ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರು ಗಲಭೆ ಷಡ್ಯಂತ್ರ : ಯಡಿಯೂರಪ್ಪ

By Staff
|
Google Oneindia Kannada News

Yeddyurappa reacts on Mysuru incident
ಬೆಂಗಳೂರು, ಜು. 10 : ಮೈಸೂರಿನ ಕ್ಯಾತಮಾರನಹಳ್ಳಿಯಲ್ಲಿ ನಡೆಯುತ್ತಿರುವ ಕೋಮುಗಲಭೆಯೊಂದು ವ್ಯವಸ್ಥಿತ ಸಂಚು. ಸರಕಾರಕ್ಕೆ ಮಸಿ ಬಳಿಯಲು ಕಾಣದ ಕೈಗಳು ಈ ಘಟನೆಯಲ್ಲಿ ಭಾರಿ ಷಡ್ಯಂತ್ರ ರೂಪಿಸಿವೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ವಿಧಾನ ಪರಿಷತ್ ನಲ್ಲಿ ಮಾತನಾಡಿದರು.

ರಾಜ್ಯದ ಕೋಮುಸೌಹಾರ್ದತೆ ಹಾಗೂ ಶಾಂತಿ ಕದಡಲು ಕೆಲ ವ್ಯಕ್ತಿಗಳು ಸಂಘಟನೆಗಳ ಹೆಸರಿನಲ್ಲಿ ಗಲಭೆಗೆ ಪ್ರಚೋದನೆ ನೀಡುತ್ತಿವೆ. ಕೇರಳ, ಮಡಿಕೇರಿ ಸೇರಿದಂತೆ ಸುಮಾರು 10 ಜಿಲ್ಲೆಗಳಿಂದ ಆಗಮಿಸಿರುವ ವ್ಯಕ್ತಿಗಳ ಮೈಸೂರಿನಲ್ಲಿ ಗಲಭೆ ಎಬ್ಬಿಸುವ ಕೃತ್ಯಕ್ಕೆ ಕೈಹಾಕಿದ್ದಾರೆ. ಸಕ್ಷನ್ 144 ಜಾರಿಯಲ್ಲಿದ್ದರೂ ಕರ್ನಾಟಕ ಡೆವಲಪ್ ಮೆಂಟ್ ಫ್ರಂಟ್ ಸಂಘಟನೆ ಮುಂದೆ ಮಾಡಿಕೊಂಡು ಪ್ರತಿಭಟನೆ ನೆಪದಲ್ಲಿ ದಾಂಧಲೆ ಆರಂಭಿಸಿವೆ ಎಂದು ಆರೋಪಿಸಿದರು.

ಇದೊಂದು ಗಂಭೀರ ಸಂಗತಿಯಾಗಿದ್ದು, ಪ್ರತಿಪಕ್ಷಗಳು ಜವಾಬ್ದಾರಿಯುತವಾಗಿ ವರ್ತಿಸಬೇಕು. ಸರಕಾರದೊಂದಿಗೆ ಸಹಕರಿಸಿ ಶಾಂತಿ ಕದಡಲು ಯತ್ನಿಸುತ್ತಿರುವ ದುಷ್ಟ ಶಕ್ತಿಗಳನ್ನು ಮಟ್ಟಹಾಕುವ ಕೆಲಸ ಮಾಡಬೇಕಿದೆ ಎಂದರು. ಗಲಭೆ ಬಗ್ಗೆ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಹಾಗೂ ಗೃಹ ಸಚಿವ ಪಿ ಚಿದಂಬರಂ ಅವರಿಗೆ ಪತ್ರ ಬರೆಯುವುದಾಗಿ ಹೇಳಿದರು. ಹಾವೇರಿ ಗೋಲಿಬಾರ್ ನಡೆದಾಗಲೂ ಕೂಡಾ ಸಿಎಂ ಯಡಿಯೂರಪ್ಪ ಅವರ ಇದೊಂದು ವ್ಯವಸ್ಥಿತ ಸಂಚು ಎಂದು ಹೇಳಿದ್ದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X