ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಜರಾತ : ಗುಜಕೋಕಾ ಕಾಯ್ದೆಗೆ ಅಂಗೀಕಾರ

By Staff
|
Google Oneindia Kannada News

ಅಹಮದಾಬಾದ್, ಜು. 28 : ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ ಮಾರ್ಪಾಡಿಗೆ ರಾಷ್ಟ್ರಪತಿಗಳು ನೀಡಿದ್ದ ಸಲಹೆ ಸೂಚನೆಗಳನ್ನು ದಿಕ್ಕರಿಸಿ ಯಾವುದೇ ಬದಲಾವಣೆಗಳನ್ನು ಮಾಡದೆ ಇಂದು ಗುಜರಾತ್ ಸರಕಾರ ವಿಧಾನಸಭೆಯಲ್ಲಿ ಸರ್ವನುಮತದಿಂದ ಕಾಯ್ದೆಯನ್ನು ಅಂಗೀಕರಿಸಿತು. ಕರ್ನಾಟಕದ ಕೋಕಾ ಮತ್ತು ಮಹಾರಾಷ್ಟ್ರದಲ್ಲಿರುವ ಮೋಕಾ ಕಾಯ್ದೆಯಂತೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಗುಜಕೋಕಾ (GUJCOC) ಕಾಯ್ದೆಗೆ ಹಸಿರು ನಿಶಾನೆ ತೋರಿಸಿದ್ದಾರೆ.

2004ರಲ್ಲಿ ಈ ಕಾಯ್ದೆ ಅಂಗೀಕರಿಸಲು ಅನುಮತಿ ನೀಡಬೇಕು ಎಂದು ಗುಜರಾತ್ ಸರಕಾರ ರಾಷ್ಟ್ರಪತಿಗಳಿಗೆ ಮನವಿ ಮಾಡಿತ್ತು. ಆದರೆ, ಅಂದಿನ ರಾಷ್ಟ್ರಪತಿಗಳು ಕೇಂದ್ರ ಸರಕಾರದ ಸೂಚನೆ ಮೇರೆಗೆ ಕಾಯ್ದೆಯಲ್ಲಿ ಕೆಲ ತಿದ್ದುಪಡಿ ಆಗಲೇಬೇಕು ಎಂದು ಅದನ್ನು ವಾಪಸ್ಸು ಕಳುಹಿಸಿದ್ದರು. ರಾಷ್ಟ್ರಪತಿಗಳು ಕಾಯ್ದೆಯಲ್ಲಿ ಕೆಲ ಬದಲಾವಣೆಗಳು ಆಗಬೇಕು ಎಂಬ ಸೂಚನೆಯನ್ನು ಗುಜರಾತ ಸರಕಾರ ಸ್ಪಷ್ಟವಾಗಿ ತಳ್ಳಿಹಾಕಿತ್ತು. ಇದೀಗ ಮತ್ತೆ ಎರಡನೇ ಬಾರಿಗೆ ಗುಜಕೋಕಾ ಕಾಯ್ದೆ ಯಾವುದೇ ಬದಲಾವಣೆ ಕಾಣದೇ ರಾಷ್ಟ್ರಪತಿಗಳ ಅನುಮತಿ ಪಡೆಯಲು ರಾಷ್ಟ್ರಪತಿ ಭವನ ತಲುಪಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಸರಕಾದ ವಕ್ತಾರ ಜಯನಾರಾಯಣ ವ್ಯಾಸ್, ರಾಷ್ಟ್ರಪತಿಗಳು ನೀಡಿರುವ ಸೂಚನೆ ಮೇರೆಗೆ ಕಾಯ್ದೆಯಲ್ಲಿನ ಮೂರು ಬದಲಾವಣೆ ಮಾಡಿದರೆ, ಕಾಯ್ದೆ ಹಲ್ಲು ಕಿತ್ತು ಹುಲಿಯಂತಾಗುತ್ತದೆ. ಇದರಿಂದ ಯಾವುದೇ ಪ್ರಯೋಜನವೂ ಆಗುವುದಿಲ್ಲ. ಈ ಹಿನ್ನೆಲೆಯಲ್ಲಿ ಇಂದು ನಡೆದ ಅಧಿವೇಶನದಲ್ಲಿ ಸರ್ವಾನುಮತದಿಂದ ಗುಜಕೋಕಾ ಕಾಯ್ದೆಯನ್ನು ಅಂಗೀಕರಿಸಲಾಗಿದ್ದು, ಶೀಘ್ರ ರಾಷ್ಟ್ರಪತಿ ಭವನಕ್ಕೆ ಕಳುಹಿಸಲಾಗುವುದು ಎಂದು ಹೇಳಿದರು.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X