ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇವರು ಜಗತ್ತಿನ ಕಳ್ಳ ಸಿಇಒಗಳು

By Staff
|
Google Oneindia Kannada News

Ramalinga Raju
ನವದೆಹಲಿ, ಜು. 28 : ಜಾಗತಿಕ ಮಟ್ಟದ ಕಾರ್ಪೋರೆಟ್ ಸಂಸ್ಥೆಗಳಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಂತಹ ಉನ್ನತ ಹುದ್ದೆಯಲ್ಲಿರುವ 5 ಮಂದಿ ವೈಟ್ ಕಾಲರ್ ಕ್ರಿಮಿನಲ್ ಗಳನ್ನು ಪಟ್ಟಿ ಮಾಡಲಾಗಿದ್ದು, ಇತ್ತೀಚೆಗೆ ಸತ್ಯಂ ಕಂಪ್ಯೂಟರ್ಸ್ ನಂತಹ ದೈತ್ಯ ಕಂಪನಿಗೆ ಎಳ್ಳುನೀರು ಬಿಟ್ಟ ರಾಮಲಿಂಗರಾಜು ಅಲಿಯಾಸ್ ಗೋಲ್ ಮಾಲ್ ರಾಜು ಅವರ ಹೆಸರು ಪಟ್ಟಿಯಲ್ಲಿ ಇರುವುದು ವಿಶೇಷವಾಗಿದೆ.

ರಾಮಲಿಂಗರಾಜು, ಸತ್ಯಂ ಕಂಪ್ಯೂಟರ್ಸ್ ಲಿಮಿಟೆಡ್

ಸತ್ಯಂ ಕಂಪ್ಯೂಟರ್ಸ್ ನ ಕಾರ್ಯ ನಿರ್ವಾಹಕ ಅಧಿಕಾರಿ, ಕಂಪನಿಗೆ ಸಂಬಂಧಿಸಿದ ಸುಮಾರು 7000 ಕೋಟಿ ರುಪಾಯಿಗಳನ್ನು ಅವ್ಯವಹಾರ ಮಾಡಿರುವುದು ಕಳೆದ ವರ್ಷ ಅಕ್ಟೋಬರ್ ನಲ್ಲಿ ಬೆಳಕಿಗೆ ಬಂದಿತು. ರಾಜು ಮಾಡಿದ ಘನಂಧಾರಿ ಕೆಲಸದಿಂದ ಭಾರತದ ಕಾರ್ಪೋರೇಟ್ ಕಂಪನಿಗಳಿಗೆ ಮುಖ ಮುಚ್ಚಿಕೊಳ್ಳುವಂತ ಪರಿಸ್ಥಿತಿ ನಿರ್ಮಾಣವಾಯಿತು. ಸತ್ಯಂನಲ್ಲಿ ಗೋಲ್ ಮಾಲ್ ನಡೆದಿದೆ ಎಂದು ಹೊರಜಗತ್ತಿಗೆ ಗೊತ್ತಾಗುತ್ತಿದ್ದಂತೆಯೇ ಕಂಪನಿಯ ಷೇರುಗಳು ಪಾತಾಳ ಕಂಡವು. ಕಂಪನಿಯ ಸಾವಿರಾರು ನೌಕರರು ಬೀದಿ ಪಾಲಾದರು. ನಂತರ ಕೇಂದ್ರ ಸರಕಾರ ಸಮಿತಿ ರಚಿಸಿತಲ್ಲದೇ, ಸತ್ಯಂ ಕಂಪನಿಯನ್ನು ಟೆಕ್ ಮಹಿಂದ್ರ ಕಂಪನಿಗೆ ಮಾರಾಟ ಮಾಡಿತು. ಭಾರತದ ಅತಿ ದೊಡ್ಡ ಕಾರ್ಪೋರೇಟ್ ಹಗರಣ ಎಂಬ ಖ್ಯಾತಿಗೆ ಸತ್ಯಂ ಒಳಗಾಯಿತು.

ಲಿಯೋ ಡೆನ್ನಿಸ್ ಕೋಜ್ಲೂವಸ್ಕಿ, ಟೈಕೋ ಇಂಟರ್ ನ್ಯಾಷನಲ್ ಲಿ

ಟೈಕೋ ಇಂಟರ್ ನ್ಯಾಷನಲ್ ಲಿ ನ ಮಾಜಿ ಮುಖ್ಯಕಾರ್ಯನಿರ್ವಾಹಣ ಅಧಿಕಾರಿಯಾಗಿದ್ದ ಲಿಯೋ ಡೆನ್ನಿಸ್ ಕೋಜ್ಲೂವಸ್ಕಿ ಅವರು ಕಂಪನಿಗೆ ಸೇರಿದ ಸುಮಾರು 400 ಮಿಲಿಯನ್ ಡಾಲರ್ ಅವ್ಯವಹಾರ ಮಾಡಿ ಜೈಲು ಸೇರಿದರು. ಲಿಯೋ ಅವರ ಕಂಪನಿಗೆ ಸೇರಿದ ಅಪಾರ ಪ್ರಮಾಣದ ಮೊತ್ತವನ್ನು ಸ್ವಂತಕ್ಕಾಗಿ ಬಳಿಸಿಕೊಂಡಿದ್ದರು. ನಂತರ ಅವರಿಗೆ ಸೇರಿದ ಆಸ್ತಿ ಪಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಯಿತು.

ಜಾನ್ ರೀಗಸ್, ಅಡೆಲ್ಫಿಯಾ ಕಮ್ಯುನಿಕೇಷನ್ಸ್ ಕಾರ್ಪೋರೇಷನ್

ಅಡೆಲ್ಫಿಯಾ ಕಮ್ಯುನಿಕೇಷನ್ ಕಾರ್ಪೋರೇಷನ್ ಅಮೆರಿಕದ ಕೇಬಲ್ ಟೆಲಿವಿಷನ್ ಕಂಪನಿಯಲ್ಲಿ 5ನೇ ಅತಿದೊಡ್ಡ ಕಂಪನಿ ಎಂಬ ಹೆಸರಿದೆ. ಈ ಕಂಪನಿಯ ಮುಖ್ಯಕಾರ್ಯನಿರ್ವಾಹಣ ಅಧಿಕಾರಿಯಾಗಿದ್ದ ಜಾನ್ ರೀಗಸ್ ಅವರು 2002 ಮಾಡಿದ ಹಣಕಾಸು ಅವ್ಯವಹಾರದಿಂದ ಕಂಪನಿಯ ದಿವಾಳಿ ಸ್ಥಿತಿಗೆ ತಲುಪಿತು. ಕಂಪನಿಯ ಸಂಸ್ಥಾಪಕರಾಗಿದ್ದ ಜಾನ್ ರೀಗಸ್ ಮತ್ತು ಅವರ ಮಗ ತಿಮೂಟಿ ಅವರು ತಪ್ಪಿತಸ್ಥರೆಂದು ನ್ಯಾಯಾಲಯ ಆದೇಶ ನೀಡಿತು. ಇದೀಗ ಈ ಇಬ್ಬರು ಜೈಲುವಾಸ ಅನುಭವಿಸುತ್ತಿದ್ದಾರೆ. ಜಾನ್ ಅವರು 2.3 ಬಿಲಿಯನ್ ಅವ್ಯವಹಾರ ಮಾಡಿದ್ದರು.

ಜೊಯೆ ನಾಚ್ಚಿಯೋ, ಖ್ವೆಸ್ಟ್ ಇಂಟರ್ ನ್ಯಾಷನಲ್

ಅಮೆರಿಕದ ಟೆಲಿಕಾಂ ಇತಿಹಾಸದಲ್ಲೇ ಇದೊಂದು ದೊಡ್ಡ ಹಗರಣ ಎಂಬ ಅಪಕೀರ್ತಿಗೆ ಪಾತ್ರವಾಯಿತು. ಖ್ವೆಸ್ಟ್ ಇಂಟರ್ ನ್ಯಾಷನಲ್ ನ ಮುಖ್ಯ ನಿರ್ವಾಹಣ ಅಧಿಕಾರಿಯಾಗಿದ್ದ ಜೊಯೆ ನಾಚ್ಚಿಯೋ ಅವರು ಕಂಪನಿದೆ ಸೇರಿದ 52 ಮಿಲಿಯನ್ ಡಾಲರ್ ಗಳ ಹಗರಣ ಇದಾಗಿದೆ. ಇವರು ಕೂಡಾ ಜೈಲಿನಲ್ಲಿದ್ದಾರೆ. ಆದರೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ನಾಚ್ಚಿಯೋ ಅವರು, ಕಂಪನಿಯೂ ಸಂಕಷ್ಟದ ಸ್ಥಿತಿಯಲ್ಲಿದ್ದರಿಂದ ದಿವಾಳಿಯಾಗಿದೆ. ನಾನು ಯಾವುದೇ ಹಣಕಾಸಿನ ಅವ್ಯವಹಾರ ಮಾಡಿಲ್ಲ ಎಂದು ನ್ಯಾಯಾಲಯದಲ್ಲಿ ವಾದಿಸುತ್ತಿದ್ದಾರೆ.

ಗ್ರೇಗರಿ ರೇಯಸ್, ಬ್ರೂಕಾಡೆ ಕಮ್ಯುನಿಕೇಷನ್ ಸಿಸ್ಟಮ್ಸ್

ಸ್ಟೂರೇಜ್ ನೆಟ್ ವರ್ಕಿಂಗ್ ಕಂಪನಿಯಾಗಿದ್ದ ಬ್ರೂಕಾಡೆ ಕಮ್ಯೂನಿಕೇಷನ್ ಸಿಸ್ಟಮ್ಸ್ ನ ಮುಖ್ಯಕಾರ್ಯನಿರ್ವಾಹಣ ಅಧಿಕಾರಿಯಾಗಿದ್ದ ಗ್ರೇಗರಿ ರೇಯಸ್ ಅವರು, ಕಂಪನಿ ದಾಖಲಾತಿಗಳನ್ನು ತಿದ್ದಿದ ಆರೋಪಕ್ಕೆ ಒಳಗಾಗಿ 21 ತಿಂಗಳು ಕಾಲ ಜೈಲು ಶಿಕ್ಷೆ ಅನುಭವಿಸಿದ್ದಾರೆ. 15 ಮಿಲಿಯನ್ ದಂಡವನ್ನು ಸಹ ನ್ಯಾಯಾಲಯ ವಿಧಿಸಿತ್ತು.

ಬರ್ನಿ ಎಬ್ಬರ್ಸ್, ವರ್ಲ್ಡ್ ಕಾ ಸಹಸಂಸ್ಥಾಪಕ

ಟೆಲಿಕಮ್ಯುನಿಕೇಷನ್ ಕಂಪನಿಯ ಹೆಸರಾಂತ ಕಂಪನಿಯಾಗಿದ್ದ ವರ್ಲ್ಡ್ ಕಾಂ ಕಂಪನಿಯ ಮುಖ್ಯನಿರ್ವಾಹಕ ಅಧಿಕಾರಿಯಾಗಿದ್ದ ಬರ್ನಿ ಎಬ್ಬರ್ಸ್ ಅಮೆರಿಕ ಇತಿಹಾಸದ ಅತಿದೊಡ್ಡ ಹಗರಣ ಮಾಡಿದ ಕುಖ್ಯಾತಿಗೆ ಒಳಗಾಗಿದ್ದಾರೆ. ಕಂಪನಿಗೆ ಸೇರಿದ್ದ 11 ಬಿಲಿಯನ್ ಡಾಲರ್ ಹಣದ ಅವ್ಯವಹಾರದಲ್ಲಿ ಇವರು ಭಾಗಿಯಾಗಿದ್ದರು. ಅವರಿಗೆ ನ್ಯಾಯಾಲಯ 25 ವರ್ಷಗಳ ಶಿಕ್ಷೆ ವಿಧಿಸಿದೆ. ಇದು ಕಾರ್ಪೋರೇಟ್ ಕಂಪನಿಗಳ ವೈಟ್ ಕಾಲರ್ ಕ್ರಿಮಿನಲ್ ಮುಖ್ಯಸ್ಥರು ಎದುರಿಸುತ್ತಿರುವ ಅತಿದೊಡ್ಡ ಶಿಕ್ಷೆಯಾಗಿದೆ.

ಅತ್ಯಂತ ಶ್ರೀಮಂತ ವ್ಯಕ್ತಿ ಎಂದು 1999ರಲ್ಲಿ ಎಬ್ಬರ್ಸ್ ಫೋರ್ಬ್ಸ್ ಪತ್ರಿಕೆ ವರದಿ ಮಾಡಿತ್ತು. 1980ರಲ್ಲಿ ಕಂಪನಿ ಆರಂಭಿಸಿ ಕೇವಲ 17 ವರ್ಷಗಳಲ್ಲಿ ಬೃಹತ್ ಪ್ರಮಾಣದಲ್ಲಿ ಬೆಳೆದು ನಿಂತಿದ್ದ ಎಬ್ಬರ್ ಅವರನ್ನು ಪತ್ರಿಕೆ ಪ್ರಶಂಸಿಸಿತ್ತು. 2005 ರಲ್ಲಿ ಎಬ್ಬರ್ ಮಾಡಿದ ಹರಗಣದಿಂದ ವರ್ಲ್ಡ್ ಕಾಂ ದಿವಾಳಿ ಅಂಚಿಗೆ ತಲುಪಿತು.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X