ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬುರ್ಕಾ ನಿಷೇಧ : ಸರ್ಕೋಜಿ ಬೆಂಬಲಿಸಿದ ಠಾಕ್ರೆ
ಶಿವಸೇನೆ ಪಕ್ಷದ ಮುಖವಾಣಿ ಸಾಮ್ನಾದ ಪತ್ರಿಕೆಯ ಈ ವಾರದ ಸಂಪಾಕೀಯದಲ್ಲಿ ಬುರ್ಕಾ ಕುರಿತು ಪ್ರಸ್ತಾಪಿಸಿರುವ ಠಾಕ್ರೆ, ನಿಕೋಲಸ್ ಸರ್ಕೋಜಿ ತೆಗೆದುಕೊಂಡಿರುವ ನಿಲುವಿಗೆ ಅತ್ಯಂತ ಸಂತೋಷ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಬುರ್ಕಾ ನೀತಿಯಿಂದಾಗಿ ಮಹಿಳೆಯರ ಶೋಷಣೆ ನಡೆಯುತ್ತಿದೆ. ಕೂಡಲೇ ಸರಕಾರ ಬುರ್ಕಾ ನಿಷೇಧಕ್ಕೆ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಸರ್ಕೋಜಿ ಅವರನ್ನು ಮನಸಾರೆ ಹೊಗಳಿರುವ ಠಾಕ್ರೆ, ಸರ್ಕೋಜಿ ಫ್ರಾನ್ಸ್ ದೇಶ ಕಂಡ ಅತ್ಯಂತ ಸಮರ್ಥ ಆಡಳಿತಗಾರ ಎಂದಿದ್ದಾರೆ. ಬುರ್ಕಾ ನಿಷೇಧಕ್ಕೆ ಧೈರ್ಯಬೇಕು. ಅಂತಹ ಧರ್ಯವನ್ನು ನಾನು ಸರ್ಕೋಜಿಯಲ್ಲಿ ಕಂಡಿರುವೆ. ಬುರ್ಕಾ ನಾಗರಿಕ ಸಮಾಜಕ್ಕೆ ಕಳಂಕ. ಅದನ್ನು ತೊಲಗಿಸಲು ಎಲ್ಲರೂ ಶ್ರಮಿಸಬೇಕು ಎಂದು ಒತ್ತಾಯಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
Comments
bal thackeray ಶಿವಸೇನೆ ಬಾಳಾ ಠಾಕ್ರೆ islam nicolas sarkozy french burqa ನಿಕೋಲಸ್ ಸರ್ಕೋಜಿ ಬುರ್ಕಾ ಇಸ್ಲಾಂ ಫ್ರೆಂಚ್
Story first published: Tuesday, June 30, 2009, 14:07 [IST]