ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಮೆನ್ ವಿಮಾನ ಅಪಘಾತ : 100 ಹೆಚ್ಚು ಸಾವು ?

By Staff
|
Google Oneindia Kannada News

ಮರೋನಿ, ಜೂ. 30 : ಇತ್ತೀಚೆಗೆ ಏರ್ ಫ್ರಾನ್ಸ್ ವಿಮಾನವೊಂದು ನಾಪತ್ತೆಯಾದ ಪ್ರಕರಣ ಹಸಿರಿರುವಾಗಲೇ ಯಮೆನ್ ಏರ್ ಲೈನ್ಸ್ ನ 153 ಹೊತ್ತೊಯ್ಯುತ್ತಿದ್ದ ವಿಮಾನವೊಂದು ಹಿಂದು ಮಹಾಸಾಗರದಲ್ಲಿ ಪತನವಾಗಿರುವ ದುರ್ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ.

ಯಮೆನ್ ಏರ್ ಲೈನ್ಸ್ 310 ಹೆಸರಿನ ವಿಮಾನ ಭಾರತದ ಹಿಂದೂ ಮಹಾಸಾಗರದಲ್ಲಿ ಪತನವಾಗಿರುವುದು ತನಿಖೆಯಿಂದ ತಿಳಿದು ಬಂದಿದೆ. ಅದರಲ್ಲಿ ಸುಮಾರು 153 ಮಂದಿ ಪ್ರಯಾಣಿಸುತ್ತಿದ್ದರು. ಪ್ರಯಾಣಿದಕರೆಲ್ಲರೂ ಸಾವಿಗೀಡಾಗಿರುವ ಸಾಧ್ಯತೆ ಇದೆ ಯಮೆನ್ ವಿಮಾನಯಾನ ಇಲಾಖೆ ಅಧಿಕಾರಿಗಳು ದೃಡಪಡಿಸಿದ್ದಾರೆ. ವಿಮಾನ ದುರಂತಕ್ಕೆ ಕಾರಣಗಳು ತಿಳಿದು ಬಂದಿಲ್ಲ. ವಿಮಾನ ಹುಡುಕಾಟ ಕಾರ್ಯಾಚರಣೆ ಆರಂಭವಾಗಿದೆ. ಆದರೆ ಇತ್ತೀಚಿನ ಮಾಹಿತಿಗಳ ಪ್ರಕಾರ ವಿಮಾನದಲ್ಲಿದ್ದ ಮಗುವೊಂದು ಪವಾಡಸದೃಶ ರೀತಿಯಲ್ಲಿ ಪಾರಾಗಿದೆ ಎಂದು ಮೂಲಗಳು ತಿಳಿಸಿವೆ.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X