ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ಮಾರ್ಟ್ ಕಾರ್ಡ್ ಯೋಜನೆಗೆ ಸಿಎಂ ಚಾಲನೆ

By Staff
|
Google Oneindia Kannada News

ಬೆಂಗಳೂರು, ಜೂ. 26 : ಸಾರಿಗೆ ಇಲಾಖೆಯಿಂದ ನೀಡಲಾಗುತ್ತಿರುವ ಸ್ಮಾರ್ಟ್‌ಕಾರ್ಡ್'ಅತ್ಯಂತ ನಾಗರಿಕ ಸ್ನೇಹಿ ಹೆಜ್ಜೆ, ಮಾಹಿತಿ ತಂತ್ರಜ್ಞಾನವನ್ನು ಅಭಿವೃದ್ಧಿಗೆ, ನಾಗರಿಕರ ಅನುಕೂಲತೆಗಳಿಗಾಗಿ ಬಳಕೆ ಮಾಡಿದ್ದು ಅಂಗೈ ಅಗಲದ ಕಾರ್ಡಿನಲ್ಲಿ ಸಮಸ್ತ ಮಾಹಿತಿಯೂ ಅಡಕವಾಗೊಂಡಿದೆ. ಇದು ದೇಶದಲ್ಲಿಯೇ ಪ್ರಥಮ ಹೆಜ್ಜೆಯಾಗಿದೆಯೆಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ಕರ್ನಾಟಕ ರಾಜ್ಯ ಸಾರಿಗೆ ಇಲಾಖೆ ಗಣಕೀಕೃತ ಸೇವೆ ನೀಡಲು ಸಿದ್ದಗೊಳಿಸರುವ 'ಸ್ಮಾರ್ಟ್ ಕಾರ್ಡ್' ನ್ನು ಇಂದು ವಿಧಾನಸೌಧದಲ್ಲಿ ಬಿಡುಗಡೆ ಮಾಡಿ ಮಾತನಾಡಿದರು.

ಬೆಂಗಳೂರು ನಗರದ 5 ಪ್ರಾದೇಶಿಕ ಸಾರಿಗೆ ಕಛೇರಿಗಳಲ್ಲಿ ಈ ಯೋಜನೆ ಕಾರ್ಯಾರಂಭಗೊಂಡಿದ್ದು, ಉಳಿದ 50 ಪ್ರಾದೇಶಿಕ ಸಾರಿಗೆ ಕಛೇರಿಗಳಲ್ಲಿ ಹಂತ ಹಂತವಾಗಿ ಸೆಪ್ಟೆಂಬರ್ 2009 ರೊಳಗೆ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು. ಸಾರಿಗೆ ಮತ್ತು ಸಂಪರ್ಕ ಅಭಿವೃದ್ಧಿಗೆ ಅತ್ಯಂತ ಮುಖ್ಯ. ಜನಸಾಮಾನ್ಯರ ಸೌಲಭ್ಯಕ್ಕಾಗಿ ಸಾರಿಗೆ ಸೌಲಭ್ಯಗಳನ್ನು ಅತ್ಯುತ್ತಮಗೊಳಿಸಲು ಪ್ರಯತ್ನಿಸಲಾಗುತ್ತಿದೆ ಎಂದರು

ನಾಲ್ಕು ಕಂದಾಯ ವಿಭಾಗಗಳಲ್ಲಿ ಭಾರಿ ವಾಹನಗಳ ಚಾಲನಾ ತರಬೇತಿ ಆರಂಭಿಸಲಾಗುತ್ತಿದೆ. ಚಾಲಕರ ಕಲ್ಯಾಣ ಕಾರ್ಯಕ್ರಮಗಳಿಗಾಗಿ 2 ಕೋಟಿ ರೂ. ಮೀಸಲಿಡಲಾಗಿದೆ. ಸರಕು ವಾಹನಗಳು ಅಧಿಕ ಭಾರ ಹೊತ್ತೊಯ್ಯುವುದನ್ನು ನಿಯಂತ್ರಿಸಲು ಪ್ರಮುಖ ರಸ್ತೆಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಮುಖ್ಯ ರಸ್ತೆಗಳಲ್ಲಿ ಮೂಲಭೂತ ಸೌಲಭ್ಯ ಕಲ್ಪನೆಗಾಗಿ 3 ಕೋಟಿ ರೂ. ಒದಗಿಸಲಾಗಿದೆಯೆಂದು ಮುಖ್ಯಮಂತ್ರಿಗಳು ತಿಳಿಸಿದರು.

(ದಟ್ಸ್ ಕನ್ನಡವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X