ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಹುಲ್ ಗಾಂಧಿ ಇನ್ನು 8 ವರ್ಷ ಪಿಎಂ ಆಗಲಾರ

By Staff
|
Google Oneindia Kannada News

Rahul Gandhi
ಬೆಂಗಳೂರು, ಜು. 7 : ರಾಹುಲ್ ಗಾಂಧಿಯವರಿಗೆ ಇನ್ನೂ 8 ವರ್ಷ ಪ್ರಧಾನಿಯಾಗುವ ಯೋಗವಿಲ್ಲ ಎಂದು ತೀರ್ಥಹಳ್ಳಿಯ ಕಾಲಜ್ಞಾನಿ ಟಿ ಡಿ ಆರ್ ಹರಿಶ್ಚಂದ್ರಗೌಡ ಭವಿಷ್ಯ ನುಡಿದಿದ್ದಾರೆ.

ಜುಲೈ 22 ರಂದು ಸಂಭವಿಸುವ ಸೂರ್ಯಗ್ರಹಣದ ನಂತರ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಸಾಡೇಸಾತಿ ಶನಿ ಕಾಟ ಆರಂಭವಾಗುತ್ತಿದೆ. ಆಗ ರಾಹುಲ್ ಗಾಂಧಿಯವರ ಅಂಗಳದಲ್ಲಿ ಪ್ರಧಾನಿ ಪದವಿ ಬಂದು ನಿಲ್ಲುತ್ತದೆ. ಆದರೆ, ಅವರದು ಮಿಥುನ ಲಗ್ನವಾಗಿದ್ದು, ರವಿ ಮತ್ತು ಕುಜ ಗ್ರಹಗಳು ಇರುತ್ತವೆ. ಅವರ ಜಾತಕದಲ್ಲಿ ಚಂದ್ರ ದೆಶೆಯ ನಡೆಯುತ್ತಿರುವುದರಿಂದ 8 ವರ್ಷಗಳ ಕಾಲ ಪ್ರಧಾನಿಯಾಗುವ ಯೋಗ ಇರುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ವಿರೋಧಿ ಸಂವತ್ಸರವು 60 ವರ್ಷಗಳಿಗೊಮ್ಮೆ ಬರುತ್ತಿದೆ. 1949ರ ವಿರೋಧಿ ಸಂವತ್ಸರದಲ್ಲಿ ಚೀನಾ ದೇಶದಲ್ಲಿ ಮಾವೋತ್ಸೆ ತುಂಗ್ ಎಂಬ ಅನಾಮಿಕ ರಕ್ತ ಕ್ರಾಂತಿ ನಡೆಸಿ ಪ್ರಧಾನಿಯಾಗಿ ದೇಶವನ್ನು ಮುನ್ನೆಡೆಸಿದ. ಅದೇ ರೀತಿ ನಮ್ಮ ದೇಶದಲ್ಲೂ ದಕ್ಷಿಣ ಭಾರತದಲ್ಲಿ ಜನಿಸಿದ ವ್ಯಕ್ತಿ ಅಪ್ರತಿಮ ನಾಯಕರಾಗಿ ಉದಯಿಸಿ ದೇಶವನ್ನು ಪ್ರಗತಿದತ್ತ ನಡೆಸುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ.

ಈ ವ್ಯಕ್ತಿ 2010 ಅಥವಾ 2011 ರಲ್ಲಿ ಜನಾಭಿಪ್ರಾಯಕ್ಕೆ ಶರಣು ಹೋಗುತ್ತಾರೆ. ಹಿಂದು ರಾಷ್ಟ್ರ ಬೇಕೇ ಅಥವಾ ಜಾತ್ಯಾತೀತ ರಾಷ್ಟ್ರಬೇಕೇ ? ಎಂಬುದು ಚುನಾವಣೆಯ ಪ್ರಮುಖ ಯೋಜಿತ ಪ್ರಚಾರವಾಗಿರುತ್ತದೆ. ಇವರ ಆಡಳಿತ ಕಾಲದಲ್ಲಿ ಸ್ವಿಸ್ ಬ್ಯಾಂಕ್ ಹಣವು ಭಾರತಕ್ಕೆ ಪ್ರವಾಹದೋಪಾದಿಯಲ್ಲಿ ಹರಿದು ಬರುತ್ತದೆ ಎಂದು ಹೇಳಿದ್ದಾರೆ. ಇವರ ಆಡಳಿತ ಕಾಲದಲ್ಲಿ ಭಾರತವು ವಿಶ್ವರಾಜಕೀಯದಲ್ಲಿ ಅಧಿಪತಿಯಾಗಿ ಮರೆಯುತ್ತದೆ. 30 ವರ್ಷಗಳ ಕಾಲ ಇವರ ಏಕಚಕ್ರಾಧಿಪತ್ಯ ಮುಂದುವರಿಯುತ್ತದೆಯ ಮಾವೋತ್ಸೆ ತುಂಗ್ ರೀತಿಯಲ್ಲಿ ಈ ನಾಯಕ ದೇಶದ ಭವಿಷ್ಯವನ್ನು ಬಯಲಾಯಿಸುತ್ತಾರೆ ಎಂದು ಹರಿಶ್ಚಂದ್ರಗೌಡ ತಿಳಿಸಿದ್ದಾರೆ.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X