ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾರ್ಗಿಲ್ ಕಲಿಗಳಿಗೆ ದೇಶದಾದ್ಯಂತ ನಮನ

By Staff
|
Google Oneindia Kannada News

Operationa vijay
ನವದೆಹಲಿ, ಜು. 26 : ಕಾರ್ಗಿಲ್ ವಿಜಯ ಬಿಜೆಪಿ ವಿಜಯವೇ ಹೊರತು ಭಾರತದ ವಿಜಯವಲ್ಲ ಎನ್ನುವ ಮೂಲಕ ದೇಶಪ್ರೇಮಿಗಳ ಟೀಕೆ ಎದುರಿಸಿದ್ದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಕೊನೆಗೂ ವಿಜಯೋತ್ಸವ ಆಚರಿಸಲು ಮುಂದಾಗಿದೆ. ಭಾರತದ ವಿಜಯಕ್ಕೆ 10 ವರ್ಷ ತುಂಬಿದ ಈ ಸಂಭ್ರಮದ ಗಳಿಗೆಯಲ್ಲಿ ದೇಶಾದ್ಯಂತ ಸಂತಸ ಮನೆಮಾಡಿದೆ. ವೀರಯೋಧರಿಗೆ ನಮಿಸಲು ವಿವಿಧ ಕಾರ್ಯಕ್ರಮಗಳು ಶುರುವಾಗಿವೆ.

ಪ್ರಧಾನಿ ಮನಮೋಹನ್ ಸಿಂಗ್ ಅವರು ಕಾರ್ಗಿಲ್ ಯುದ್ಧದಲ್ಲಿ ವೀರಮರಣ ಅಪ್ಪಿದ ಅಮರ್ ಜವಾನ್ ಜ್ಯೋತಿಗೆ ತೆರಳಿ ಯೋಧರ ಸ್ಮಾರಕಕ್ಕೆ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಸುರೇಶ್ ಮೆಹ್ತಾ, ಸೇನಾಪಡೆಯ ಮುಖ್ಯಸ್ಥ ಜನರಲ್ ದೀಪಕ್ ಕಪೂರ್ ಮತ್ತು ವಾಯುಪಡೆಯ ಏರ್ ಚೀಫ್ ಮಾರ್ಶಲ್ ಪಿ ವಿ ನಾಯ್ಕ್ ಉಪಸ್ಥಿತರಿದ್ದರು.

1999 ಜುಲೈ 26 ರಂದು ಕಾರ್ಗಿಲ್ ನಲ್ಲಿ ಭಾರತದ ಯೋಧರು ಪಾಕಿಸ್ತಾನವನ್ನು ಮಣಿಸಿ ವಿಜಯಧ್ವಜ ಹಾರಿಸಿದ್ದರು. ಆಜರ ನೆನಪಿಗಾಗಿ ಜುಲೈ 26 ರಂದು ಕಾರ್ಗಿಲ್ ದಿನವೆಂದು ಆಚರಿಸಲಾಗುತ್ತಿದೆ. ಯುದ್ಧದಲ್ಲಿ ಒಟ್ಟು 533 ಯೋಧರು, ಸೇನಾಧಿಕಾರಿಗಳು ವೀರಮರಣವನ್ನಪ್ಪಿದರು. ಅವರಲ್ಲಿ 86 ಮಂದಿಗೆ ಮರಣೋತ್ತರವಾಗಿ ಶೌರ್ಯ ಪ್ರಶಸ್ತಿ ಲಭಿಸಿದೆ. ಕ್ಯಾಪ್ಟನ್ ವಿಕ್ರಮ್ ಬಾತ್ರಾ, ಕ್ಯಾಪ್ಟನ್ ಪಾಂಡೆ, ಸಂಜಯ್ ಕುಮಾರ್, ಜೋಗಿಂದರ್ ಯಾದವ್ ಹುತಾತ್ಮರಾದವರಲ್ಲಿ ಪ್ರಮುಖರು. ಹುತಾತ್ನರಾದ ಯೋಧರಿಗಾಗಿ ಕಾರ್ಗಿಲ್ ನಲ್ಲಿ ಸ್ಮಾಕರ ನಿರ್ಮಿಸಲಾಗಿದ್ದು, ಶನಿವಾರ ಉದ್ಘಾಟನೆಗೊಂಡಿದೆ. 74 ದಿನಗಳ ಕಾಲ ಯುದ್ದ ನಡೆದಿತ್ತು.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X