ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿದೇಶಾಂಗ ಕಾರ್ಯದರ್ಶಿಯಾಗಿ ನಿರುಪಮಾ ರಾವ್

By Staff
|
Google Oneindia Kannada News

Nirupama Rao to be next Foreign Secretary
ನವದೆಹಲಿ, ಜು.1: ಕರ್ನಾಟಕದ ಮುಖ್ಯ ಕಾರ್ಯದರ್ಶಿ ಸುಧಾಕರ ರಾವ್ ಅವರ ಪತ್ನಿ ನಿರುಪಮಾ ರಾವ್(58) ಅವರನ್ನು ಮುಂದಿನ ವಿದೇಶಾಂಗ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ. ಪ್ರಸ್ತುತ ಚೀನಕ್ಕೆ ಭಾರತದ ರಾಯಭಾರಿಯಾಗಿರುವ ನಿರುಪಮಾ ರಾವ್ 3 ವರ್ಷಗಳ ಸೇವೆಯನ್ನು ಪೂರೈಸಿ ಜು. 31ರಂದು ನಿವೃತ್ತರಾಗಲಿರುವ ಶಿವಶಂಕರ ಮೆನೋನ್ ಅವರ ಉತ್ತರಾಧಿಕಾರಿಯಾಗುವರು.

1973ನೇ ಬ್ಯಾಚಿನ ಐಎಫ್‌ಎಸ್ ಅಧಿಕಾರಿ ದೇಶದ ದ್ವಿತೀಯ ಮಹಿಳಾ ವಿದೇಶಾಂಗ ಕಾರ್ಯದರ್ಶಿಯಾಗಲಿದ್ದಾರೆ. ಚೊಕಿಲಾ ಅಯ್ಯರ್ ಅವರು ಭಾರತದ ಪ್ರಥಮ ಮಹಿಳಾ ವಿದೇಶಾಂಗ ಕಾರ್ಯದರ್ಶಿಯಾಗಿದ್ದರು. 2006ರ ಅಕ್ಟೋಬರ್ ನಲ್ಲಿ ನಿರುಪಮಾ ಅವರು ಚೀನಾದ ಭಾರತೀಯ ರಾಯಭಾರಿಯಾಗಿ ನೇಮಕಗೊಂಡಿದ್ದರು.

1950ರ ಡಿ. 6ರಂದು ಕೇರಳದಲ್ಲಿ ಜನಿಸಿದ ರಾವ್ ಅವರು ಸುಮಾರು 17 ತಿಂಗಳ ಕಾಲ ವಿದೇಶಾಂಗ ಕಾರ್ಯದರ್ಶಿಯಾಗಿರುವರು. ಹಿರಿಯ ಐಎಎಸ್ ಅಧಿಕಾರಿ ಸುಧಾಕರ ರಾವ್ ಅವರ ಪತ್ನಿಯಾಗಿರುವ ಅವರು, ಮರಾಠವಾಡ ವಿಶ್ವವಿದ್ಯಾನಿಲಯದಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

(ಏಜೆನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X