ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಲೆಕ್ಟ್ರಾನಿಕ್ ಮತಯಂತ್ರ ನಿಷೇಧಿಸಿ : ಅಡ್ವಾಣಿ

By Staff
|
Google Oneindia Kannada News

L K Advani
ನವದೆಹಲಿ, ಜು. 5 : ಎಲೆಕ್ಟ್ರಾನಿಕ್ ಮತಯಂತ್ರದಲ್ಲಿ ಭಾರಿ ಅವ್ಯವಹಾರ ನಡೆಯುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು, ಮುಂದಿನ ಚುನಾವಣೆಗಳ ಹೊತ್ತಿಗೆ ಅವುಗಳ ಬಳಕೆಯನ್ನು ನಿಷೇಧಿಸಬೇಕು ಎಂದು ಬಿಜೆಪಿ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಕೇಂದ್ರ ಚುನಾವಣೆ ಆಯೋಗವನ್ನು ಒತ್ತಾಯಿಸಿದ್ದಾರೆ.

ಬ್ಯಾಲೆಟ್ ಪೇಪರ್ ಗಳನ್ನು ಮತ್ತೆ ಮರುಜಾರಿಗೊಳಿಸಬೇಕು. ಇದೇ ವರ್ಷ ಮಹಾರಾಷ್ಟ್ರ ಸೇರಿ ಮೂರು ವಿಧಾನಸಭೆ ರಾಜ್ಯಗಳ ವಿಧಾನಸಭೆ ಚುನಾವಣೆಗೆ ಬ್ಯಾಲೆಟ್ ಪೇಪರ್ ಮೂಲಕವೇ ಚುನಾವಣೆಗಳನ್ನು ನಡೆಸಬೇಕು. ಬ್ಯಾಲೆಟ್ ಮೂಲಕ ಚುನಾವಣೆಗಳನ್ನು ನಡೆಸುವುದು ಅತ್ಯಂತ ಸೂಕ್ತ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಎಲೆಕ್ಟ್ರಾನಿಕ್ ಮತಯಂತ್ರಗಳಿಂದ ರಿಗ್ಗಿಂಗ್ ಮಾಡುವ ಎಲ್ಲ ಸಾಧ್ಯತೆಗಳು ಇವೆ. ಈಗಾಗಲೇ ಅವ್ಯವಹಾರಗಳು ನಡೆದಿರುವ ಅಂಶಗಳು ಬೆಳಕಿಗೆ ಬರುತ್ತಿವೆ. ಇದರಿಂದ ಮತಯಂತ್ರಗಳನ್ನು ಬಳಕೆ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ಅಡ್ವಾಣಿ ಹೇಳಿದರು.

ಮತಯಂತ್ರಗಳಲ್ಲಿ ಅವ್ಯವಹಾರ ನಡೆಯುತ್ತಿರುವ ಬಗ್ಗೆ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಜರ್ಮನಿ ಸರಕಾರ ಅವುಗಳ ಬಳಕೆಯನ್ನು ನಿಷೇಧಿಸಿದೆ. ಅಮೆರಿದಲ್ಲಿಯೂ ಇದರ ಬಗ್ಗೆ ಸಾಕಷ್ಟು ನಡೆದಿದೆ. ಭಾರತದಲ್ಲಿಯೂ ಕೂಡಾ ಇದರ ಬಳಕೆಯನ್ನು ನಿಷೇಧಿಸುವುದಕ್ಕೆ ಅತ್ಯಂತ ಸಕಾಲ ಎಂದರು. ಆದರೆ, ಚುನಾವಣೆ ಆಯೋಗದ ಆಯುಕ್ತ ಎಸ್ ವೈ ಖುರೇಶಿ ಪ್ರತಿಕ್ರಿಯೆ ನೀಡಿದ್ದು, ಈವಿಎಂಗಳಿಂದ ಯಶಸ್ವಿಯಾಗಿ ಚುನಾವಣೆಗಳನ್ನು ಪೂರ್ಣಗೊಳಿಸಲಾಗಿದೆ. ಈವಿಎಂಗಳಲ್ಲಿ ಅವ್ಯವಹಾರಗಳು ನಡೆಯುತ್ತಿವೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಮದ್ರಾಸ್ ಐಐಟಿ ನಿರ್ದೇಶಕ ಪಿ ವಿ ಇಂದರೇಶನ್ ನೇತೃತ್ವದ ಸಂಸದೀಯ ಉಪಸಮಿತಿ ರಚಿಸಲಾಗಿದೆ ಎಂದು ಹೇಳಿದರು.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X