ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿವಮೊಗ್ಗದಲ್ಲಿ ಕಣ್ಣಿನ ಉಚಿತ ಶಸ್ತ್ರಚಿಕಿತ್ಸಾ ಶಿಬಿರ

By Staff
|
Google Oneindia Kannada News

ಶಿವಮೊಗ್ಗ, ಜು. 24 : ಜನಹಿತ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಂಸ್ಥೆಯು ಜು.25ರಿಂದ 27ರವರೆಗೆ 3 ದಿನಗಳ ಕಾಲ ಬೃಹತ್ ಉಚಿತ ಕಣ್ಣಿನ ಶಸ್ತ್ರ ಚಿಕಿತ್ಸಾ ಮತ್ತು ಮಸೂರ ಅಳವಡಿಕೆ ಶಿಬಿರವನ್ನು ನಗರದ ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಹಮ್ಮಿಕೊಂಡಿದೆ.

ಜಿಲ್ಲಾ ಅಂಧತ್ವ ನಿವಾರಣಾ ಸಮಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸಂಚಾರಿ ನೇತ್ರ ಚಿಕಿತ್ಸಾ ಘಟಕ, ಮೆಗ್ಗಾನ್ ಆಸ್ಪತ್ರೆ, ಜಿಲ್ಲಾ ಸರ್ಜನ್‌ರವರ ಸಹಕಾರದೊಂದಿಗೆ ಈ ಶಿಬರವನ್ನು ಹಮ್ಮಿಕೊಂಡಿದ್ದು, ತಜ್ಞ ವೈದ್ಯರ ತಂಡದಿಂದ ನೇತ್ರ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸೆ ನಡೆಯಲಿದೆ. ಜ.25ರ ಶನಿವಾರ ಬೆಳಿಗ್ಗೆ 9ರಿಂದ ನೇತ್ರ ತಪಾಸಣೆ ನಡೆಯಲಿದ್ದು, ಜು.26ರ ಭಾನುವಾರದಂದು ಉಚಿತ ಶಸ್ತ್ರ ಚಿಕಿತ್ಸೆ ಮತ್ತು ಮಸೂರ ಅಳವಡಿಕೆ ನಡೆಯಲಿದೆ.

ಶಸ್ತ್ರ ಚಿಕಿತ್ಸೆಗೆ ಆಯ್ಕೆಯಾದವರು ಅಂದು ಒಬ್ಬ ಸಹಾಯಕರೊಂದಿಗೆ ಸ್ಥಳದಲ್ಲಿ ಹಾಜರಿರಬೇಕು. ತಮಗೆ ಅಗತ್ಯವಾದ ಹಾಸಿಗೆ, ಹೊದಿಕೆ, ಬಟ್ಟೆ, ಊಟದ ತಟ್ಟೆ, ಲೋಟ, ತಂಬಿಗೆ ಇತ್ಯಾದಿಗಳನ್ನು ತರಬೇಕು. ರೋಗಿ ಮತ್ತು ಒಬ್ಬ ಸಹಾಯಕರಿಗೆ ಮಾತ್ರ ಉಚಿತ ಊಟ, ಉಪಹಾರ ನೀಡಲಾಗುವುದು. ಶಸ್ತ್ರ ಚಿಕಿತ್ಸೆ ಆದವರಿಗೆ ಉಚಿತ ಔಷಧಿ ನೀಡಲಾಗುವುದು. ಶಸ್ತ್ರ ಚಿಕಿತ್ಸೆಗೆ ಅರ್ಹರಾದವರು ಯಾವುದೇ ಖಾಯಿಲೆಗಳಿದ್ದಲ್ಲಿ ಮುಂಚಿತವಾಗಿ ವೈದ್ಯರ ಗಮನಕ್ಕೆ ತರಬೇಕು.

ಹೆಚ್ಚಿನ ಮಾಹಿತಿಗಾಗಿ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಘಟಕ ಅಥವಾ ಜನಹಿತ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಂಸ್ಥೆ 99016 31964ಗೆ ಸಂಪರ್ಕಿಸಲು ಕಾರ್ಯದರ್ಶಿ ಶಿ.ಜು.ಪಾಶ ಕೋರಿದ್ದಾರೆ.

(ದಟ್ಸ್ ಕನ್ನಡ ಜಿಲ್ಲಾ ಸುದ್ದಿ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X