂಗತಿಯೆಂದರೆ, ವೇಶ್ಯಾವೃತ್ತಿ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ನಿಶಾ ಶೆಟ್ಟಿಗೆ ನ್ಯಾಯಾಲಯ ಜಾಮೀನು ಮೇಲೆ ಬಿಡುಗಡೆ ಮಾಡಿದೆ. ಆದರೆ, 10 ಸಾವಿರ ರುಪಾಯಿ ಭದ್ರತಾ ಠೇವಣಿ ಮೂಲಕ ಬಿಡುಗಡೆಗೊಳಿಸಿ ಎಂದು ನ್ಯಾಯಾಲಯ ನಿರ್ದೇಶನ ನೀಡಿದೆ. ಆದರೆ, ನಿಶಾ ಬಳಿ ಭದ್ರತಾ ಠೇವಣಿ ಕಟ್ಟಲು ಕೂಡಾ 10 ಸಾವಿರ ಇಲ್ಲದಿರುವುದು ವಿಪರ್ಯಾಸವಲ್ಲವೇ. ಕ್ರೀಡಾಪಟುಗಳನ್ನು ನಮ್ಮ ಸರಕಾರಗಳು ಹೇಗೆ ನಡೆಸಿಕೊಳ್ಳುತ್ತವೆ ಎನ್ನುವುದಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕಿಲ್ಲ.

ಇದೀಗ ನಿದ್ದೆಯಿಂದ ಎದ್ದಿರುವ ಅಸ್ಸಾಂ ಕ್ರೀಡಾ ಇಲಾಖೆ ನಿಶಾ ಸಹಾಯಕ್ಕೆ ಬಂದಿದೆ. ಅಲ್ಲದೇ ಕೆಲ ಆಟಗಾರರೂ ಕೂಡಾ ನಿಶಾಗೆ ಆರ್ಥಿಕ ನೆರವು ನೀಡಲು ಬಂದಿದ್ದಾರೆ. ಇನ್ನೂ ಕೆಲವರು ನಿಶಾಗೆ ಸೂಕ್ತ ಸರಕಾರಿ ಸಹಾಯ ನೀಡಬೇಕು ಎಂಬ ಒತ್ತಾಯವನ್ನು ಹೇರಿದ್ದಾರೆ. ಆದರೆ, ಏನೇ ಆಗಲಿ ಹೋದ ಮಾನವಂತೂ ಬರುವುದಿಲ್ಲ. ಹೊಟ್ಟೆ ಪಾಡು ಮನುಷ್ಯನನ್ನು ಯಾವ ಮಟ್ಟಕೆ ತಂದು ನಿಲ್ಲಿಸುತ್ತೆ ಅನ್ನುವುದಕ್ಕೆ ನಿಶಾ ಒಂದು ಉದಾಹರಣೆಯಷ್ಟೆ.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X