ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಿಂಗನಮಕ್ಕಿಯಲ್ಲಿ ಬರ... ಅರ್ಧ ಕರ್ನಾಟಕ ಕತ್ತಲಲ್ಲಿ?

By Staff
|
Google Oneindia Kannada News

View of Linganamakki dam in Shivamogga
ಶಿವಮೊಗ್ಗ, ಜೂ.30 : ಭಾರತದ ಹತ್ತು ಪ್ರಮುಖ ಅಣೆಕಟ್ಟುಗಳಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡಿರುವ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನಲ್ಲಿರುವ ಲಿಂಗನಮಕ್ಕಿ ಅಣೆಕಟ್ಟು ಅರ್ಧ ಕರ್ನಾಟಕಕ್ಕೆ ಬೆಳಕು ನೀಡುವ ಅಣೆಕಟ್ಟು ಎಂದೇ ಕರೆಯಲ್ಪಡುತ್ತದೆ. ಆದರೆ, ಈ ಬಾರಿಯ ಮುಂಗಾರು ಕೈಕೊಟ್ಟಿದ್ದರಿಂದ ಲಿಂಗನಮಕ್ಕಿ ಅಣೆಕಟ್ಟು ನೀರಿಲ್ಲದೇ ಬಡಕಲಾಗಿದೆ.

ಶರಾವತಿ ನದಿಗೆ ಕರ್ನಾಟಕ ಸರ್ಕಾರ 1964ರಲ್ಲಿ ನಿರ್ಮಿಸಿದ ಲಿಂಗನಮಕ್ಕಿ ಅಣೆಕಟ್ಟಿನ ವಿಸ್ತಾರ 2.4 ಕಿ.ಮೀ. ನಷ್ಟಿದೆ. ಜೋಗ ಜಲಪಾತದಿಂದ ಕೇವಲ 6 ಕಿ.ಮೀ. ದೂರದಲ್ಲಿರುವ ಈ ಅಣೆಕಟ್ಟಿನಲ್ಲಿ 4368ಮಿಲಿಯನ್ ಕ್ಯುಬಿ ಮೀಟರ್ ನೀರು ಸಂಗ್ರಹಣೆಯ ಸಾಮರ್ಥ್ಯವಿದೆ.

ಈ ಅಣೆಕಟ್ಟನ್ನು ನಂಬಿಕೊಂಡು ಸುತ್ತಲಿನ 300 ಕಿ.ಮೀ. ವ್ಯಾಪ್ತಿಯಲ್ಲಿ ಜನ ಬದುಕುತ್ತಿದ್ದಾರೆ. ಸಮುದ್ರಮಟ್ಟದಿಂದ 1819 ಅಡಿ ಎತ್ತರವಿರುವ ಈ ಅಣೆಕಟ್ಟು ಅಂತಿಮವಾಗಿ ಮೈದುಂಬಿಕೊಳ್ಳುವುದು ಮಳೆಯಿಂದಲೇ. ಮಳೆ ಬಿಟ್ಟರೆ ಈ ಅಣೆಕಟ್ಟಿಗೆ ಜೀವ ಜಲ ಬರುವುದು ಚಕ್ರ ಹಾಗೂ ಸಾವೇಹಕ್ಲು ಪ್ರದೇಶದಿಂದ. ಈ ಅಣೆಕಟ್ಟು ಇದೀಗ ಮಳೆಯಿಲ್ಲದೇ ನರಳುತ್ತಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X