ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾಷಾ ಮಾಧ್ಯಮ : ಅರ್ಜಿ ತಳ್ಳಿ ಹಾಕಿದ ಹೈ ಕೋರ್ಟ್

By Staff
|
Google Oneindia Kannada News

Sudhakar rao
ಬೆಂಗಳೂರು, ಜು .14: ಭಾಷಾ ಮಾಧ್ಯಮ ನೀತಿ ವಿವಾದ ಬಗೆಹರಿಸಲು ಕಾಲಾವಕಾಶ ಕೋರಿದ್ದ ರಾಜ್ಯ ಸರಕಾರದ ಅರ್ಜಿಯನ್ನು ಹೈಕೋರ್ಟ್ ತಳ್ಳಿ ಹಾಕಿ ಜುಲೈ 16ರ ಒಳಗೆ ಸರಕಾರದ ನಿಲುವನ್ನು ಲಿಖಿತ ರೂಪದಲ್ಲಿ ಸ್ಪಷ್ಟ ಪಡಿಸಬೇಕೆಂದು ಆದೇಶಿಸಿದೆ.

ಇದರಿಂದ ಭಾಷಾ ನೀತಿಗೆ ಸ೦ಬಂಧಿಸಿದಂತೆ ಸುಪ್ರಿಂಕೋರ್ಟ್ ನಿಂದ ಪರಿಹಾರ ಪಡೆದುಕೊಳ್ಳುವ ರಾಜ್ಯ ಸರಕಾರದ ನಿರೀಕ್ಷೆಗೆ ತಣ್ಣೀರು ಎರಚಿದಂತಾಗಿದೆ. ನ್ಯಾಯಮೂರ್ತಿ ಎನ್ ಕುಮಾರ್ ಮತ್ತು ವೇಣುಗೋಪಾಲ ಗೌಡ ಅವರ ಪೀಠದ ಎದುರು ಹಾಜರಾದ ಸರಕಾರದ ಮುಖ್ಯಕಾರ್ಯದರ್ಶಿ ಸುಧಾಕರ್ ರಾವ್ ಅವರು ಭಾಷಾ ಮಾಧ್ಯಮ ವಿವಾದ ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆಯ ಹಂತದಲ್ಲಿ ಇರುವುದರಿಂದ ಜುಲೈ 21 ರವರೆಗೆ ಕಾಲಾವಕಾಶ ನೀಡುವಂತೆ ಕೋರಿದರು. ಅದಕ್ಕೆ ಆಕ್ಷೇಪ ವ್ಯಕ್ತ ಪಡಿಸಿದ ಪೀಠ ಜುಲೈ 16ರ ಒಳಗೆ ನಿಲುವು ಸ್ಪಷ್ಟ ಪಡಿಸಬೇಕೆಂದು ಗಡುವು ನೀಡಿತು.

ಸೂಕ್ತ ಸಮಯದಲ್ಲಿ ಸಮಸ್ಯೆ ಬಗೆಹರಿಸಲು ಸರಕಾರ ವಿಫಲವಾಗಿದೆ. ಇದನ್ನು ರಾಜ್ಯದ ಜನತೆ ಕೂಡ ನೋಡುತ್ತಿದ್ದಾರೆ. ಹೀಗಿರುವಾಗ ಜನತೆಯೇ ನಿಮಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ನ್ಯಾಯಮೂರ್ತಿಗಳು ಆಕ್ರೋಶ ವ್ಯಕ್ತ ಪಡಿಸಿದರು.

(ದಟ್ಸ್ ಕನ್ನಡವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X