ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನ.1 ಕನ್ನಡ ಬಾವುಟ ಹಾರಿಸಲು ಅಡ್ಡಿಯಿಲ್ಲ

By Staff
|
Google Oneindia Kannada News

Kannada flag
ಬೆಂಗಳೂರು, ಜು.20 : ಕನ್ನಡ ರಾಜ್ಯೋತ್ಸವ ದಿನ ಸರಕಾರಿ ಸಮಾರಂಭದಲ್ಲಿ ರಾಷ್ಟ್ರ ಧ್ವಜ ಮಾತ್ರ ಹಾರಿಸಬೇಕೆಂದು ರಾಜ್ಯ ಸರಕಾರ ಹೊರಡಿಸಿದ್ದ ಆದೇಶವನ್ನು ಹಿಂತೆಗೆದುಕೊಂಡಿದೆ.ರಾಷ್ಟ್ರೀಯ ಧ್ವಜ ಸಂಹಿತೆ ಪ್ರಕಾರ ಯಾವುದೇ ರಾಜ್ಯಗಳು ಪ್ರತ್ಯೇಕ ಧ್ವಜ ಹೊಂದಬಾರದು.ಇದು ರಾಷ್ಟ್ರೀಯ ಧ್ವಜದ ಪ್ರಾಮುಖ್ಯತೆಗೆ ಚ್ಯುತಿ ಬರುತ್ತದೆ. ಹೀಗಾಗಿ ರಾಜ್ಯೋತ್ಸವ ದಿನವಾದ ನವೆಂಬರ್ 1ರಂದು ಸರಕಾರಿ ಕಾರ್ಯಕ್ರಮದಲ್ಲಿರಾಷ್ಟ್ರಧ್ವಜವನ್ನೇ ಹಾರಿಸಬೇಕು ಎಂದು ಸರಕಾರ ಸ್ಪಷ್ಟ ಪಡಿಸಿತ್ತು.

ಸರಕಾರದ ಈ ನಿಲುವು ವ್ಯಾಪಕ ಟೀಕೆಗೊಳಗಾಗಿತ್ತು. ಕನ್ನಡ ಬಾವುಟ ಹಾರಿಸಲು ಅವಕಾಶ ಮಾಡಿಕೊಡಬೇಕೆಂದು ಕನ್ನಡಪರ ಸಂಘಟನೆಗಳು ಒತ್ತಡ ಹೇರಿದ್ದವು. ಒತ್ತಡಕ್ಕೆ ಮಣಿದಿರುವ ಸರಕಾರ, 2008ರ ಡಿಸೆಂಬರ್ 15ರಂದು ಹೊರಡಿಸಿದ್ದ ಆದೇಶ ವಾಪಸ್ ಪಡೆದಿದೆ. ಕನ್ನಡ ರಾಜ್ಯೋತ್ಸವದಂದು ಯಾವ ಬಾವುಟ ಹಾರಿಸ ಬೇಕೆಂಬ ಕುರಿತು ಆದೇಶದಲ್ಲಿ ನಮೂದಿಸಿಲ್ಲ. ಹೀಗಾಗಿ ಕನ್ನಡ ಬಾವುಟ ಹಾರಿಸಲು ಎದುರಾಗಿದ್ದ ತೊಡಕು ನಿವಾರಣೆಯಾಗಿದೆ.

ನವೆಂಬರ್ 1ರಂದು ಕನ್ನಡ ಬಾವುಟ ಹಾರಿಸುವ ಕುರಿತು ಹಲವು ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗೂ ಸಾರ್ವಜನಿಕರು ಸ್ಪಷ್ಟನೆಕೋರಿ ಮನವಿ ಸಲ್ಲಿಸಿದ್ದರು. ಅವುಗಳನ್ನು ಪರಿ ಶೀಲಿಸಿ ರಾಷ್ಟ್ರ ಧ್ವಜವನ್ನೇ ಮಾತ್ರ ಹಾರಿಸಬೇ ಕೆಂದು ಸರಕಾರ ಆದೇಶ ಹೊರಡಿಸಿತ್ತು.ರಾಜ್ಯೋತ್ಸವಕ್ಕೆ ಕನ್ನಡ ಬಾವುಟ ಹಾರಾಟ ಇನ್ನು ನಿರಾತಂಕವಾಗಿ ಹಾರಿಸಬಹುದು, ಈ ಬಗ್ಗೆ ಇದ್ದ ಗೊಂದಲ ನಿವಾರಣೆ ಆಗಿರುವುದು ಸಂತಸದ ಸುದ್ದಿ ಎಂದು ಕನ್ನಡಪರಸಂಘಟನೆಗಳು ಹರ್ಷ ವ್ಯಕ್ಪಪಡಿಸಿವೆ.

(ದಟ್ಸ್ ಕನ್ನಡವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X