ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಿಎಂ ನೇತೃತ್ವದ ಜಾಗತಿಕ ಮಟ್ಟದ ಸಲಹಾ ಸಮಿತಿ

By Staff
|
Google Oneindia Kannada News

Manmohan Singh
ನವದೆಹಲಿ, ಜು. 8 : ವಿದೇಶಗಳೊಂದಿಗೆ ಉತ್ತಮ ಬಾಂಧವ್ಯ ನಿರ್ಮಿಸಲು ಭಾರತೀಯ ಮೂಲದ ಪ್ರತಿಭಾವಂತರನ್ನು ಸೇರಿಸಿಕೊಂಡು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ನೇತೃತ್ವದ ಉನ್ನತ ಮಟ್ಟದ ಜಾಗತಿಕ ಸಲಹಾ ಸಮಿತಿಯೊಂದನ್ನು ಕೇಂದ್ರ ಸರಕಾರ ರಚಿಸಿದೆ.

ಕೇಂದ್ರ ಸರಕಾರ ರಚಿಸುತ್ತಿರುವ ಉನ್ನತ ಮಟ್ಟದ ಜಾಗತಿಕ ಮಟ್ಟದ ಸಲಹಾ ಸಮಿತಿಯಲ್ಲಿ ಒಟ್ಟು 23 ಖ್ಯಾತನಾಮರಿದ್ದು, ಖ್ಯಾತ ಅರ್ಥಶಾಸ್ತ್ರಜ್ಞ ಹಾಗೂ ನೊಬೆಲ್ ಪ್ರಶಸ್ತಿ ಪುರಷ್ಕೃತ ಡಾ ಅಮಾರ್ತ್ಯ ಸೇನ್, ಉಕ್ಕು ಉದ್ಯಮಿ ಎಲ್ ಎನ್ ಮಿತ್ತಲ್, ಪೆಪ್ಸಿ ಕಂಪನಿಯ ಮುಖ್ಯ ಕಾರ್ಯನಿರ್ವಾಹಕಿ ಇಂದಿರಾ ನೂಯಿ, ವಿದೇಶಾಂಗ ಖಾತೆ ಸಚಿವ ಎಸ್ ಎಂ ಕೃಷ್ಣ, ಸಿಟಿ ಗ್ರೂಫ್ ನ ಮುಖ್ಯಸ್ಥ ವಿಕ್ರಮ್ ಪಂಡಿತ್, ಎನ್ ಆರ್ ಐ ಉದ್ಯಮಿ ಕರಣ್ ಬಿಲಿಮೋರಿಯಾ, ಅರ್ಥಶಾಸ್ತ್ರಜ್ಞ ಜಗದೀಶ್ ಬಾಗ್ವತ್, ಶಿಕ್ಷಣ ತಜ್ಞ ಶ್ಯಾಮ್ ಪಿತ್ರೋಡಾ ಸಮಿತಿಯಲ್ಲಿರುವ ಪ್ರಮುಖರಾಗಿದ್ದಾರೆ.

ವಿದೇಶಗಳೊಂದಿಗೆ ಬಾಂಧವ್ಯ ಬೆಸೆಯಲು ಈ ಸಮಿತಿ ಪರಿಣಾಮಕಾರಿ ಕೆಲಸ ಮಾಡಲಿದೆ ಎಂದು ಆಶಾಭಾವನೆಯನ್ನು ಕೇಂದ್ರದ ಸಂಸದೀಯ ಖಾತೆಗಳ ಸಚಿವ ವಯಲಾರ್ ರವಿ ತಿಳಿಸಿದ್ದಾರೆ.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X