ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಕಾರ್ತದಲ್ಲಿ ತ್ರಿವಳಿ ಬಾಂಬ್ ಸ್ಪೋಟ : 8 ಸಾವು

By Staff
|
Google Oneindia Kannada News

Indonesia blast
ಜಕಾರ್ತ, ಜು. 17 : ಇಂಡೊನೇಷಿಯಾದ ರಾಜಧಾನಿ ಜಕಾರ್ತದಲ್ಲಿ ನಡೆದ ತ್ರಿವಳಿ ಬಾಂಬ್ ಸ್ಪೋಟದಲ್ಲಿ 8 ಜನ ಸಾವನ್ನಪ್ಪಿದ್ದು, 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ದೇಶದ ಭದ್ರತಾ ಸಚಿವಾಲಯ ಈ ಸಂಖ್ಯೆಯನ್ನು ದೃಢಪಡಿಸಿದೆ.

ಅವಳಿ ಸ್ಫೋಟಗಳು ನಗರದ ಐಷಾರಾಮಿ ಹೋಟೇಲುಗಳಾದ ರಿಟ್ಜ್ ಕಾರ್ಲ್ಟನ್ ಹಾಗೂ ಮಾರಿಯೆಟ್‌ನಲ್ಲಿ ನಡೆದಿದೆ. ಸ್ಥಳೀಯ ಕಾಲಮಾನ 8.30 ರ ಸುಮಾರಿಗೆ ನಡೆದ ಅವಳಿ ಬಾಂಬ್ ಸ್ಪೋಟದಲ್ಲಿ ಆರು ಮಂದಿ ಮೃತಪಟ್ಟಿದ್ದಾರೆ. ಅವಳಿ ಸ್ಪೋಟ ನಡೆದ ಎರಡು ತಾಸಿನ ಮೇಲೆ ಮತ್ತೊಂದು ಸ್ಪೋಟ ಉತ್ತರ ಜಕಾರ್ತಾದಿಂದ ವರದಿಯಾಗಿದ್ದು, ಇದರಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.

ಸತ್ತವರಲ್ಲಿ ವಿದೇಶಿ ಪ್ರಜೆಗಳೂ ಸೇರಿದ್ದಾರೆ. ಗಾಯಗೊಂಡ ಹೆಚ್ಚಿನವರು ವಿದೇಶಿ ಪ್ರಜೆಗಳಾಗಿದ್ದು, ಸ್ಪೋಟದ ಅಬ್ಬರಕ್ಕೆ ಹೋಟೆಲ್ ಗಳ ಗಾಜಿನ ಕಿಟಿಕಿಗಳು ಪುಡಿಪುಡಿಯಾಗಿದೆ. ದಾಳಿಯ ಜವಾಬ್ದಾರಿಯನ್ನು ಈ ವರೆಗೂ ಯಾವ ಉಗ್ರ ಸಂಘಟನೆಗಳು ವಹಿಸಿಕೊಂಡಿಲ್ಲ. ಪೊಲೀಸ್ ತನಿಖೆ ಆರಂಭಿಸಿದ್ದಾರೆ.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X