ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಂಕಾ ತ್ರಿಕೋನ ಸರಣಿಗೆ ಭಾರತ, ನ್ಯೂಜಿಲೆಂಡ್

By Staff
|
Google Oneindia Kannada News

ನವದೆಹಲಿ, ಜೂ.28: ಚಾಂಪಿಯನ್ಸ್ ಟ್ರೋಫಿ ಆರಂಭಕ್ಕೂ ಮುನ್ನ ಭಾರತ ತಂಡ ಸೆಪ್ಟೆಂಬರ್‌ನಲ್ಲಿ ಶ್ರೀಲಂಕಾದಲ್ಲಿ ನಡೆಯಲಿರುವ ಏಕದಿನ ತ್ರಿಕೋನ ಕ್ರಿಕೆಟ್ ಸರಣಿಯಲ್ಲಿ ಪಾಲ್ಗೊಳ್ಳಲಿದೆ. ಭಾರತ ಅಲ್ಲದೇ ಆತಿಥೇಯ ಶ್ರೀಲಂಕಾ ಮತ್ತು ನ್ಯೂಜಿಲೆಂಡ್ ಈ ಸರಣಿಯಲ್ಲಿ ಪಾಲ್ಗೊಳ್ಳಲಿರುವ ಮೂರು ತಂಡಗಳಾಗಿವೆ ಎಂದು ಬಿಸಿಸಿಐ ಪ್ರಕಟಿಸಿದೆ.

ಬಿಸಿಸಿಐ ಶನಿವಾರದಂದು ಈ ವಿಷಯ ಪ್ರಕಟಿಸಿದ್ದು ಶೀಘ್ರದಲ್ಲಿಯೇ ಶ್ರೀಲಂಕಾ ಮಂಡಳಿ ಕಾರ್ಯಕ್ರಮ ಪಟ್ಟಿಯನ್ನು ಸಿದ್ಧಪಡಿಸಲಿದೆ ಎಂದು ತಿಳಿಸಿದೆ. ಒಟ್ಟು 4 ಏಕದಿನ ಪಂದ್ಯಗಳನ್ನು ಒಳಗೊಂಡಿ ರುವಟೂರ್ನಿಯಲ್ಲಿ ತಂಡಗಳು ಪರಸ್ಪರ ಒಮ್ಮೆ ಮುಖಾಮುಖಿಯಾಗಲಿದ್ದು, ಅಗ್ರಸ್ಥಾನ ಪಡೆಯಲಿರುವ ಎರಡು ತಂಡಗಳು ಫೈನಲ್‌ನಲ್ಲಿ ಸೆಣಸಲಿವೆ ಎಂದು ಬಿಸಿಸಿಐ ಕಾರ್ಯದರ್ಶಿ ಎನ್. ಶ್ರೀನಿವಾಸನ್ ಹೇಳಿದರು. ಈ ಮಧ್ಯೆ ಲಂಡನ್‌ನಲ್ಲಿ ನಡೆದ ಐಸಿಸಿ ಸಭೆ ಮುಗಿಸಿ ತವರಿಗೆ ವಾಪಸಾಗಿರುವ ಶ್ರೀಲಂಕಾ ಮಂಡಳಿ ಕಾರ್ಯದರ್ಶಿ ನಿಶಾಂತ ರಣತುಂಗ ಮಾತನಾಡಿ, ಈ ಟೂರ್ನಿಯನ್ನು ಆಗಸ್ಟ್ 4ರಿಂದ 6ರವರೆಗೆ ನಡೆಸುವ ಸಾಧ್ಯತೆಯಿದೆ ಎಂದರು.

ಭಾರತ ಸದ್ಯ ವೆಸ್ಟ್ ಇಂಡೀಸ್ ಪ್ರವಾಸದಲ್ಲಿದ್ದು, ನಾಲ್ಕು ಏಕದಿನ ಪಂದ್ಯಗಳ ಸರಣಿಯನ್ನು ಆಡುತ್ತಿದೆ. ಸರಣಿಯ ಮೊದಲ ಪಂದ್ಯ ಭಾರತದ ಪಾಲಾಗಿದ್ದು, ಎರಡನೇ ಪಂದ್ಯ ಕಿಂಗ್ಸ್ ಟನ್ ನಲ್ಲಿ ಜೂ. 28 ರಂದು ನಡೆಯಲಿದೆ.ಸೆಪ್ಟೆಂಬರ್ ನಲ್ಲಿ ನಡೆಯುವ ಚಾಂಪಿಯನ್ಸ್ ಟ್ರೋಫಿಗೆ ಈ ತ್ರಿಕೋನ ಸರಣಿ ಸಹಾಯಕವಾಗಲಿದೆ. ಆಟಗಾರಗಳ ದೈಹಿಕ ಸಾಮರ್ಥ್ಯದ ಬಗ್ಗೆ ನಿಗಾ ಇಡಲಾಗುವುದು ಎಂದು ಬಿಸಿಸಿಐ ಹೇಳಿದೆ.

(ದಟ್ಸ್ ಕನ್ನಡ ಕ್ರೀಡಾ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X