ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿಡ್ಲಘಟ್ಟ ಮಾದರಿಯಲ್ಲಿ ಮೈಸೂರಲ್ಲಿ ಭೂಹಗರಣ

By Staff
|
Google Oneindia Kannada News

Siddaramaiah
ಮೈಸೂರು, ಜು. 22 : ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ದಲ್ಲಿ ಕರ್ನಾಟಕ ಗೃಹ ಮಂಡಳಿ ನಡೆಸಿರುವ ಭೂಹಗರಣದಂತೆ ಮಾದರಿಯಲ್ಲೇ ಮೈಸೂರಿನ ಸುತ್ತಮುತ್ತಲು ಕೋಟ್ಯಂತರ ರುಪಾಯಿಗಳ ಭಾರಿ ಭೂಹಗರಣ ನಡೆದಿರುವ ಸಾಧ್ಯತೆ ಇದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದರು.

ನಗರದಲ್ಲಿ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು ಎಪಿಎಂಸಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೆಎಚ್ ಬಿ ಚೇರಮನ್ ಮತ್ತು ಅಧಿಕಾರಿಗಳ ಮೂಲಕ ಕೋಟ್ಯಂತರ ರುಪಾಯಿ ಹಗರಣ ನಡೆದಿದೆ ಎಂದರು. ಯಳವಾಲ್ ಹೋಬಳಿಯಲ್ಲಿ ರೈತರಿಂದ 81 ಎಕರೆ ಜಮೀನನ್ನು ಬರೀ 10 ಲಕ್ಷ ರುಪಾಯಿಗಳಿಗೆ ಖರೀದಿಸಲಾಗಿದೆ. ನಂತರ ಅದೇ ಜಮೀನನ್ನು ಮಧ್ಯವರ್ತಿಗಳು ಗೃಹ ಮಂಡಳಿಗೆ ಎಕರೆವೊಂದಕ್ಕೆ 36 ರಿಂದ 50 ಲಕ್ಷ ರುಪಾಯಿಗಳಿಗೆ ಮಾರಾಟ ಮಾಡಿದ್ದಾರೆ. ಇದರಲ್ಲಿ ಮಂಡಳಿಯ ಅಧ್ಯಕ್ಷ ಮತ್ತು ಕೆಲ ಅಧಿಕಾರಿಗಳ ಭಾಗಿಯಾಗಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದರು.

ಶಿಡ್ಲಘಟ್ಟದಲ್ಲಿ ಕೂಡಾ ಭಾರಿ ಭೂಅವ್ಯಹಾರ ನಡೆದಿದ್ದು, ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ಸಹೋದರ ಶ್ರೀನಿವಾಸ ಶೆಟ್ಟಿ ಅವರು ರೈತರಿಂದ ಕಡಿಮೆ ದರದಲ್ಲಿ ಭೂಮಿ ಪಡೆದು ಗೃಹ ಮಂಡಳಿಗೆ ಮಾರಾಟ ಮಾಡಿದ್ದಾರೆ. ಅದರಲ್ಲಿ ಸುಮಾರು 400 ಕೋಟಿ ರುಪಾಯಿಗಳು ಸರಕಾರಕ್ಕೆ ನಷ್ಟವಾಗಿದೆ ಎಂದು ಸಿದ್ದಾರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು. ಸರಕಾರಕ್ಕೆ ರೈತರ ಮೇಲೆ ಕಾಳಜಿ ಇದ್ದಿದ್ದರೆ, ನೇರವಾಗಿ ಅವರಿಂದಲೇ ಖರೀದಿಸಿ ಈ ಹಣವನ್ನು ಅವರಿಗೆ ನೀಡಬೇಕಿತ್ತು. ಅದನ್ನು ಬಿಟ್ಟು ಮಧ್ಯವರ್ತಿಗಳಿಗೆ ನೀಡಿದ್ದು ಏಕೆ ಎಂದು ಪ್ರಶ್ನಿಸಿದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X