ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಪಚುನಾವಣೆಗೆ ವೇದಿಕೆ ಸಜ್ಜು

By Staff
|
Google Oneindia Kannada News

ಬೆ೦ಗಳೂರು, ಜು. 30 : ಐದು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ನಿನ್ನೆ ನಾಮಪತ್ರ ಸಲ್ಲಿಕೆಯ ಪ್ರಕ್ರಿಯೆ ಕೊನೆಗೊಂಡಿದೆ. ಎಲ್ಲಾ ಕ್ಷೇತ್ರಗಳಲ್ಲಿ ತ್ರಿಕೋನ ಸ್ಪರ್ಧೆ ಇರುವುದರಿ೦ದ ಬಿಜೆಪಿ, ಕಾಂಗ್ರೆಸ್ ಮತ್ತು ಜನಾತಾದಳದ ಅಭ್ಯರ್ಥಿಗಳು ತಮ್ಮ ಭಾರೀ ಬೆಂಬಗಲಿಗರೊ೦ದಿಗೆ ನಾಮಪತ್ರ ಸಲ್ಲಿಸಿದ್ದಾರೆ. ಆಗಸ್ಟ್ 18 ರಂದು ಮತದಾನ ನಡೆಯಲಿದೆ. ಇ೦ದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ಆಗಸ್ಟ್ 1 ರ೦ದು ನಾಮಪತ್ರ ವಾಪಸ್ ಪಡೆಯಲು ಕಡೆಯ ದಿನವಾಗಿದೆ.

ರಾಜಕೀಯ ನಾಯಕರುಗಳ ಆರೋಪ - ಪ್ರತ್ಯಾರೋಪಗಳ ಕೆಸೆರೆರಚಾಟದ ಪುಕ್ಕಟೆ ಮನೋರಂಜನೆಗೆ ಈಗ ವೇದಿಕೆ ಸಜ್ಜಾಗಿದೆ. ರಾಮನಗರದ ಜೆಡಿಎಸ್ ಅಭ್ಯರ್ಥಿ ಕೆ ರಾಜು ಭಾರೀ ಬೆಂಬಲಿಗರೊಂದಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು. ಈ ವೇಳೆ ಕುಮಾರಸ್ವಾಮಿ, ಶಾಸಕರಾದ ಬಾಲಕೃಷ್ಣ, ಜಮೀರ್ ಅಹಮದ್ ಖಾನ್ ಹಾಜರಿದ್ದರು. ಬಿಜೆಪಿ ತಾನೇನು ಶಕ್ತಿ ಪ್ರದರ್ಶನದಲ್ಲಿ ಕಮ್ಮಿ ಇಲ್ಲವೆಂಬ೦ತೆ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು, ಶಾಸಕ ಎಂ ಶ್ರೀನಿವಾಸ್ ಮತ್ತು ಅಪಾರ ಬೆಂಬಲಿಗರೊ೦ದಿಗೆ ಅಭ್ಯರ್ಥಿ ನಾರಾಯಣಗೌಡ ನಾಮಪತ್ರ ಸಲ್ಲಿಸಿದರು.

ಇತ್ತ ಗೋವಿಂದರಾಜನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಕೃಷ್ಣ ಮತ್ತು ಜೆಡಿಎಸ್ ಅಭ್ಯರ್ಥಿ ನರೇಂದ್ರ ಪ್ರಸಾದ್ ಪೈಪೋಟಿಗೆ ಬಿದ್ದಂತೆ ತಮ್ಮತಮ್ಮ ಪಕ್ಷದ ಭಾರೀ ಬೆಂಬಲಿಗರೊ೦ದಿಗೆ ನಾಮಪತ್ರ ಸಲ್ಲಿಸಿದರು. ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣ ಈಗಾಗಲೇ ನಾಮಪತ್ರ ಸಲ್ಲಿಸಿದ್ದಾರೆ. ಚಿತ್ತಾಪುರ, ಚನ್ನಪಟ್ಟಣ ಮತ್ತು ಕೋಳ್ಳೆಗಾಲ ಕ್ಷೇತ್ರದಲ್ಲಿ ಪ್ರಮುಖ ಪಕ್ಷದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X