ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನ್ಯೂಜಿಲ್ಯಾಂಡ್ ನಲ್ಲಿ ಭಾರಿ ಪ್ರಮಾಣದ ಭೂಕಂಪ

By Staff
|
Google Oneindia Kannada News

Tsunami alert after NZ earthquake
ವೆಲ್ಲಿಂಗ್ ಟನ್, ಜು. 15 : ನೈರುತ್ಯ ನ್ಯೂಜಿಲ್ಯಾಂಡ್ ನ ಫೆಸಿಪಿಕ್ ಸಾಗರದಲ್ಲಿ ಬುಧವಾರ ರಾತ್ರಿ ಸ್ಥಳೀಯ ಕಾಲಮಾನ 8.22 ಕ್ಕೆ ಭಾರಿ ಪ್ರಮಾಣದ ಭೂಕಂಪ ಸಂಭವಿಸಿದ್ದು, 7.8 ರಿಕ್ಟರ್ ಮಾಪಕದಲ್ಲಿ ದಾಖಲಾಗಿದೆ. ಭಾರಿ ಪ್ರಮಾಣದ ಸುನಾಮಿ ಅಲೆಗಳು ಏಳುವ ಮುನ್ಸೂಚನೆ ನೀಡಿದ್ದು, ತುಂಬಾ ಅಪಾಯಕಾರಿ ಎಂದು ತಿಳಿದು ಬಂದಿದೆ. ಭೂಕಂಪನ ನಂತರ ಸಾವು ನೋವುಗಳ ಬಗ್ಗೆ ವರದಿಯಾಗಿಲ್ಲ. ಸುನಾಮಿ ಹೊಡೆತಕ್ಕೆ ಸಿಲುಕುವ ಸಾಧ್ಯತೆ ಇದೆ ಎಂದು ನ್ಯೂಜಿಲ್ಯಾಂಡ್ ರಕ್ಷಣಾ ಇಲಾಖೆ ತಿಳಿಸಿದೆ.

ಜಪಾನ್ ಭೂಗರ್ಭಶಾಸ್ತ್ರ ಇಲಾಖೆ ಪ್ರಕಾರ, ನೈರುತ್ಯ ನ್ಯೂಜಿಲ್ಯಾಂಡ್ ನ ಫೆಸಿಪಿಕ್ ಸಾಗರದಲ್ಲಿ ಆಗಿರುವ ಪ್ರಬಲ ಭೂಕಂಪದ ಪ್ರಥಮ ಮುನ್ಸೂಚನೆ ಹವಾಯಿಯಲ್ಲಿ ಸುನಾಮಿ ಕೇಂದ್ರದಲ್ಲಿ ದಾಖಲಾಗಿದೆ. ಆದರೆ, ಸುನಾಮಿ ಲಕ್ಷಣಗಳ ಬಗ್ಗೆ ನ್ಯೂಜಿಲ್ಯಾಂಡ್ ಸರಕಾರ ಸ್ಪಷ್ಟಪಡಿಸುತ್ತಿಲ್ಲ. ಆದರೆ, ಸೌತ್ ಲ್ಯಾಂಡ್ ನ ರಕ್ಷಣ ಪಡೆ ತಮ್ಮ ರಕ್ಷಣಾ ಕಾರ್ಯಕ್ಕೆ ಸಿದ್ಧವಾಗಿ ನಿಂತಿವೆ. ಭೂಕಂಪನ ಭಾರಿ ಪ್ರಮಾಣದಲ್ಲಿ ಆಗಿದ್ದರೂ ಈವರೆಗೆ ಘಟನೆ ಬಗ್ಗೆ ವರದಿಗಳು ಲಭ್ಯವಾಗಿಲ್ಲ. ಅಮೆರಿಕ ಮತ್ತು ಆಸ್ಟ್ರೇಲಿಯಾದ ಸುನಾಮಿ ಸಂರಕ್ಷಣಾ ಕೇಂದ್ರದಲ್ಲಿ ಕೂಡಾ ನ್ಯೂಜಿಲ್ಯಾಂಡ್ ನಲ್ಲಿ ಸುನಾಮಿ ಆಗುವ ಸಾಧ್ಯತೆಗಳಿವೆ ಎಂದಿವೆ. ಇನ್ನರ್ ಕೋವಿಲ್ ಬಳಿ ದಕ್ಷಿಣ ಫೆಸಿಪಿಕ್ ಸಾಗರದ 33 ಕಿಮೀ ಆಳದಲ್ಲಿ 160 ಕಿಮೀ ವೇಗದಲ್ಲಿ ಸುನಾಮಿ ಅಲೆಗಳು ಅಬ್ಬರ ಆರಂಭವಾಗಿದೆ ಎಂದು ಅಮೆರಿಕದ ಭೂಗರ್ಭ ಶಾಸ್ತ್ರ ಇಲಾಖೆ ತಿಳಿಸಿದೆ.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X