ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸದ್ಯಕ್ಕೆ ಪೆಟ್ರೋಲ್ ಬೆಲೆ ಏರಿಕೆ ಇಲ್ಲ: ಡಿಯೋರಾ

By Staff
|
Google Oneindia Kannada News

No immediate hike in petrol prices: Deora
ನವದೆಹಲಿ, ಜೂ.29: ಜಾಗತಿಕ ಕಚ್ಚಾ ತೈಲ ಬೆಲೆಗಳ ಏರಿಳಿತವನ್ನು ಕೇಂದ್ರ ಸರ್ಕಾರ ಸೂಕ್ಷ್ಮವಾಗಿ ಗಮನಿಸುತ್ತಿದೆ, ಜಾಗತಿಕ ಮಟ್ಟದಲ್ಲಿ ಬೆಲೆ ಏರಿಕೆ ಕಂಡಿದೆ. ಆದರೂ, ಸದ್ಯದ ಪರಿಸ್ಥಿತಿಯಲ್ಲಿ ಪೆಟ್ರೋಲ್ ಉತ್ಪನ್ನಗಳ ಬೆಲೆ ಏರಿಕೆ ಮಾಡುವುದಿಲ್ಲ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವ ಮುರಳಿ ಡಿಯೋರಾ ಸುದ್ದಿಗಾರರಿಗೆ ತಿಳಿಸಿದರು.

ಮುಂಬರುವ ದಿನಗಳಲ್ಲಿ ಪೆಟ್ರೋಲ್ ಬೆಲೆ ಏರಿಕೆ ಆಗಬಹುದು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಏರಿಳಿತದ ಮೇಲೆ ಎಲ್ಲಾ ನಿಶ್ಚಯವಾಗಲಿದೆ. ಪೆಟ್ರೋಲ್ ಬೆಲೆ ರು. 2 ರಿಂದ 5 ಹಾಗೂ ಡೀಸೆಲ್ ಬೆಲೆ ರು 2 ರಷ್ಟು ಏರಿಸುವ ಸಾಧ್ಯತೆಗಳಿವೆ. ಆದರೆ, ಏರಿಕೆ ಪ್ರಮಾಣ ಮುಂದಿನ ಸಂಪುಟ ಸಭೆ ನಡೆದ ನಂತರವಷ್ಟೇ ತಿಳಿಸಲು ಸಾಧ್ಯ ಎಂದು ಸಚಿವರು ಹೇಳಿದರು.

ಈ ಮಧ್ಯೆ ಪೆಟ್ರೋಲಿಯಂ ಖಾತೆ ರಾಜ್ಯ ಸಚಿವ ಜಿತಿನ್ ಪ್ರಸಾದ್ ಅವರು ಗೋವಾ ಮುಖ್ಯಮಂತ್ರಿ ದಿಗಂಬರ್ ಕಾಮತ್ ಜೊತೆ ಮಾತುಕತೆ ನಡೆಸಿದ್ದು, ಡಬೋಲ್ ನಿಂದ ಬೆಂಗಳೂರಿಗೆ ಅನಿಲ ಕೊಳವೆ (gas pipeline) ಹಾಕುವ ಯೋಜನೆಗೆ ಕೇಂದ್ರದ ನೆರವು ನೀಡುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ. 2012 ರಲ್ಲಿ ಪೂರ್ಣಗೊಳ್ಳಬೇಕಾಗಿರುವ ಈ ಯೋಜನೆ ಇನ್ನೂ 400 ಕಿ.ಮೀ ಹೆಚ್ಚಿನ ದೂರವನ್ನು ಕ್ರಮಿಸಲು ಯಾವುದೇ ಅಡಚಣೆ ಆಗದಂತೆ ನೋಡಿಕೊಳ್ಳಲಾಗುವುದು ಎಂದು ಜಿತಿನ್ ಹೇಳಿದ್ದಾರೆ. ಈ ಯೋಜನೆಯಿಂದ ಗೋವಾದಲ್ಲಿನ ಕೈಗಾರಿಕೆ ಹಾಗೂ ಗೃಹ ಬಳಕೆಗೆ ಅನಿಲ ಪೂರೈಕೆ ಮಾಡಲಾಗುವುದು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X