ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆ 4700ರೂ

By ministry of agriculture fixes minsupport price for dry coconut
|
Google Oneindia Kannada News

Raghavendra B Y
ನವದೆಹಲಿ, ಜು. 24: ಕೊಬ್ಬರಿ ಮೇಲಿನ ಕನಿಷ್ಠ ಬೆಂಬಲ ಬೆಲೆಯನ್ನು ಕೇಂದ್ರ ಸರ್ಕಾರವು 2009ರ ಸಾಲಿಗೆ ನಿಗದಿಪಡಿಸಿದ್ದು, ಮಿಲ್ಲಿಂಗ್ ಕೊಬ್ಬರಿಯ ಪ್ರತಿ ಕ್ವಿಂಟಾಲ್‌ಗೆ 4,450 ರೂ.ಗಳು ಮತ್ತು ಬಾಲ್ ಕೊಬ್ಬರಿ ಪ್ರತಿ ಕ್ವಿಂಟಾಲ್‌ಗೆ 4,700 ರೂ.ಗಳನ್ನು ನಿಗದಿ ಪಡಿಸಿದೆ ಎಂದು ಕೇಂದ್ರ ಕೃಷಿ ಸಚಿವ ಶರದ್ ಪವಾರ್ ಅವರು ಲೋಕಸಭೆಗೆ ತಿಳಿಸಿದ್ದಾರೆ.

ಸಂಸದ ಬಿ.ವೈ. ರಾಘವೇಂದ್ರ ಅವರು ಬುಧವಾರ ಕೇಳಿದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ್ದು, ಒಟ್ಟಾರೆ ದೇಶದಲ್ಲಿ 25 ಬಗೆಯ ಬೆಳೆಗಳಿಗೆ ಕೇಂದ್ರ ಸರ್ಕಾರ ಕನಿಷ್ಠ ಬೆಂಬಲ ಬೆಲೆ ಘೋಷಣೆ ಮಾಡಿದೆ. ಎಫ್‌ಎಸಿ ಜಾತಿಯ ಕೊಬ್ಬರಿಯ ಪ್ರತಿ ಕ್ವಿಂಟಾಲ್‌ಗೆ 2008ರಲ್ಲಿ ನಿಗದಿಪಡಿಸಲಾಗಿದ್ದ ಕನಿಷ್ಠ ಬೆಂಬಲ ಬೆಲೆಗಿಂತ ಈ ಬಾರಿ 790 ರೂ.ಗಳಷ್ಟು ಜಾಸ್ತಿ ಬೆಂಬಲ ಬೆಲೆ ನಿಗದಿ ಪಡಿಸಲಾಗಿದೆ ಮತ್ತು 2009ನೇ ಸಾಲಿಗೆ ನಾರು ಸುಲಿದ ತೆಂಗಿನ ಪ್ರತಿ ಕ್ವಿಂಟಾಲ್‌ಗೆ 1200 ರೂ.ಗಳ ಬೆಂಬಲ ಬೆಲೆ ನಿಗದಿಪಡಿಸಲಾಗಿದೆ ಎಂದು ಅವರು ಉತ್ತರದಲ್ಲಿ ತಿಳಿಸಿದ್ದಾರೆ.

ಕೇಂದ್ರ ಸರ್ಕಾರವು ರಾಜ್ಯ ಸರ್ಕಾರ ಮತ್ತು ಕೇಂದ್ರಾಡಳಿತ ಪ್ರದೇಶಗಳ ಮನವಿಯ ಮೇರೆಗೆ ಮಾರುಕಟ್ಟೆ ಮಧ್ಯಸ್ಥಿಕೆ ಯೋಜನೆಯ ಮೂಲಕ ಪ್ಲಾಂಟೇಷನ್ ಬೆಳೆಗಳನ್ನು ಕನಿಷ್ಠ ಬೆಂಬಲ ಬೆಲೆ ನೀಡಿ ಕೊಳ್ಳುತ್ತದೆ. ಕೃಷಿ ಮತ್ತು ತೋಟಗಾರಿಕೆ ಬೆಳೆಗಳನ್ನು, ಅದರಲ್ಲೂ ಬೇಗ ಕೊಳೆತುಹೋಗುವ ಬೆಳೆಗಳನ್ನು ಈ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರ ಕೊಂಡುಕೊಳ್ಳುತ್ತದೆ. ಒಳ್ಳೆಯ ಬೆಳೆ ಬಂದ ಸಂದರ್ಭದಲ್ಲಿ ಬೆಳೆಗಾರರಿಗೆ ನಷ್ಟವಾಗದಿರಲಿ ಎಂಬ ಉದ್ದೇಶದಿಂದ ಈ ರೀತಿಯ ಯೋಜನೆಯಡಿಯಲ್ಲಿ ಬೆಳೆದ ಉತ್ಪನ್ನಗಳನ್ನು ಕೊಂಡುಕೊಳ್ಳಲಾಗುತ್ತದೆ. ಒಂದುವೇಳೆ ಇದರಲ್ಲಿ ಯಾವುದಾದರೂ ನಷ್ಟ ಉಂಟಾದರೆ, ಅದನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು 50-50ಆಧಾರದಲ್ಲಿ (ಪೂರ್ವಾಂಚಲ ರಾಜ್ಯಗಳಿಗೆ 75-25) ಹಂಚಿಕೆ ಮಾಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಕರ್ನಾಟಕ ಸರ್ಕಾರವು ಈ ವರ್ಷ ಮಾಡಿಕೊಂಡ ಮನವಿಯಂತೆ 6 ಸಾವಿರ ಮೆಟ್ರಿಕ್ ಟನ್ ಬಿಳಿ ಅಡಿಕೆ ಮತ್ತು 4 ಸಾವಿರ ಮೆ.ಟನ್ ಕೆಂಪು ಅಡಿಕೆಯನ್ನು ಪ್ರತಿ ಕ್ವಿಂಟಾಲ್‌ಗೆ ಕ್ರಮವಾಗಿ6,900ರೂ.ಗಳು ಮತ್ತು 8,900 ರೂ.ಗಳ ಬೆಲೆಯಲ್ಲಿ ದಿನಾಂಕ 1-03-2009ರಿಂದ 30-06-2009ರ ಅವಧಿಯಲ್ಲಿ ಕೊಂಡುಕೊಳ್ಳಲಾಗಿದೆ ಎಂದು ತಮ್ಮ ಪವಾರ್ ತಿಳಿಸಿದ್ದಾರೆ.

ಕನಿಷ್ಠ ಬೆಂಬಲ ಬೆಲೆ ಯೋಜನೆಯನ್ನು ಭತ್ತ, ಜೋಳ, ಬಾಜ್ರಾ, ಗೋವಿನ ಜೋಳ, ರಾಗಿ, ಗೋಧಿ, ಬಾರ್ಲಿ, ಹೆಸರು, ಅವರೆ, ತೊಗರಿ, ಉದ್ದು, ಹತ್ತಿ, ಶೇಂಗಾ, ಸೆಣಬು, ಸೋಯಾ ಅವರೆ, ಸೂರ್ಯಕಾಂತಿ, ಸ್ಯಾಫ್ ಫ್ಲವರ್, ತಂಬಾಕು, ಕೊಬ್ಬರಿ, ಸಿಪ್ಪೆ ಸುಲಿದ ತೆಂಗು, ಎಳ್ಳು ಸೇರಿದಂತೆ ಒಟ್ಟು 25 ಬೆಳೆಗಳಿಗೆ ಬೆಂಬಲ ಬೆಲೆ ನಿಗದಿ ಪಡಿಸಲಾಗಿದೆ ಎಂದು ಅವರು ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
(ಎಜೆನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X