ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶೀಘ್ರ ಬರಲಿದೆ ಜಾರ್ಜ್ ಫರ್ನಾಂಡಿಸ್ ಆತ್ಮ ಚರಿತ್ರೆ

By Staff
|
Google Oneindia Kannada News

George Fernandes
ಧರ್ಮಶಾಲ, ಜು. 6 : ಕೇಂದ್ರದ ಮಾಜಿ ರಕ್ಷಣೆ ಖಾತೆ ಸಚಿವ ಜಾರ್ಜ್ ಫರ್ನಾಂಡಿಸ್ ಅವರು ತಮ್ಮ ಜೀವನ ಚರಿತ್ರೆಯನ್ನು ಬರೆಯಲು ಮುಂದಾಗಿದ್ದಾರೆ. ರಾಜಕೀಯ ತಂತ್ರ, ಕುತಂತ್ರಗಳನ್ನು ಕಂಡು ರೋಸಿ ಹೋಗಿರುವ ಜೆಡಿಯು ನಾಯಕ ಚಾರ್ಜ್ ಫರ್ನಾಂಡಿಸ್ ಇದನ್ನೆಲ್ಲಾ ಪುಸ್ತಕ ರೂಪದಲ್ಲಿ ಹೊರತರಲು ಚಿಂತನೆ ನಡೆಸಿದ್ದಾರೆ.

ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿರುವ ಹಿನ್ನೆಲೆ ತಮ್ಮ ಸ್ನೇಹಿತರಾದ ಟಿಬೆಟಿಯನ್ನರ ಧಾರ್ಮಿಕ ನಾಯಕ ದಲೈಲಾಮ ಅವರ ಅಹ್ವಾನದ ಮೇರೆಗೆ ಕಳೆದ 15 ದಿನಗಳಿಂದ ಇಲ್ಲಿ ಸಾಂಪ್ರಾದಾಯಕ ಟಿಬೆಟ್ ಚಿಕಿತ್ಸೆ ಪಡೆಯುತ್ತಿರುವ ಅವರು, ತಮ್ಮ ಜೀವನ ಚರಿತ್ರೆಯನ್ನು ದಾಖಲಿಸುವ ಪುಸ್ತಕ ಬರೆಯುತ್ತಾ ಸಮಯ ಕಳೆಯುತ್ತಿರುವುದಾಗಿ ಹೇಳಿದ್ದಾರೆ.

ಜೆಡಿಯು ನಾಯಕರ ತಂತ್ರಗಾರಿಕೆಗೆ ಬೇಸತ್ತ ಅವರು ತಮ್ಮ ಸ್ವಕ್ಷೇತ್ರ ಮುಜಾಫರ್ ಪುರ್ ಲೋಕಸಭೆ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದರು. ಆದರೆ, ಸತತ ಗೆಲುವು ಕಂಡಿದ್ದ ಅವರು ಈ ಚುನಾವಣೆಯಲ್ಲಿ ಸೋಲನುಭವಿಸಬೇಕಾಯಿತು. ಇತ್ತೀಚೆಗೆ ಸಂಬಂಧ ಕೆಡಿಸಿಕೊಂಡಿರುವ ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಮತ್ತು ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಪ್ರಸ್ತಾರ ಪುಸ್ತಕದಲ್ಲಿ ಇರಲಿದೆಯೇ ಎಂಬುದಕ್ಕೆ, ಯಾವುದೇ ವ್ಯಕ್ತಿಯ ಬಗ್ಗೆ ಮಾತನಾಡಲು ನಾನು ಇಷ್ಟಪಡುವುದಿಲ್ಲ ಎಂದು ಹೇಳಿದ್ದಾರೆ.

ರಾಜಕೀಯ ಎಂಬುದು ಇದೀಗ ಸಮಾಜ ಸೇವೆಯಾಗಿ ಉಳಿದಿಲ್ಲ. ಅದೊಂದು ವ್ಯವಹಾರವಾಗಿ ಪರಿರ್ತಿತವಾಗಿದೆ. ಇಂತಹ ಸ್ಥಿತಿಯಲ್ಲಿ ಭಾರತವನ್ನು ಮುನ್ನೆಡಸಲು ಒಬ್ಬ ಯುವ ಪ್ರಧಾನಿಯ ಅಗತ್ಯವಿದೆ. ಎಐಸಿಸಿ ಕಾರ್ಯದರ್ಶಿ ರಾಹುಲ್ ಗಾಂಧಿ ಅವರನ್ನು ಉದ್ದೇಶಿಸಿ ಈ ಮಾತು ಹೇಳುತ್ತಿದ್ದೀರಾ ಎಂಬ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ, ಯಾರದೇ ಹೆಸರು ಪ್ರಸ್ತಾಪಿಸಲು ನಾನು ಬಯಸುವುದಿಲ್ಲ ಎಂದರು.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X