ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೇಸ್ ಕೋರ್ಸ್ ನಲ್ಲಿ ಕಟ್ಟಡಗಳು ಬೇಡ : ಸಾಹಿತಿಗಳು

By Staff
|
Google Oneindia Kannada News

Girish Karnad
ಬೆಂಗಳೂರು, ಜು. 30 : ರಾಜಧಾನಿಯ ಕೇಂದ್ರ ಭಾಗದಲ್ಲಿರುವ ರೇಸ್ ಕೋರ್ಸ್ ಸ್ಥಳಾಂತರವಾದ ನಂತರ ಆ ಜಾಗವನ್ನು ಹಸಿರು ವಲಯವಾಗಿ ಕಾಪಾಡಬೇಕೆಂದು ಕೋರಿ ಹಿರಿಯ ಸಾಹಿತಿಗಳು ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.

ಈ ಅರ್ಜಿ ಸಲ್ಲಿಸಿದವರು ಜ್ಞಾನಪೀಠ ಪುರಸ್ಕೃತ ಸಾಹಿತಗಳಾದ ಯು ಆರ್ ಅನಂತಮೂರ್ತಿ, ಗೀರೀಶ್ ಕಾರ್ನಾಡ, ಸುರೇಶ್ ಹೆಬ್ಳೇಕರ್, ಕೆ ಮರುಳುಸಿದ್ದಪ್ಪ, ಎಸ್ ಜಿ ವಾಸುದೇವ್, ಅಮ್ಮು ಜೋಸೆಫ್ ಹಾಗೂ ಜಿ ಕೆ ಗೋವಿಂದರಾವ್ ಸೇರಿದಂತೆ ಏಳು ಮಂದಿ ಸಾಹಿತಿಗಳು ನ್ಯಾಯಾಲಯದ ಮೆಟ್ಟಿಲು ಏರಿದ್ದಾರೆ. 2009 ಡಿಸೆಂಬರ್ 31 ರಿಂದ ರೇಸ್ ಕೋರ್ಸ್ ನ್ನು ಬೇರೆ ಕಡೆ ಸ್ಥಳಾಂತರ ಮಾಡಲಾಗುತ್ತಿದೆ. ಈ ಜಾಗದಲ್ಲಿ ವಿಶ್ವದಲ್ಲೇ ಅತೀ ಎತ್ತರದ ಕಟ್ಟಡ ನಿರ್ಮಾಣ ಮಾಡಲು ಸರಕಾರ ಮುಂದಾಗಿದೆ. ಆದರೆ, ಇದಕ್ಕೆ ಅವಕಾಶ ನೀಡದೇ ಈ ಜಾಗವನ್ನು ಹಸಿರು ವಲಯವಾಗಿ ಉಳಿಸಿಕೊಳ್ಳಬೇಕು ಎಂದು ಅರ್ಜಿಯಲ್ಲಿ ಕೋರಿದ್ದಾರೆ.

ಪ್ರಸ್ತುತ ಬೆಂಗಳೂರಿನಲ್ಲಿ ಶಬ್ದ ಮತ್ತು ವಾಯುಮಾಲಿನ್ಯ ಅಪಾಯಕಾರಿ ಹಂತ ತಲುಪಿದೆ. ಇಂತಹ ಪರಿಸ್ಥಿತಿಯಲ್ಲಿ ನಗರದ ಕೇಂದ್ರ ಭಾಗದಲ್ಲಿ ಹಸಿರು ವಲಯ ಸ್ಥಾಪಿಸುವ ಅಗತ್ಯವಿದೆ. ರೇಸ್ ಕೋರ್ಸ್ ನ್ನು ಹಸಿರು ವಲಯವನ್ನಾಗಿ ಸ್ಥಾಪಿಸುವ ಮೂಲಕ ಮಾಲಿನ್ಯ ಸುಧಾರಣೆ ಸಾಧ್ಯ. ಇದರ ಜೊತೆಗೆ ಈ ಪ್ರದೇಶದಲ್ಲಿ ಮಳೆ ನೀರು ಇಂಗುವ ವ್ಯವಸ್ಥೆ ಮಾಡಲೂ ಅವಕಾಶವಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X