ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೀಗೂ ಉಂಟೆ? ಇಂಟರ್ನೆಟ್ಟಿನಲ್ಲಿ ರವಿಬಂಧನ!

By Staff
|
Google Oneindia Kannada News

Total solar eclipse trajectory in india
ಅಹಮದಾಬಾದ್, ಜು. 21 : ಪೂರ್ಣ ಸೂರ್ಯಗ್ರಹಣಕ್ಕೆ ಸಂಬಂಧಿಸಿದ ಎಲ್ಲ ಮಾಹಿತಿಗಳನ್ನು ಒಳಗೊಳ್ಳುವ ಅಂತರ್ಜಾಲ ತಾಣವೊಂದು ಆರಂಭವಾಗಿದೆ. ಈ ತಾಣವನ್ನು ಗುಜರಾತ್ ಸರಕಾರ ತೆರೆದಿದ್ದು ಸೂರ್ಯಗ್ರಹಣದ ಸೌರವ್ಯೂಹ ಕೌತುಕದ ಬಗೆಗೆ ಸಮಗ್ರ ಮಾಹಿತಿಯನ್ನು ಬಿತ್ತರಿಸಲು ಸಜ್ಜಾಗಿದೆ. ಸೂರತ್ ಮುನಿಸಿಪಲ್ ಕಾರ್ಪೋರೇಷನ್ ಮತ್ತು ದಕ್ಷಿಣ ಗುಜರಾತ್ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿಯ ಸಹಯೋಗದಲ್ಲಿ ವೆಬ್ ಸೈಟಿನಲ್ಲಿ ಸೂರ್ಯಗ್ರಹಣದ ಮಾಹಿತಿ ಯಜ್ಞ ನಡೆಯುತ್ತದೆ.

ನಾವು ಸೂರ್ಯಗ್ರಹಣವನ್ನು ಏಕೆ ನೋಡಬೇಕು, ಹೇಗೆ ನೋಡಬೇಕು, ಹೇಗೆ ನೋಡಬಾರದು ಎಂಬಿತ್ಯಾದಿ ವಿವರಗಳನ್ನು ವೆಬ್ ಸೈಟಿನಲ್ಲಿ ಬಿತ್ತರಿಸಲಾಗುತ್ತದೆ. ಜುಲೈ 22ರ ಬೆಳಿಗ್ಗೆ ಸೂರ್ಯೋದಯದ ನಂತರ ಸೂರತ್ ನಗರದಲ್ಲಿ ಗ್ರಹಣ ಗೋಚರಿಸುತ್ತದೆ. ವಜ್ರದ ನಗರಿ ಸೂರತ್ತಿನಲ್ಲಿ ಗ್ರಹಣ ಇಣುಕುವುದು ಕೇವಲ ಮೂರೇ ನಿಮಿಷ. ಇಂಥ ಇನ್ನೊಂದು ಗ್ರಹಣ ನೋಡಬೇಕಾದರೆ 78 ವರ್ಷ ಕಾಯಬೇಕು. ನಾಗರೀಕರು ಅಪೂರ್ವ ದೃಶ್ಯವನ್ನು ನೋಡಲು ಮರೆಯಬಾರದು ಎಂದು ಸೂರತ್ ನ ಜಿಲ್ಲಾಧಿಕಾರಿ ದಿಲೀಪ್ ರಾವಲ್ ಹೇಳಿದ್ದಾರೆ.

ಸೌರವ್ಯೂಹದ ಕೌತುಕವನ್ನು ತಮ್ಮ ನಗರ ವ್ಯಾಪ್ತಿಯ ನಾಗರೀಕರಿಗೆ ವೆಬ್ ಸೈಟ್ ಮೂಲಕ ತರುತ್ತಿರುವ ಗುಜರಾತ್ ಸರಕಾರ ಮತ್ತು ಸೂರತ್ ಮುನಿಸಿಪಾಲಿಟಿಗೆ ಶುಭಾಶಯಗಳು. ನೋಡಿ : http://www.solareclipsesurat.in/

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X