ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಾವು ಹಿಡಿಯುವ ಮಾಗಡಿಯ ದೇವರ ಪೂಜಾರಿ

By * ಪೂರ್ಣಚಂದ್ರ ಮಾಗಡಿ
|
Google Oneindia Kannada News

Snake catcher Srinivasa Rangan
ಮಾಗಡಿ, ಜು. 25 : ಕಲ್ಲುನಾಗರ ಕಂಡರೆ ಹಾಲೆರೆಯುವ ಮಂದಿ ದಿಟ ನಾಗರ ಕಂಡರೆ ಬಡಿಗೆಯಲ್ಲಿ ಬಡಿಯುವ ಮಂದಿಯೇ ಹೆಚ್ಚಾಗಿದ್ದಾರೆ. ಈ ನಡುವೆ ಉರಗಗಳ ರಕ್ಷಣೆಗೆ ಹಲವಾರು ಮಂದಿ ಉರಗ ಪ್ರಿಯರಿದ್ದಾರೆ. ವಿಷಕಾರಿಯಾದ ಹಲವಾರು ಬಗೆಯ ಹಾವುಗಳನ್ನು ಜಾಗರೂಕತೆಯಿಂದ ಹಿಡಿದು ಕಾಡುಪ್ರದೇಶಗಳಿಗೆ ಬಿಟ್ಟು ಬರುವ ಅನೇಕ ಮಂದಿ ಇದ್ದಾರೆ.

ಅನೇಕ ಉರಗ ಪ್ರಿಯರ ಮಧ್ಯೆ ಮಾಗಡಿ ಪಟ್ಟಣದ ತಿರುಮಲೆಯ ಪುರಾಣ ಪ್ರಸಿದ್ದ ಶ್ರೀರಂಗನಾಥಸ್ವಾಮಿ ದೇವಾಲಯದಲ್ಲಿ ಅರ್ಚಕರಾಗಿ ಕೆಲಸನಿರ್ವಹಿಸುತ್ತಿರುವ ಯುವಕ ಶ್ರೀನಿವಾಸ್‌ರಂಗನ್ ಎದ್ದು ಕಾಣುತ್ತಾರೆ. ಉರಗಗಳನ್ನ ರಕ್ಷಣೆ ಕಾರ್ಯವನ್ನು ಅವರು ಶ್ರದ್ಧೆಯಿಂದ ನಿರ್ವಹಿಸುತ್ತಿದ್ದಾರೆ. ಚಿಕ್ಕಂದಿನಿಂದಲೇ ಹಾವುಗಳ ಬಗ್ಗೆ ವಿಶೇಷ ಆಸಕ್ತಿಯಿದ್ದ ಶ್ರೀನಿವಾಸ್‌ರಂಗನ್ ಟೆಲಿವಿಷನ್‌ಗಳಲ್ಲಿ ಬರುತ್ತಿದ್ದ ಹಾವುಗಳನ್ನ ವೀಕ್ಷಿಸಿ ಹಾವುಗಳನ್ನು ಹಿಡಿಯಬೇಕೆಂಬ ಕನಸು ಕಾಣುತ್ತಿದ್ದರು.

ಈ ನಡುವೆ ಚನ್ನಪಟ್ಟಣದ ಸ್ನೇಕ್ ಸೂರಿಯ ಗೆಳೆತನ ಬೆಳೆಸಿಕೊಂಡ ಶ್ರೀನಿವಾಸ್‌ರಂಗನ್ ಹಾವುಗಳನ್ನ ರಕ್ಷಣಾತ್ಮಕವಾಗಿ ಹಿಡಿಯುವದನ್ನು ರೂಢಿ ಮಾಡಿಕೊಂಡರು. ನಂತರ ಮಾಗಡಿ ಪಟ್ಟಣದ ಸುತ್ತಮುತ್ತ ಪ್ರದೇಶಗಳಲ್ಲಿ ವಿವಿಧ ಬಗೆಯ ಹಲವಾರು ವಿಷಪೂರಿತ ಹಾವುಗಳನ್ನು ಹಿಡಿದು ರಕ್ಷಿಸಿ ಮನೆಯ ಮಾಲೀಕರು ನಿಟ್ಟುಸಿರುವ ಬಿಡುವಂತೆ ಮಾಡಿದ್ದಾರೆ. ಮತ್ತು ಉರಗಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಸಾವನದುರ್ಗ ಅರಣ್ಯ ಪ್ರದೇಶದಲ್ಲಿ ಬಿಟ್ಟು ಉರಗಸಂತತಿಯನ್ನ ರಕ್ಷಿಸುವ ಪ್ರಯತ್ನವನ್ನು ನಿರಂತರವಾಗಿ ಮಾಡುತ್ತಿದ್ದಾರೆ.

ರಂಗನ್ ಅವರದ್ದು ದೇವಾಲಯದಲ್ಲಿ ಅರ್ಚಕ ವೃತ್ತಿ. ಸಂಧ್ಯಾವಂದನೆ, ವೇದಮಂತ್ರಗಳನ್ನು ಜಪಿಸುವುದು ನಿತ್ಯ ಕಾಯಕ.ಮಾಗಡಿ ಸುತ್ತಮುತ್ತ ಪ್ರದೇಶಗಳಲ್ಲಿ ಯಾವುದೇ ರೀತಿಯ ಹಾವುಗಳನ್ನ ಕಂಡರೆ ತಕ್ಷಣ ಶ್ರೀನಿವಾಸ್‌ರಂಗನ್‌ರ ಫೋನ್ ರಿಂಗಣಿಸುತ್ತದೆ. ಸ್ಥಳಕ್ಕೆ ತೆರಳಿ ಮನೆಮಂದಿಗೆಲ್ಲ ಸಮಾಧಾನವೇಳಿ ಹಾವುಗಳ ಬಗ್ಗೆ ತಿಳುವಳಿಕೆ ಮೂಡಿಸುವ ಪ್ರಯತ್ನ ಮಾಡಿ ನಂತರ ಮನೆಯಲ್ಲಿ ಸೇರಿಕೊಂಡಿರುವ "ನಾಗ"ರಾಜರನನ್ನು ಸೆರೆಹಿಡಿದು ಮನೆಮಂದಿಗೆಲ್ಲ ನೆಮ್ಮದಿ ನೀಡುತ್ತಿದ್ದಾರೆ. ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಉರಗಗಳ ರಕ್ಷಣೆಯಲ್ಲಿ ತೊಡಗಿರುವ ಶ್ರೀನಿವಾಸ್‌ರಂಗನ್ ಹಾವುಗಳ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ.

ತಿರುಮಲೆ ರಂಗನಾಥಸ್ವಾಮಿದೇವಾಲಯದಲ್ಲಿ ಅರ್ಚಕವೃತ್ತಿಯನ್ನೆ ಅವಲಂಬಿಸಿರುವ ಶ್ರೀನಿವಾಸ್‌ರಂಗನ್‌ರವರ ಕುಟುಂಬದ ಸದಸ್ಯರಾರೂ ಹಾವು ಹಿಡಿಯುವ ಸಾಹಸ ಇಲ್ಲಿಯವರೆಗೂ ಮಾಡಿಲ್ಲ. ಆದರೆ ಶ್ರೀನಿವಾಸ್‌ರಂಗನ್ ಮಾತ್ರ ಹಾವನ್ನು ಯಾವುದೇ ಭಯ ಅಳುಕಿಲ್ಲದೆ ನಿರಾತಂಕವಾಗಿ ಹಿಡಿದು ರಕ್ಷಿಸುತ್ತಿದ್ದಾರೆ. ಇತ್ತೀಚಿಗೆ ಅತಿ ವಿಷಕಾರಿಯಾದ "ಎಳೆನಾಗರ"ಹಾವು, ನಾಗರಹಾವು, ಹಸಿರಾವು, ಮುಂತಾದ ಬಗೆಯ ವಿಷಕಾರಿಯಾದ ಹಾವುಗಳನ್ನು ಹಿಡಿದು ರಕ್ಷಿಸಿದ್ದಾರೆ. ಹಾವುಗಳಿಗೆ ತೊಂದರೆ ಕೊಡದೆ ರಕ್ಷಣೆ ಮಾಡಬೇಕೆನ್ನುವುದು ಶ್ರೀನಿವಾಸ್‌ರಂಗನ್ ಅವರ ಒಲವು-ನಿಲವು.

ಶ್ರೀನಿವಾಸ್‌ರಂಗನ್‌ರವರ ಈ ಉರಗಪ್ರೇಮಕ್ಕೆ ತಂದೆ ಗೋವಿಂದರಾಜು, ತಾಯಿ ವತ್ಸಲಾರಾಜನ್, ಸಹೋದರ ಕೀರ್ತಿ ಮತ್ತು ಸ್ನೇಹಿತರುಗಳು ಪ್ರೋತ್ಸಾಹ ನೀಡುತ್ತಿದ್ದಾರೆ. ಶ್ರೀನಿವಾಸ್‌ರಂಗನ್‌ರವರು ಕೂಡ ಅರ್ಚಕ ವೃತ್ತಿಯ ನಂತರ ಉರಗಗಳ ಬಗ್ಗೆ ವಿಶೇಷ ಪುಸ್ತಕಗಳನ್ನ ಓದಿ ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಅದೇ ರೀತಿ ನಿಮ್ಮ ಮನೆಯಲ್ಲಿ ಅಥವಾ ಸುತ್ತಮುತ್ತಲಿನ ಪ್ರದೇಶದಲ್ಲಿ ಯಾವುದೇ ಹಾವುಗಳು ಕಂಡರೂ ತಕ್ಷಣ ಮೊಬೈಲ್ ನಂಬರ್ 94481 37074ಸಂಖ್ಯೆಗೆ ಕರೆ ಮಾಡಬೇಕೆಂದು ಶ್ರೀನಿವಾಸ್‌ರಂಗನ್ ಮನವಿ ಮಾಡಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X