ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಲಿಂಗಕ್ಕೇಕೆ ವಿರೋಧ : ಸುಪ್ರಿಂಕೋರ್ಟ್

By Staff
|
Google Oneindia Kannada News

SC issues notice to Centre on gay sex
ನವದೆಹಲಿ, ಜು. 9 : ಸಲಿಂಗರತಿ ಸಕ್ರಮ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದ ಕೇಂದ್ರ ಸರಕಾರ ಹಾಗೂ ನಾಜ್ ಸಂಘಟನೆಗೆ ಸುಪ್ರಿಂಕೋರ್ಟ್ ನೋಟಿಸ್ ಜಾರಿ ಮಾಡಿದ್ದು, ಜುಲೈ 20ರೊಳಗೆ ವಿವರಣೆ ಸಲ್ಲಿಸುವಂತೆ ತಾಕೀತು ಮಾಡಿದೆ.

ಕಳೆದ ಜುಲೈ 2 ರಂದು ದೆಹಲಿಯ ಎಸ್ ಪಿ ಶಾ ಹಾಗೂ ಎಸ್ ಮುರಲೀಧರ್ ನೇತೃತ್ವ ದೆಹಲಿ ಹೈಕೋರ್ಟ್ ಪೀಠ ಸಲಿಂಗರತಿ ಶಿಕ್ಷಾರ್ಹವಲ್ಲ ಎಂಬ ಐತಿಹಾಸಿಕ ತೀರ್ಪು ನೀಡಿತ್ತು. ಇದಕ್ಕೆ ಕೆಲ ವರ್ಗಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಸಲಿಂಗರತಿ ಸಕ್ರಮಗೊಳಿಸಿದರೆ, ಸಮಾಜದ ಮೇಲೆ ತೀವ್ರ ಪರಿಣಾಮ ಬೀರಲಿದೆ. ಕೌಟುಂಬಿಕ ವ್ಯವಸ್ಥೆಗೆ ದಕ್ಕೆ ಉಂಟಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದ ಕೇಂದ್ರ, ಈ ತೀರ್ಪನ್ನು ಪ್ರಶ್ನಿಸಿ ಸುಪ್ರಿಕೋರ್ಟ್ ಮೊರೆ ಹೋಗಿತ್ತು.

ಇಂದು ಜ್ಯೋತಿಷಿ ಎಸ್ ಕೆ ಕೌಶಾಲ್ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಸುಪ್ರಿಂಕೋರ್ಟ್, ಕೇಂದ್ರ ಸರಕಾರ ಹಾಗೂ ನಾಜ್ ಸಂಘಟನೆಗಳಿಗೆ ನೋಟಿಸ್ ಜಾರಿ ಮಾಡಿದೆ. ಜುಲೈ 20ರೊಳಗೆ ಅರ್ಜಿ ಸಲ್ಲಿಸಿರುವ ಕುರಿತು ಸಮಗ್ರ ವಿರವರಣೆ ನೀಡುವಂತೆ ಸೂಚನೆ ನೀಡಿದೆ. ಸಲಿಂಗಕಾಮ ನೈಸರ್ಗಿಕ ಕ್ರಿಯೆಯಲ್ಲ. ಇದಕ್ಕೆ ಕಾನೂನು ಮಾನ್ಯತೆ ಸರಿಯಲ್ಲ. ಇದರಿಂದ ಅನೇಕ ವರ್ಷಗಳಿಂದ ಕಾಯ್ದುಕೊಂಡ ಬಂದ ಮದುವೆ ಎಂಬ ಅಮೂಲ್ಯ ಸಂಪ್ರದಾಯಕ್ಕೆ ಕೊಡಲಿ ಏಟು ನೀಡಿದಂತಾಗುತ್ತದೆ ಎಂದು ಪಿಲ್ ಅರ್ಜಿಯಲ್ಲಿ ನಮೂದಿಸಲಾಗಿತ್ತು.

ಮದುವೆ ಸಂಪ್ರಯದಾಕ್ಕೆ ಸಲಿಂಗರತಿ ಸಕ್ರಮ ತೀರ್ಪಿನಿಂದ ಆಗುವ ತೊಂದರೆಗಳಾದರೂ ಏನು ? ಸಲಿಂಗರತಿಯಿಂದ ಸಮಾಜದ ಆಗುವ ದುಷ್ಪರಿಣಾಮ, ಇದರಿಂದ ಎಚ್ ಐವಿ ಯಂತಹ ರೋಗಗಳು ಹರಡುವುದಾದರೂ ಹೇಗೆ ಎಂದು ಸುಪ್ರಿಂಕೋರ್ಟ್ ನ್ಯಾಯಮೂರ್ತಿ ಪಿ ಸತಾಶಿವಂ ಪ್ರಶ್ನಿಸಿದ್ದಾರೆ.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X