ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಹಿತಿ ಬಿ.ಎಸ್.ವೆಂಕಟಲಕ್ಷ್ಮಿ ವಿಧಿವಶ

By Staff
|
Google Oneindia Kannada News

ಬೆಂಗಳೂರು, ಜೂ. 28: ಹಿರಿಯ ಪತ್ರಕರ್ತೆ, ಸಾಹಿತಿ ಬಿ.ಎಸ್. ವೆಂಕಟಲಕ್ಷ್ಮಿ (63) ಅವರು ಹೃದಯಾಘಾತದಿಂದ ಶನಿವಾರ ಬೆಂಗಳೂರಿನಲ್ಲಿ ನಿಧನರಾದರು. ವೆಂಕಟಲಕ್ಷ್ಮಿ ಅವರು ಕನ್ನಡ ಪತ್ರಿಕೋದ್ಯಮದಲ್ಲಿ ಬಹಳ ಸಾಧನೆ ಮಾಡಿದವರು. ವಾರ್ತಾ ಇಲಾಖೆಯಲ್ಲಿ ಸುಮಾರು 15 ವರ್ಷಗಳ ಕಾಲ ಸಹಾಯಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.

ಸುಧಾ, ಮಯೂರ, ಪ್ರಜಾವಾಣಿ, ಲಂಕೇಶ್, ಹಾಯ್ ಬೆಂಗಳೂರು ಪತ್ರಿಕೆಗಳಲ್ಲಿ ಪ್ರಚಲಿತ ವಿಷಯಗಳ ಮೇಲೆ ನಿರಂತರ ಲೇಖನಗಳನ್ನು ಬರೆಯುವ ಜತೆಗೆ
ಹವ್ಯಾಸಿ ಪತ್ರಕರ್ತರಾಗಿ ಗಮನ ಸೆಳೆದಿದ್ದರು. ಮಯೂರ ನಿಯತಕಾಲಿಕ ದಲ್ಲಿ ಪತ್ನಿಯರು ಕಂಡಂಥ ಪ್ರಸಿದ್ಧರು' ಎನ್ನುವ ಅವರ ಅಂಕಣ ಹೆಚ್ಚು ಜನಪ್ರಿಯತೆ ಪಡೆದಿತ್ತು.ಕಳೆದ 9 ವರ್ಷದಿಂದ ಚರ್ಚೆಗೊಂದು ಚಾವಡಿ' ಎಂಬ ಮಾಸಿಕ ಪತ್ರಿಕೆಯನ್ನು ನಡೆಸುತ್ತಿದ್ದರು.ಅವರ ಬದುಕು- ಬವಣೆ-ಭರವಸೆ' ಎಂಬ ಗ್ರಂಥಕ್ಕೆ ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿತ್ತು. ಅಲ್ಲದೆ ಮಲ್ಲಿಕಾರ್ಜುನ ಮನ್ಸೂರ್ ಹಾಗೂ ಎಂ.ಬಿ. ಪಾಟೀಲ್ ಅವರ ಬಗ್ಗೆಯೂ ಪುಸ್ತಕ ರಚಿಸಿದ್ದರು.

ಲೇಖನಿ ಮೂಲಕ ಸಾಮಾಜಿಕ ಸೇವೆಯಲ್ಲಿ ತೊಡಗಿಕೊಂಡಿದ್ದ ವೆಂಕಟಲಕ್ಷ್ಮಿ, ತಮ್ಮ ದೇಹವನ್ನು ಸೇಂಟ್ ಜಾನ್ಸ್ ಆಸ್ಪತ್ರೆ ಹಾಗೂ ಕಣ್ಣುಗಳನ್ನು ಲಯನ್ಸ್ ಕಣ್ಣಾಸ್ಪತ್ರೆಗೆ ದಾನ ಮಾಡಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X