ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ಕರೆ ಕೊಂದದ್ದು ನಾನೇ : ಕಸಬ್ ತಪ್ಪೊಪ್ಪಿಗೆ

By Staff
|
Google Oneindia Kannada News

ಮುಂಬೈ, ಜು.20 : ಮುಂಬೈ ಭಯೋತ್ಪಾದನೆ ಆರೋಪಿ ಉಗ್ರ ಅಜ್ಮಲ್ ಕಸಬ್ ಇಂದು ವಿಶೇಷ ನ್ಯಾಯಾಲಯದಲ್ಲಿ ತಪ್ಪೊಪ್ಪಿಕೊಂಡಿದ್ದಾನೆ. ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕರೆ ಕೊಂದಿದ್ದು, ಕಾಮಾ ಆಸ್ಪತ್ರೆ ಮೇಲೆ ಧಾಳಿ ಸೇರಿದಂತೆ ಮುಂಬೈನಲ್ಲಿ ನಡೆದ ಭಯೋತ್ಪಾದನಾ ಕೃತ್ಯಗಳಿಗೆ ನೇರವಾಗಿ ಭಾಗಿ ಆಗಿದ್ದನ್ನು ಸ್ಪಷ್ಟಪಡಿಸಿದ್ದಾನೆ. ವಿಶೇಷ ನ್ಯಾಯಾಲಯದಲ್ಲಿ ಉಗ್ರ ಕಸಬ್ ತಪ್ಪೊಪ್ಪಿಗೆ ಹೇಳಿಕೆ ಅನಿರೀಕ್ಷಿತ ಎಂದು ಕಸಬ್ ಪರ ಸರ್ಕಾರಿ ವಕೀಲ ಉಜ್ವಲ್ ನಿಕ್ಕಂ ಪ್ರತಿಕ್ರಿಯಿಸಿದ್ದಾರೆ.

ಝಾಕೀರ್ ಉರ್ ರಹಮಾನ್ ಲಕ್ವಿಯ ನಿರ್ದೇಶನದ ಮೇರೆಗೆ ಆತ್ಮಾಹುತಿ(ಫಿದಾಯಿನ್) ದಾಳಿ ನಡೆಸಲು ನಮ್ಮ ತಂಡ ಮುಂಬೈಗೆ ಸಣ್ಣ ಬೋಟ್ ಮೂಲಕ ಬಂದೆವು ಎಂದು ಕಸಬ್ ಹೇಳಿದ್ದಾನೆ. ಇದಲ್ಲದೆ ಮುಂಬೈ ಪೊಲೀಸರ ಬಳಿ ಇರುವ ಆರೋಪ ಪಟ್ಟಿಯಲ್ಲಿನ ಹಲವರ ಹೆಸರುಗಳನ್ನು ಕಸಬ್ ಸೂಚಿಸಿದ್ದಾನೆ.

ಕರಾಚಿಯಿಂದ ಸಣ್ಣ ಬೋಟ್ ಮೂಲಕ ಒಂಬತ್ತು ಜನರ ನಮ್ಮ ತಂಡ ಮುಂಬೈಗೆ ಬಂದೆವು. ಮೊದಲು ಛತ್ರಪತಿ ಶಿವಾಜಿ ಟರ್ಮಿನಸ್ (CST) ಬಳಿ ದಾಳಿ ನಡೆಸಿ, ನಂತರ ಕಾಮಾ ಆಸ್ಪತ್ರೆ, ಎಟಿಎಸ್ ಅಧಿಕಾರಿಗಳಿಗೆ ಗುಂಡಿಕ್ಕಿದ್ದು ತಾಜ್ ಹೋಟೆಲ್ ನಲ್ಲಿ ಅಂತಿಮ ಹೋರಾಟದ ಕಥೆ ಎಲ್ಲವನ್ನು ಕಸಬ್ ಕಥೆಯ ರೀತಿ ವಿವರಿಸಿದ್ದಾನೆ. ಕಸಬ್ ತಪ್ಪೊಪ್ಪಿಗೆ ವಿಚಾರಣೆಯನ್ನು ಕೋರ್ಟ್ ಸದ್ಯದಲ್ಲೇ ಕೈಗೆತ್ತಿಕೊಳ್ಳಲಿದೆ.

ಇದುವರೆವಿಗೂ 150 ಜನ ಸಾಕ್ಷಿಗಳಲ್ಲಿ 133 ಸಾಕ್ಷಿಗಳ ವಿಚಾರಣೆ ಮುಗಿದಿದೆ. ಮುಂಬೈ ಮೇಲೆ ನಡೆದ 26/11 ದಾಳಿಯಲ್ಲಿ 150ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದರು. ಇದಕ್ಕೆ ಪಾಕಿಸ್ತಾನ ಕೃಪಾಪೋಷಿತ ಉಗ್ರರೇ ನೇರ ಕಾರಣ ಎಂದು ಭಾರತ ಮಾಡಿದ ಆರೋಪಕ್ಕೆ ಇಂದು ಪುಷ್ಟಿ ಸಿಕ್ಕಿದೆ.

ಗಲ್ಲು ಶಿಕ್ಷೆ ತಪ್ಪಿಸಿಕೊಳ್ಳಲು ಕಸಬ್ ಈ ರೀತಿ ಹೇಳಿಕೆನೀಡಿರುವ ಸಾಧ್ಯತೆಯಿದೆ. ಆದರೆ, ಪೂರ್ತಿ ಸಾಕ್ಷ್ಯಾಧಾರಗಳ ವಿಚಾರಣೆ ನಡೆದ ಮೇಲೆ ನ್ಯಾಯಾಧೀಶರು ಈ ಬಗ್ಗೆ ನಿರ್ಧಾರಕ್ಕೆ ಬರುವ ನಿರೀಕ್ಷೆಯಿದೆ ಎಂದು ಹಿರಿಯ ವಕೀಲರು ಹೇಳಿದ್ದಾರೆ. ದೀಪಾವಳಿಯ ಹೊತ್ತಿಗೆ 26/11 ಕೇಸಿನ ತೀರ್ಪು ಹೊರ ಬರುವ ಸಾಧ್ಯತೆಯಿದೆ ಎಂದು ನ್ಯಾಯಾಧೀಶ ತೆಹ್ಲಯಾನಿ ಹೇಳಿದರು

(ದಟ್ಸ್ ಕನ್ನಡವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X