ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಣ್ವಸ್ತ್ರ ಸಬ್ ಮರೈನ್ ಲೋಕಾರ್ಪಣೆ

By Staff
|
Google Oneindia Kannada News

ವಿಶಾಖಪಟ್ಟಣ, ಜು. 26 : ಭಾರತದ ಹಡಗು ನಿರ್ಮಾಣ ತಂತ್ರಜ್ಞಾನ ಹೊಸ ಮೈಲಿಗಲ್ಲು ದಾಖಲಿಸಿತು. ಸ್ವದೇಶಿ ನಿರ್ಮಿತ ಅಣ್ವಸ್ತ್ರ ದಾಳಿ ಸಾಮರ್ಥ್ಯದ ಜಲಾಂತರ್ಗಾಮಿ ನೌಕೆ ಐಎನ್ಎಸ್ ಅರಿಹಂತ ನೌಕೆಯನ್ನು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಹಾಗೂ ಅವರ ಪತ್ನಿ ಗುರುಶರಣ್ ಕೌರ್ ಅವರು ಲೋಕಾರ್ಪಣೆ ಮಾಡಿದರು. ಇದರೊಂದಿಗೆ ಪರಮಾಣು ಸಾಮರ್ಥ್ಯದ ಸಬ್ ಮರೈನ್ ಅನ್ನು ಸ್ವದೇಶಿದಲ್ಲೇ ನಿರ್ಮಿಸುವ ಸಾಮರ್ಥ್ಯ ಹೊಂದಿರುವ ವಿಶ್ವದ 6ನೇ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.

ಸದ್ಯ ನೆಲದ ಮೇಲಿರುವ ಈ ನೌಕೆ ಭಾನುವಾರ ಸಮುದ್ರಕ್ಕೆ ಇಳಿಯಲಿದೆ. ಮುಂದಿನ ಎರಡು ವರ್ಷ ಪ್ರಾಯೋಗಿಕವಾಗಿ ಕಾರ್ಯನಿರ್ವಹಿಸಲಿದೆ. 6000 ಟನ್ ತೂಕ ಹೊಂದಿದ್ದು, 105 ಮೀ ಉದ್ಧ, 15 ಮೀ ಅಗಲ, ಸುಮಾರು 300 ಮೀ ಆಳಕ್ಕೆ ಇಳಿಯಲಿದೆ. ಇದಕ್ಕೆ ವೆಚ್ಚವಾಗಿರುವ ಒಟ್ಟು ಮೊತ್ತ ಸುಮಾರು 4830 ಕೋಟಿ ರುಪಾಯಿಗಳು ಎಂದು ಅಂದಾಜಿಸಲಾಗಿದೆ. 10 ವರ್ಷಗಳ ಹಿಂದೆ ಭಾರತ ಪಾಕಿಸ್ತಾನದ ಮೇಲೆ ಕಾರ್ಗಿಲ್ ಯುದ್ಧದಲ್ಲಿ ದಿಗ್ವಿಜಯ ಸಾಧಿಸಿದ ಮಹತ್ವದ ದಿನದಂದು ಈ ಅಣ್ವಸ್ತ್ರ ಸಬ್ ಮರೈನ್ ಬಿಡುಗಡೆ ಮಾಡಲಾಗಿದೆ.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X