ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿದೇಶಗಳಲ್ಲಿ ಇಸ್ಕಾನ್ ನಿಂದ ಮಾನ ಹರಾಜು : ಡಿಕೆಶಿ

By Staff
|
Google Oneindia Kannada News

DK Shivakumar
ಬೆಂಗಳೂರು, ಜು. 23 : ಅಕ್ಷರ ದಾಸೋಹ ಖಾಸಗೀಕರಣಗೊಳಿಸುತ್ತಿರುವ ಬಗ್ಗೆ ಮತ್ತು ಯೋಜನೆಯ ಸಂಪೂರ್ಣ ಸೌಲಭ್ಯ ಪಡೆಯುತ್ತಿರುವ ಇಸ್ಕಾನ್ ಸಂಸ್ಥೆ ವಿದೇಶಗಳಲ್ಲಿ ಕೋಟ್ಯಂತರ ರುಪಾಯಿ ವಂತಿಕೆ ವಸೂಲಿ ಮಾಡುತ್ತಿದೆ ಎಂದು ಪ್ರತಿಪಕ್ಷದ ಡಿ ಕೆ ಶಿವಕುಮಾರ್ ವಿಧಾನಸಭೆಯಲ್ಲಿಂದು ಆರೋಪಿಸಿದರು.

ದೇಶದ ಘನತೆಯನ್ನು ವಿದೇಶಗಳಲ್ಲಿ ಹರಾಜು ಹಾಕುತ್ತಿರುವ ಇಸ್ಕಾನ್ ಸಂಸ್ಥೆ ವಿಷಯವಾಗಿ ನಿಲುವಳಿ ಸೂಚನೆ ಮಂಡಿಸಲು ಮುಂದಾದ ಡಿಕೆ ಶಿವಕುಮಾರ್ ಅವರ ಪ್ರಸ್ತಾವನೆ ಆಲಿಸಿದ ಸ್ಪೀಕರ್ ಜಗದೀಶ್ ಶೆಟ್ಟರ್ ಅವರು ವಿಷಯವನ್ನು ನಿಯಮ 69ಕ್ಕೆ ಪರಿವರ್ತಿಸಿ ಚರ್ಚೆಗೆ ಅವಕಾಶ ಕಲ್ಪಿಸಿದರು.

ನಿಯಮ 69ರ ಅಡಿಯಲ್ಲಿ ಚರ್ಚೆ ಆರಂಭಿಸಿದ ಡಿಕೆಶಿ 2001 ರಿಂದ ಆರಂಭವಾಗಿರುವ ಅಕ್ಷಕರ ದಾಸೋಹ ಸರಕಾರ ಕಾರ್ಯಕ್ರಮದ ಸಂಪೂರ್ಣ ಸೌಲಭ್ಯ ಪಡೆದುಕೊಳ್ಳುತ್ತಿರುವ ಬೆಂಗಳೂರಿನ ಇಸ್ಕಾನ್ ಸಂಸ್ಥೆ, ಸರಕಾರದ ಪೂರ್ವನುಮತಿ ಇಲ್ಲದೆ ವಿದೇಶಗಳಲ್ಲಿ ಬಡಮಕ್ಕಳ ಭಾವಚಿತ್ರಗಳನ್ನು ತೋರಿಸಿ ದೇಶದ ಘನತೆಯನ್ನು ಹರಾಜು ಹಾಕಿ ಕೋಟ್ಯಂತರ ಹಣ ವಸೂಲಿ ಮಾಡುತ್ತಿದೆ ಎಂಬ ಗಂಭೀರ ಆರೋಪ ಮಾಡಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಕಾನೂನು ಮತ್ತು ಸಂಸದೀಯ ಸಚಿವ ಸುರೇಶಕುಮಾರ್, ಇದಕ್ಕೆ ಸಂಬಂಧಿಸಿದಂತೆ ಸರಕಾರ ಸದನ ಸಮಿತಿ ರಚಿಸಲಿದೆ. ಶೀಘ್ರದಲ್ಲಿ ವರದಿ ನೀಡುವಂತೆ ಕೇಳಲಾಗುವುದು. ವರದಿಯ ನಂತರ ನಿಯಮ ಉಲ್ಲಂಘನೆ ಆಗಿದ್ದರೆ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X