ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಮಾಯಣ ಟೀಕೆ ಮುಂದುವರಿಸುವೆ; ಕರುಣಾನಿಧಿ

By Staff
|
Google Oneindia Kannada News

Karunanidhi
ಚೆನ್ನೈ, ಜು.20:ಭಗವಾನ್ ಶ್ರೀ ರಾಮಚಂದ್ರ ಯಾರು? ಆತನ ಅಸ್ತಿತ್ವದ ಬಗ್ಗೆ ಏನಾದರೂ ಪುರಾವೆ ಇದೆಯಾ? ಆತ ಯಾವ ಕಾಲೇಜಿನಲ್ಲಿ ಇಂಜಿನಿಯರಿಂಗ್ ಓದಿದ್ದು ಎಂದು ಈ ಹಿಂದೆ ಹೇಳಿಕೆ ನೀಡಿದ್ದ ತಮಿಳುನಾಡು ಮುಖ್ಯಮಂತ್ರಿ ಎಂ ಕರುಣಾನಿಧಿ ನಿನ್ನೆ ಮತ್ತೆ ರಾಮಾಯಣ ಮತ್ತು ರಾಮನ ಬಗ್ಗೆ ಟೀಕೆ ಮಾಡುವುದನ್ನು ಮುಂದುವರಿಸುವೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ನಾನೊಬ್ಬ ಕ್ರಾಂತಿಕಾರಿಯಾಗುವುದನ್ನು ಮುಂದುವರಿಸುತ್ತೇನೆ, ನನ್ನ ಚಿಕ್ಕ ವಯಸ್ಸಿನಿಂದಲೇ ರಾಮಾಯಣವನ್ನು ಟೀಕೆ ಮಾಡುತ್ತ ಬಂದಿದ್ದೇನೆ. ಅದನ್ನು ಮತ್ತೆ ಮುಂದುವರಿಸಿಕೊಂಡು ಹೋಗಲು ನನಗೆ ಯಾವ ಮುಲಾಜು ಇಲ್ಲ ಎಂದು ಕೇಂದ್ರ ಕಾನೂನು ಸಚಿವ ವೀರಪ್ಪ ಮೊಯ್ಲಿ ಅವರ ಕನ್ನಡದ ಶ್ರೀರಾಮಾಯಣ ಮಹಾನ್ವೇಷಣಂ ಪುಸ್ತಕದ ತಮಿಳು ಆವೃತ್ತಿ 'ರಾಮಾಯಣ ಪೆರುಂತೆಡಲ್' ಬಿಡುಗಡೆ ಮಾಡಿ ಮಾತನಾಡುತ್ತಿದ್ದರು.

ಮೊಯ್ಲಿ ಅವರು ರಾಮಾಯಣ ನಿರೂಪಿಸಿದ ಶೈಲಿ ವಿಭಿನ್ನವಾಗಿದೆ. ಮೂಲ ರಾಮಾಯಣಕ್ಕೂ ಮೊಯ್ಲಿ ಅವರು ಬರೆದಿರುವ ರಾಮಾಯಣಕ್ಕೂ ತುಂಬಾ ವ್ಯತ್ಯಾಸವಿದೆ. ಅವರು ತಮ್ಮ ಅಭಿಪ್ರಾಯವನ್ನು ನಿರ್ಭೀತಿಯಿಂದ ಪದ್ಯರೂಪದಲ್ಲಿ ಪ್ರಕಟಿಸಿದ್ದಾರೆ, ಅದಕ್ಕಾಗಿ ತಾನು ಈ ಪುಸ್ತಕ ಬಿಡುಗಡೆಗೆ ಒಪ್ಪಿಗೆ ನೀಡಿದೆ ಎಂದು ಕರುಣಾನಿಧಿ ಹೇಳಿದ್ದಾರೆ.

ನನ್ನ ಈ ಪುಸ್ತಕವು ಬರೀ ರಾಮಯಣದ ಕಥೆಯಲ್ಲ, ಪ್ರತಿಪುಟದಲ್ಲಿಯೂ ಓದುಗರಿಗೆ ಸಂದೇಶವಿದೆ. ಮಹಾಭಾರತದ ಪ್ರಮುಖ ಪಾತ್ರಗಳಲ್ಲೊಂದಾದ ದ್ರೌಪತಿಯ ಕುರಿತು ಪುಸ್ತಕವೊಂದನ್ನು ಬರೆಯುತ್ತಿದ್ದು, ಅದು ಒಂದು ವರ್ಷದೊಳಗೆ ಬಿಡುಗಡೆಯಾಗಲಿದೆ ಎಂದು ವೀರಪ್ಪ ಮೊಯ್ಲಿ ಈ ಸಂದರ್ಭದಲ್ಲಿ ಹೇಳಿದ್ದಾರೆ.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X