ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಡೆನ್ ನಾಲ್ಕನೇ ಮಗನ ಹತ್ಯೆ ?

By Staff
|
Google Oneindia Kannada News

Bin Laden
ವಾಷಿಂಗ್ ಟನ್, ಜು. 23 : ಜಾಗತಿಕ ಮಟ್ಟದ ಭಯೋತ್ಪಾದಕ ಒಸಮಾ ಬಿನ್ ಲಾಡೆನ್ ನ ನಾಲ್ಕನೇ ಮಗನನ್ನು ಪಾಕಿಸ್ತಾನದಲ್ಲಿ ಅಮೆರಿಕದ ಸೇನಾಪಡೆ ನಡೆಸಿದ ಡ್ರೋನ್ ಕಾರ್ಯಾಚರಣೆಯಲ್ಲಿ ಕೊಂದು ಹಾಕಿದೆ ಎಂದು ಅಮೆರಿಕದ ಬಾನುಲಿಯಲ್ಲಿ ವರದಿ ಬಿತ್ತರಿಸತೊಡಗಿದೆ. ಅಮೆರಿಕದ ಗುಪ್ತಚರ ಇಲಾಖೆಯ ಅಧಿಕಾರಿಗಳು ರಾಷ್ಟ್ರೀಯ ರೇಡಿಯೋ ಇಲಾಖೆ ಸುಳಿವು ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಇದೇ ವರ್ಷದ ಆರಂಭದಲ್ಲಿ ಲಾಡೆನ್ ನ ಮೂರನೇ ಮಗ ಸಾದ್ ಬಿನ್ ಲಾಡೆನ್ ನನ್ನು ಅಮೆರಿಕ ಸೇನೆ ಹತ್ಯೆಗೈದಿತ್ತು. ಅಮೆರಿಕದ ಗುಪ್ತಚರ ಇಲಾಖೆ ಕೂಡಾ ಲಾಡೆನ್ ಮಗನ ಹತ್ಯೆ ಮಾಡಿರುವುದಾಗಿ ಹೇಳಿಕೊಂಡಿದೆ. ಲಾಡೆನ್ ನ ನಾಲ್ಕು ಮಕ್ಕಳು ಅಲ್ ಖೈದಾ ಸಂಘಟನೆಯ ಪ್ರಮುಖ ಸದಸ್ಯರಾಗಿದ್ದಾರೆ.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X