ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಷ್ಕರ್ ಉಗ್ರರ ದಾಳಿ ಸಾಧ್ಯತೆ : ಕಟ್ಟೆಚ್ಚರ

By Staff
|
Google Oneindia Kannada News

Gujarat, Maharashtra told to beef up coastal security
ನವದೆಹಲಿ, ಜೂ. 30 : ಪಾಕಿಸ್ತಾನ ಮೂಲದ ಲಷ್ಕರ್ ಇ ತೊಯ್ಬಾ ಸಂಘಟನೆ ಭಾರತದ ಕರಾವಳಿ ತೀರದ ಮಹತ್ವದ ಸಂಸ್ಥಾಪನೆಗಳ ಮೇಲೆ ದಾಳಿಗಳನ್ನು ನಡೆಸುವ ಯೋಜನೆ ರೂಪಿಸುತ್ತಿರುವ ಗಂಭೀರ ವಿಷಯವೊಂದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಗುಜರಾತ್, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಿಗೆ ಭಾರಿ ಕಟ್ಟೆಚ್ಚರ ವಹಿಸುವಂತೆ ಕರೆ ನೀಡಲಾಗಿದೆ.

ಲಷ್ಕರ್ ಸಮುದ್ರ ಘಟಕ ಭಾರತದಲ್ಲಿರುವ ಕರಾವಳಿಯಲ್ಲಿರುವ ಮಹತ್ವದ ಸಂಸ್ಥಾಪನೆಗಳ ಮೇಲೆ ದೊಡ್ಡ ಆತ್ಮಾಹುತಿ ದಾಳಿ ನಡೆಸಲು ಯೋಜನೆ ಹಾಕಿಕೊಂಡಿದೆಯೆಂದು ಕೇಂದ್ರ ಭದ್ರತಾ ಸಂಸ್ಥೆಗಳಿಗೆ ಗುಪ್ತಚರ ಮಾಹಿತಿ ಬಂದಿರುವುದಾಗಿ ಅಧಿಕೃತ ಮೂಲಗಳು ತಿಳಿಸಿವೆ. ಕೆಲ ಪಾಕಿಸ್ತಾನಿ ಜಿಹಾದಿ ಗುಂಪುಗಳು, ವಿಶೇಷವಾಗಿ ಎಲ್ ಟಿಟಿಇ ಭಾರತದ ಕರಾವಳಿ ತೀರದ ಪ್ರಮುಖ ಕೇಂದ್ರಗಳ ಮೇಲೆ ದಾಳಿ ಎಸಗಲು ಬಲವಾದ ಪ್ರಯತ್ನಗಳನ್ನು ನಡೆಸುತ್ತಿರುವುದಾಗಿ ಗುಪ್ತಚರ ಮಾಹಿತಿಗಳು ಬಂದಿದ್ದು, ಹಿನ್ನೆಲೆಯಲ್ಲಿ ಅಗತ್ಯ ಕಟ್ಟೆಚ್ಚರ ವಹಿಸುವಂತೆ ಮೂರು ರಾಜ್ಯಗಳಿಗೆ ಸೂಚನೆ ನೀಡಲಾಗಿದೆ.

ಕೆಲ ಲಷ್ಕರ್ ಕಮಾಂಡರ್ ಗಳು ಈಗಾಗಲೇ ಪಾಕಿಸ್ತಾನದಿಂದ ಹೊರಬಿದ್ದಿದ್ದಾರೆ. ಗುಜರಾತ್ ಕಛ್ ವಲಯದಲ್ಲಿ ತಮಗೆ ಸುರಕ್ಷಿತ ತಾಣವನ್ನು ಹುಡುಕುವಂತೆ ತಮ್ಮ ಜನರಿಗೆ ಸೂಚಿಸಿದ್ದಾರೆಂದು ಕೂಡ ಕೇಂದ್ರ ರಾಜ್ಯಗಳಿಗೆ ತಿಳಿಸಿದೆ. ಕರಾವಳಿ ಪ್ರದೇಶಗಳಲ್ಲಿ ಹಾಗೂ ದೂರ ಸಮುದ್ರದಲ್ಲಿ ಗಸ್ತನ್ನು ಬಿಗಿಗೊಳಿಸುವಂತೆ ಮಾತ್ರವಲ್ಲದೆ ಎಲ್ಲ ರಾಜ್ಯಗಳಲ್ಲಿ ಮೀನುಗಾರರ ಸಮುದಾಯವನ್ನು ಎಚ್ಚರಗೊಳಿಸುವಂತೆ ಕೂಡ ಕೇಂದ್ರ ಎಚ್ಚರಿಕೆ ನೀಡಿದೆ.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X