ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಭಾಷಾ ನೀತಿ ಗೊಂದಲ : ಇಕ್ಕಟ್ಟಿನಲ್ಲಿ ಸರಕಾರ
ಭಾಷಾ ಮಾಧ್ಯಮಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಪೂರ್ಣ ಪೀಠ ನೀಡಿರುವ ತೀರ್ಪನ್ನು ಉಲ್ಲಂಘಿಸಿರುವ ಕುರಿತು ಸರಕಾರವನ್ನು ತರಾಟೆಗೆ ತೆಗೆದುಕೊಂಡು, ಸುಪ್ರಿಂಕೋರ್ಟ್ ಮೊರೆ ಹೋಗಲು ಜುಲೈ 12 ರ ವರೆಗೆ ಕಾಲಾವಕಾಶ ನೀಡಿದ್ದು, ಅಷ್ಟರೊಳಗೆ ಸುಪ್ರಿಂಕೋರ್ಟ್ ನಲ್ಲಿ ತಡೆಯಾಜ್ಞೆ ಸಿಗದಿದ್ದರೆ ಸರಕಾರದ ಮುಖ್ಯಕಾರ್ಯದರ್ಶಿಗಳು ನ್ಯಾಯಪೀಠದ ಮುಂದೆ ಖುದ್ದು ಹಾಜರಾಗಿ ವಿವರಣೆ ನೀಡುವಂತೆ ಆದೇಶಿಸಿತು.
2008ರ ಜುಲೈ 2 ರಂದು ಹೈಕೋರ್ಟ್ ಪೂರ್ಣ ಪೀಠ ಸರಕಾರದ ಮಾಧ್ಯಮ ನೀತಿಯನ್ನು ಅನೂರ್ಜಿತಗೊಳಿಸಿ ವಿದ್ಯಾರ್ಥಿಗಳ ಹಾಗೂ ಪೋಷಕರು ಇಚ್ಚಿಸುವ ಮಾಧ್ಯಮದಲ್ಲಿ ಶಿಕ್ಷಣ ಪಡೆಯಲು ಅವಕಾಶ ನೀಡಿತ್ತು, ಆದರೆ, ಈ ಆದೇಶದ ವಿರುದ್ಧ ಸುಪ್ರಿಂಕೋರ್ಟ್ ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದು, ಜುಲೈ 21 ರಂದು ಅದರ ವಿಚಾರಣೆ ನಡೆಯಲಿದೆ.
(ದಟ್ಸ್ ಕನ್ನಡ ವಾರ್ತೆ)
Comments
ಯಡಿಯೂರಪ್ಪ high court ಹೈಕೋರ್ಟ್ ವಿಶ್ವೇಶ್ವರ ಹೆಗ್ಡೆ ಕಾಗೇರಿ ಪ್ರಾಥಮಿಕ ಶಾಲೆ primary schools language policy ಮಾಧ್ಯಮ
Story first published: Thursday, July 9, 2009, 10:11 [IST]