ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಲಿಂಗ ಅಂದ್ರೆ ಸ್ವಚ್ಛಂದ ಕಾಮವೇ

By *ಮೃತ್ಯುಂಜಯ ಕಲ್ಮಠ
|
Google Oneindia Kannada News

Homosexuality immoral, but not criminal
''A new morality must evolve that is based on a true understanding of human nature, that is also consistent with its biology. Homosexuality has been part of the human condition for as long as human beings have existed. The Delhi High Court should be congratulated for making a decision that finally catches up with our times.""

Deepak Chopra
Writer and philosopher, New York

''Homosexuality is a sin — as opposed to a crime. But we believe that those who indulge in it should be treated with respect and compassion.""

Father Dominic Emmanuel
Catholic Archdiocese Delhi

''The Quran condemns homosexuality, but doesn"t prescribe any punishment for it. It"s a sin, not a crime. Sin is between Allah and the sinner, but crime concerns the entire society. So, sexual minorities should be left to their conscience. They are answerable to Allah for their act and should not be treated as criminals,""

Asghar Ali Engineer, Islamic scholar

ಇಬ್ಬರು ವಯಸ್ಕರು ಪರಸ್ಪರ ಸಮ್ಮತಿಸಿ ನಡೆಸುವ ಸಲಿಂಗಕಾಮ ಅಕ್ರಮವೇ ಅಲ್ಲ. ಅದು ಅಪರಾಧವೂ ಅಲ್ಲ ಎಂದು ದೆಹಲಿ ಹೈಕೋರ್ಟ್ ನ ನ್ಯಾಯಮೂರ್ತಿಗಳಾದ ಎಸ್ ಪಿ ಶಾ ಮತ್ತು ಎಸ್ ಮುರಲೀಧರ್ ಅವರನ್ನು ಒಳಗೊಂಡ ಪೀಠ ಕಳೆದ ಗುರುವಾರ ನೀಡಿರುವ ಐತಿಹಾಸಿಕ ತೀರ್ಪು ದೇಶಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದೆ. ಸಲಿಂಗಿಗಳು ಏಳು ವರ್ಷಗಳಿಂದ ನಡೆಸುತ್ತಿದ್ದ ಹೋರಾಟಕ್ಕೆ ಕೊನೆಗೂ ಜಯಸಂದಿದೆ.

ಆದರೆ, ಕೆಲ ಧಾರ್ಮಿಕ ಮುಖಂಡರು ಈ ಆದೇಶವನ್ನು ಖಡಾಖಂಡಿತವಾಗಿ ವಿರೋಧಿಸಿದ್ದಾರೆ. ಕ್ರಿಶ್ಚಿಯನ್ ಮತ್ತು ಇಸ್ಲಾಂ ಧರ್ಮದ ಧಾರ್ಮಿಕ ಮುಖಂಡರಲ್ಲಿ ಪರ ವಿರೋಧಗಳು ಕೇಳಿಬಂದಿವೆ. ಇನ್ನು ಕೆಲವರು ಸಲಿಂಗರತಿ ಸಮಾಜದ ದೊಡ್ಡ ಪಿಡುಗು ಎಂದು ಖಂಡಿಸಿದ್ದಾರೆ. ಜೊತೆಗೆ ಎಲ್ಲರಿಗೂ ಸಮಾನ ಹಕ್ಕುಗಳು ಬೇಕು ಎಂದು ಹೇಳುವ ಮೂಲಕ ದ್ವಂದ್ವ ಮಂತ್ರವನ್ನು ಪಠಿಸಿದ್ದಾರೆ. ಇನ್ನೊಂದು ಅಚ್ಚರಿಯ ಸಂಗತಿಯೆಂದರೆ, ಹಿಂದುತ್ವವನ್ನು ಪ್ರತಿಪಾದಿಸುವ ಬಿಜೆಪಿ ಮತ್ತು ಸಂಘ ಪರಿವಾರ ಸಂಘಟನೆಗಳು ಗಟ್ಟಿ ಧ್ವನಿಯಲ್ಲಿ ಉಸಿರೆತ್ತದಿರುವುದು ಅಶ್ಚರ್ಯ ತರಿಸಿದೆ.

ಆಡಳಿತರೂಢ ಯುಪಿಎ ಸರಕಾರ ಸಲಿಂಗರತಿಯ ಆದೇಶದ ಬಗ್ಗೆ ಧೈರ್ಯದಿಂದ ಯಾವ ಹೇಳಿಕೆಯನ್ನು ನೀಡುತ್ತಿಲ್ಲ. ಆರ್ ಜೆಡಿಯ ಲಾಲು ಪ್ರಸಾದ್ ಯಾದವ್, ಸಮಾಜವಾದಿ ಪಕ್ಷದ ಮುಲಾಯಂ ಸಿಂಗ್ ಯಾದವ್ ಅವರು, ದೆಹಲಿ ಹೈಕೋರ್ಟ್ ನೀಡಿರುವ ಸಲಿಂಗರತಿ ಸಕ್ರಮ ಆದೇಶ ಸಮಾಜಕ್ಕೆ ಮಾರಕ ಎಂದಿದ್ದಾರೆ. ಆದರೆ, ಸಲಿಂಗಿಗಳ ಪರವಾಗಿ ನಿಂತಿರುವವರೆಂದರೆ, ಪಶ್ಚಿಮ ಬಂಗಾಲದ ಕೆಂಪುಕೋಟೆಯ ನಾಯಕರು, ನಟಿ ಸಲೀನಾ ಜೈಟ್ಲಿ, ಬಿಪಾಸು ಬಸು ಮತ್ತು ಜಾನ್ ಅಬ್ರಾಹಂ ಹಾಗೂ ಹೈಸೊಸೈಟಿಯ ಮಂದಿ.

ಈ ತೀರ್ಪು ದೆಹಲಿಗೆ ಮಾತ್ರ ಸಿಮೀತವಾಗಿದ್ದರೂ ದೇಶದ್ಯಾಂತ ವ್ಯಾಪಕ ಚರ್ಚೆ ಶುರುವಾಗಿದೆ. ಅಚ್ಚರಿಯ ಸಂಗತಿ ಎಂದರೆ, ಬ್ರಿಟಿಷರು 145 ವರ್ಷಗಳ ಹಿಂದೆಯೇ ಜಾರಿಗೆ ತಂದಿದ್ದ ಭಾರತೀಯ ಸಂಹಿತೆಯ 377 ಸೆಕ್ಷನ್ ಇದೀಗ ವಿವಾದದ ಕೇಂದ್ರವಾಗಿ ಮಾರ್ಪಟ್ಟಿದೆ. ಭಾರತದಲ್ಲಿ ಬ್ರಿಟಿಷ್ ಅಧಿಕಾರಿಯಾಗಿದ್ದ ಲಾರ್ಡ್ ಮೆಕಾಲೆ ಅವರು, ಪ್ರಕೃತಿಗೆ ವಿರುದ್ಧವಾಗಿರುವ ಲೈಂಗಿಕ ಕ್ರೀಡೆಯಲ್ಲಿ ತೊಡಗುವವರಿಗೆ ಈ ಶಿಕ್ಷೆ ವಿಧಿಸುತ್ತಿದ್ದರು. 377ರ ಪ್ರಕಾರ ನಿಸರ್ಗಕ್ಕೆ ವಿರುದ್ದವಾಗಿ ಪುರುಷ, ಮಹಿಳೆ ಮತ್ತು ಪ್ರಾಣಿಗಳ ಜೊತೆ ಸಂಭೋಗ ನಡೆಸುವವರಿಗೆ ಜೀವಾವಧಿ ಅಥವಾ ಹತ್ತು ವರ್ಷದವರೆಗೆ ವಿಧಿಸಬಹುದಾದ ಶಿಕ್ಷೆ ಹಾಗೂ ದಂಡ ವಿಧಿಸಬಹುದು. ನಂತರ ಈ ಕಾನೂನಿನ ವ್ಯಾಪ್ತಿ ವಿಸ್ತಾರವಾಗುತ್ತಾ ಹೋಯಿತು. ಇದರ ಮೇಲೆ ಒಂದಂತೂ ಸ್ಪಷ್ಟವಾಗುತ್ತೆ, ಸಲಿಂಗರತಿಗೆ ನೂರಾರು ವರ್ಷಗಳ ಇತಿಹಾಸ ಇರುವುದಂತೂ ನಮಗೆ ಸ್ಪಷ್ಟವಾಗುವ ಸಂಗತಿಯಾಗಿದೆ.

ಸಲಿಂಗರತಿ ಕಾನೂನನ್ನು ನಿಷೇಧಿಸುವ ಕುರಿತು ಕೇಂದ್ರ ಸರಕಾರ ಚಿಂತನೆ ನಡೆಸಿರುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಸಲಿಂಗರತಿಯನ್ನು ಕ್ರಿಮಿನಲ್ ಅಪರಾಧವಾಗಿ ಪರಿಗಣಿಸುವ ಐಪಿಸಿ ಸೆಕ್ಷನ್ 377 ಅನ್ನು ನಾವು ಸಂವಿಧಾನದ ಪರಿಚ್ಛೇದ 21, 14 ಮತ್ತು 15ರ ಉಲ್ಲಂಘನೆ ಎಂದು ದೆಹಲಿ ಕೋರ್ಟ್ ಘೋಷಿಸಿದೆ. ದೇಶದಲ್ಲಿ ಶೇ.3 ರಷ್ಟು ಸಲಿಂಗಿಗಳಿದ್ದಾರೆ. ಉಳಿದ ಶೇ. 97 ರಷ್ಟು ಮಂದಿಗೆ ಸಿಗುತ್ತಿರುವ ಸಮಾನ ಹಕ್ಕು ದೇಶದ ಪ್ರಜೆಗಳಿಗೆ ಸಿಗಲೇಬೇಕು. ಬಹುಸಂಖ್ಯಾತರ ಹಿತ ಕಾಯುವುದಾದರೆ, ಕಡಿಮೆ ಸಂಖ್ಯೆಯಲ್ಲಿರುವ ಸಲಿಂಗಿಗಳು ಸಮಾಜಕ್ಕೆ ಏಕೆ ಬೇಡ ಎನ್ನುವ ಪ್ರಶ್ನೆಯೂ ಉದ್ಭವಿಸುತ್ತದೆ.

ಒಟ್ಟಿನಲ್ಲಿ ದೇಶದ ಪ್ರಜೆಗೆ ಸಂವಿಧಾನದಲ್ಲಿ ನಮೂದಿಸಲಾಗಿರುವ ಮೂಲಭೂತ ಸೌಲಭ್ಯಗಳು ದೊರೆಯಬೇಕು. ಸಲಿಂಗರತಿ ನೂರಾರು ವರ್ಷಗಳಿಂದ ಜಾರಿಯಲ್ಲಿರುವ ಒಂದು ಪದ್ಧತಿ. ಅದು ಬೆಳಕಿಗೆ ಬಂದಿರುವುದು ಮಾತ್ರ ಇತ್ತೀಚೆಗೆ. ಬಲವಂತವಾಗಿ ಇನ್ನೊಬ್ಬರು ಹಕ್ಕು ಕಸಿದುಕೊಳ್ಳುವುದು ಅಷ್ಟೊಂದು ಉಚಿತವಲ್ಲ. ಅವರವರ ಇಷ್ಟದಂತೆ ಜೀವಿಸುವುದು ಪ್ರತಿಯೊಬ್ಬರಿಗೂ ಸ್ವಾತಂತ್ರ್ಯವಿದೆ. ಸಲಿಂಗಿಗಳು ಮನೋರೋಗಿಗಳಂತೂ ಅಲ್ಲವೇ ಅಲ್ಲ ಎಂದು ಮನೋರೋಗ ತಜ್ಞರು ಅಭಿಪ್ರಾಯವಾಗಿದೆ. ಸಲಿಂಗಿಗಳಿಂದ ಯಾವ ಅನಾಹುತಗಳೂ ಆಗುವುದಿಲ್ಲ. ಈ ಹಿಂದೆ ಕದ್ದುಮುಚ್ಚಿ ನಡೆಯುತ್ತಿತ್ತು. ಇದೀಗ ಮುಕ್ತವಾಗಿದೆ. ಅಂದ ಮಾತ್ರಕ್ಕೆ ಇಡೀ ಸಮಾಜ ಅವರನ್ನೇ ಬೆಂಬಲಿಸಬೇಕು ಎಂದು ನಿಯಮವೇನೋ ಇಲ್ಲವಲ್ಲ. ಅವರಿಷ್ಟಕ್ಕೆ ಅವರನ್ನು ಬಿಟ್ಟುಬಿಡಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X