ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾರಿಗೆ ಸಚಿವಾಲಯದಿಂದ ಭಾರಿ ಅವ್ಯವಹಾರ ?

By Staff
|
Google Oneindia Kannada News

Ashok R
ಬೆಂಗಳೂರು, ಜು. 28 : ಇತ್ತೀಚೆಗೆ ಬೆಳಕಿಗೆ ಬಂದ ಕೆ ಎಚ್ ಬಿ ಭೂಹಗರಣದ ಮಾದರಿಯಲ್ಲೇ ಸಾರಿಗೆ ಸಚಿವಾಲಯದಿಂದ ಸುಮಾರು 400 ಕೋಟಿ ರೂಪಾಯಿಗೂ ಹೆಚ್ಚಿನ ಮೊತ್ತದ ಭಾರಿ ಅವ್ಯವಹಾರ ಬೆಳಕಿಗೆ ಬಂದಿದೆ. ಸಾರಿಗೆ ಸಚಿವ ಆರ್ ಅಶೋಕ್ ಕೂಡ ಈ ಅವ್ಯವಹಾರದಲ್ಲಿ ಭಾಗಿಯಾಗಿದ್ದಾರೆನ್ನುವ ಮಾತು ಕೇಳಿಬರುತ್ತಿದೆ. ವಾಹನಗಳಿಗೆ ಏಕರೂಪದ ಭದ್ರತಾ ನೋಂದಣಿ ಫಲಕ ಅಳವಡಿಸುವ ಸಂಬಂಧ ಖಾಸಗಿ ಕಂಪನಿಗೆ ನೀಡಿದ ಗುತ್ತಿಗೆಯಲ್ಲಿ ಈ ಅವ್ಯವಹಾರ ನಡೆದಿದೆ.

ನಂಬರ್ ಪ್ಲೇಟ್ ಪೂರೈಸುವ ಸಂಬಂಧ ಮುಂಬೈ ಮೂಲದ ಶಿಮ್ ನಿತ್ ಉಚ್ ಹೆಸರಿನ ಕಂಪನಿಗೆ 15 ವರ್ಷಗಳ ಅವಧಿಗೆ ಗುತ್ತಿಗೆ ನೀಡಲಾಗಿದ್ದು, ಈ ಹೊಸ ಆದೇಶದ ಪ್ರಕಾರ ನಂಬರ್ ಪ್ಲೇಟ್ ಒದಗಿಸಲು ದ್ವಿಚಕ್ರ, ತ್ರಿಚಕ್ರ ಮತ್ತು ನಾಲ್ಕು ಚಕ್ರಗಳ ವಾಹನಗಳಿಗೆ ಪ್ರತ್ಯೇಕ ದರ ನಿಗದಿಪಡಿಸಲಾಗಿದೆ. ಸಾರ್ವಜನಿಕರು ಹೊಸ ನಿಯಮದ ಪ್ರಕಾರ ನಿಗದಿಪಡಿಸಿರುವ ಹಣ ನೀಡಿ ತಮ್ಮ ವಾಹನಗಳಿಗೆ ನಂಬರ್ ಪ್ಲೇಟ್ ಅಳವಡಿಸಿಕೊಳ್ಳುವುದು ಕಡ್ಡಾಯ.

ಕೇಂದ್ರ ಸರಕಾರದ ಆದೇಶದಂತೆ ರಾಜ್ಯದಲ್ಲಿಯೂ ಏಕರೂಪ ನಂಬರ್ ಪ್ಲೇಟ್ ಅಳವಡಿಸಲು ಸರಕಾರ ಕ್ರಮ ತೆಗೆದುಕೊಂಡಿದೆ. ರಾಜ್ಯದಲ್ಲಿ ಒಟ್ಟು ಅಂದಾಜು 78.51 ಲಕ್ಷ ನೊಂದಾಯಿತ ವಾಹನಗಳಿವೆ. ರಾಜ್ಯದಲ್ಲಿ ದ್ವಿಚಕ್ರ ವಾಹನಗಳಿಗೆ ರೂಪಾಯಿ 550, ತ್ರಿಚಕ್ರ ವಾಹನಗಳಿಗೆ 650 ಮತ್ತು ನಾಲ್ಕು ಚಕ್ರ ವಾಹನಗಳಿಗೆ 1200 ರುಪಾಯಿ ಮೊತ್ತವನ್ನು ಸರಕಾರ ನಿಗದಿಪಡಿಸಿದೆ.

ಬಿಡ್ ನಿಯಮ ಪಾಲಿಸದೆ ಸರಕಾರ ಶಿಮ್ ನಿತ್ ಕಂಪನಿ ಗೆ ಗುತ್ತಿಗೆ ನೀಡಿದೆ. ಟೆಂಡರ್ ನಿಯಮದ ಪ್ರಕಾರ ಗುತ್ತಿಗೆದಾರ ಕನಿಷ್ಠ ನಾಲ್ಕು ದೇಶಗಳಲ್ಲಿ ವಾಹನಗಳಿಗೆ ನಂಬರ್ ಪ್ಲೇಟ್ ಸರಬರಾಜು ಮಾಡಿರುವ ಅನುಭವ ಹೊಂದಿರಬೇಕು. ಆದರೆ ಈ ಸಂಸ್ಥೆ ನೀಡಿರುವ ನಾಲ್ಕು ದೇಶಗಳ ಹೆಸರಿನಲ್ಲಿ ಸುಳ್ಳುಮಾಹಿತಿ ನೀಡಿದ್ದು ಬೆಳಕಿಗೆ ಬಂದಿದೆ. ಇದೆ ರೀತಿ ರಾಜಸ್ಥಾನ್ ಸರಕಾರ ಕೂಡ ಈ ಕಂಪನಿ ಗೆ ಗುತ್ತಿಗೆ ನೀಡಿತ್ತು. ಆದರೆ ಸುಳ್ಳು ಮಾಹಿತಿಯ ಆರೋಪ ಬಂದ ಹಿನ್ನೆಲೆಯಲ್ಲಿ ಕಂಪನಿಗೆ ನೀಡಿದ್ದ ಒಪ್ಪಂದವನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿತ್ತು ಎಂದು ಮಂಗಳವಾರದ ವಿಜಯ ಕರ್ನಾಟಕ ಸಂಚಿಕೆ ಪ್ರಕಟವಾಗಿದೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X