ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು ಸ್ಫೋಟದ ಆರೋಪಿಯ ತಪ್ಪೊಪ್ಪಿಗೆ

By Staff
|
Google Oneindia Kannada News

Bangalore serial bomb blast
ಬೆಂಗಳೂರು, ಜು. 27 : ಕಳೆದ ವರ್ಷ ಜುಲೈ 25 ರಂದು ನಡೆದ ಬೆಂಗಳೂರು ಸರಣಿ ಬಾಂಬ್ ಸ್ಫೋಟ ಪ್ರಕರಣದ ಆರೋಪಿಗಳು ರಾಜಧಾನಿಯ 150 ಕಡೆಗಳಲ್ಲಿ ಫ್ಲವರ್ ಬಾಂಬ್ ಅಳವಡಿಸಲು ಸಂಚು ನಡೆಸಿದ್ದರು. ಇಂಥದೊಂದು ಭಯಾನಕ ಸಂಗತಿಯನ್ನು ಪ್ರಕರಣದ ಪ್ರಮುಖ ಆರೋಪಿ ಈದಪ್ಪನ್ ತೋಡಿಕಾ ಜೈನುದ್ದೀನ್ ಅಲಿಯಾಸ್ ಅಬ್ದುಲ್ ಸತ್ತಾರ್ ಅಲಿ ಯಾಸ್ ಸಲೀಮ್, ಬೆಂಗಳೂರು ಎಟಿಎಸ್ ಅಧಿಕಾರಿಗಳ ಎದುರು ತಪ್ಪೊಪ್ಪಿಗೆಯಲ್ಲಿ ಬಹಿರಂಗಪಡಿಸಿದ್ದಾನೆ.

ಆದರೆ ಬೆಂಗಳೂರಿಗರು ಅದೃಷ್ಟವಂಥರು ! ಕೇರಳದಿಂದ ಇಂಥ ಫ್ಲವರ್ ಬಾಂಬ್ ಬೋರ್ಡ್‌ಗಳನ್ನು ನಗರಕ್ಕೆ ತಂದು, ಅವುಗಳನ್ನು ಉದ್ದೇಶಿತ ಜಾಗದಲ್ಲಿ ಜೋಡಿಸಿ ಏಕಕಾಲಕ್ಕೆ ಸ್ಫೋಟ ನಡೆಸುವುದಕ್ಕೆ ತಂಡಕ್ಕೆ ಸಾಕಷ್ಟು ಸದಸ್ಯರು ಲಭ್ಯರಾಗಲಿಲ್ಲ. ಹೀಗಾಗಿ 20 ಬಾಂಬ್ ಮಾತ್ರ ನಗರಕ್ಕೆ ತರಲಾಗಿತ್ತು. ಆತನ ತಪ್ಪೊಪ್ಪಿಗೆ ಹೇಳಿಕೆ ಪ್ರಕಾರ, ಬೆಂಗಳೂರು, ಅಹಮದಾಬಾದ್ ಹಾಗೂ ಸೂರತ್ ಸರಣಿ ಬಾಂಬ್ ಸ್ಫೋಟದ ಮೂಲ ಕೇರಳ. ರಿಯಾಜ್ ಭಟ್ಕಳ್ ಇದೆಲ್ಲದಕ್ಕೆ ಆರ್ಥಿಕ ಹಾಗೂ ಬೌದ್ಧಿಕ ಸಹಕಾರ ನೀಡಿದ್ದಾನೆ.

2008 ಜೂನ್ ತಿಂಗಳಲ್ಲಿ ಕೇರಳದ ಕೊಟ್ಟಾಯ ಪುರಂ ರೈಲ್ವೆ ಸ್ಟೇಷನ್‌ನಲ್ಲಿ ಅಬ್ದುಲ್ ಸತ್ತಾರ್‌ನನ್ನು ಭೇಟಿಯಾದ ರಿಯಾಜ್ ಭಟ್ಕಳ್ 50 ಪ್ರಬಲ ಬಾಂಬ್ ತಯಾರಿಸಲು ಆದೇಶ ನೀಡಿದ್ದ. ಆದರೆ ಬೇರೆ ಕೆಲಸಗಳು ಇದ್ದುದರಿಂದ ಸತ್ತಾರ್ ಇದಕ್ಕೆ ನಿರಾಕರಿಸಿದ. ಕೊನೆಗೆ 40 ಬಾಂಬ್ ಬೋರ್ಡ್ ತಯಾರಿಕೆಗೆ ಒಪ್ಪಿಕೊಂಡ. ಇದಕ್ಕಾಗಿ ಆತ ಪಡೆದದ್ದು ಕೇವಲ 10 ಸಾವಿರ ರೂ .!

2008 ರಲ್ಲಿ ಬೆಂಗಳೂರಿಗೆ ಬಂದಿದ್ದ ಸರ್ಫ್‌ರಾಜ್ ನವಾಜ್ ಸಮೀಕ್ಷೆ ನಡೆಸಿ ವಿಧಾನಸೌಧ, ವಿಕಾಸ ಸೌಧ ಹಾಗೂ ಐಟಿ ಬಿಟಿ ಕಂಪನಿಗಳಿಗೆ ವ್ಯಾಪಕ ಭದ್ರತೆ ಒದಗಿಸಿರುವುದನ್ನು ಮನಗಂಡ. ಹೀಗಾಗಿ ಹಲಸೂರು ರೋಡ್, ಮೈಸೂರು ರಸ್ತೆ, ಸಿಟಿ ಮಾರುಕಟ್ಟೆ, ಕಲಾಸಿಪಾಳ್ಯ ಹಾಗೂ ಶಿವಾಜಿನಗರದಲ್ಲಿ ಬಾಂಬ್ ಸ್ಫೋಟಿಸಲು ನಿರ್ಧರಿಸಿದ. ಇಲ್ಲಿ ಬಾಂಬ್ ಸ್ಫೋಟಗೊಂಡರೆ ಮುಸ್ಲಿಮರು ತೊಂದರೆಗೆ ಒಳಗಾಗುತ್ತಾರೆ. ಇದರಿಂದ ಕೋಮು ಗಲಭೆ ಸೃಷ್ಟಿಯಾಗುತ್ತದೆ ಎಂಬುದು ಆತನ ಯೋಚನೆಯಾಗಿತ್ತು. ಈ ಯೋಜನೆಗೆ ನಾಸೀರ್ ಎಂಬಾತ ಶುಂಠಿಕೊಪ್ಪದಲ್ಲಿ ತರಬೇತಿ ಕ್ಯಾಂಪ್ ಆಯೋಜಿಸಿದ್ದ. 150 ಕಡೆ ಬಾಂಬ್ ಇಡಲು ಸಂಚ ರೂಪಿಸಲಾಗಿತ್ತು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X