ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ರಿಯಾಶೀಲ ಯುವಪೀಳಿಗೆಗೊಂದು ಹೊಸ ಸ್ಪರ್ಧೆ

By Staff
|
Google Oneindia Kannada News

ಬೆಂಗಳೂರು, ಜೂ. 24: ನಾವು ಬಾಳುತ್ತಿರುವ ಸಮಾಜಕ್ಕೆ ಏನಾದರೂ ಸೇವೆ ಸಲ್ಲಿಸಬೇಕು ಎಂದು ಹಾತೊರೆಯುತ್ತಿರುವ ಯುವ ಜನಾಂಗಕ್ಕೆ ಇಲ್ಲಿದೆ ಸೃಜನಶೀಲ ಅವಕಾಶ. ಯುವಕ/ತಿಯರು ತಮ್ಮಿಷ್ಟದ ಕ್ಷೇತ್ರಗಳಲ್ಲಿ ಸಮಾಜಿಕ ಅಭಿವೃದ್ಧಿ ಕಾರ್ಯಕ್ರಮ ಆಯೋಜಿಸಿ ಪುರಸ್ಕೃತರಾಗಬಹುದು.

ಅರ್ಥಪೂರ್ಣ ಸಮಾಜ ಸೇವಕರನ್ನು ಗುರುತಿಸಿ, ಗೌರವಿಸುತ್ತಾ ಬಂದಿರುವ ಬೆಂಗಳೂರಿನ ಸಮಾಜ ಸೇವಕರ ಸಮಿತಿ ತನ್ನ ವಾರ್ಷಿಕೋತ್ಸವವನ್ನು ಸಮಾಜ ಸೇವಕರ ದಿನಾಚರಣೆ ಎಂದು ಘೋಷಿಸಿ ಆಚರಿಸುತ್ತಾ ಬಂದಿದೆ.ಆಗಸ್ಟ್-1ರಂದು ಏಳನೇ ವಾರ್ಷಿಕೋತ್ಸವದ ಅಂಗವಾಗಿ ರಾಜ್ಯಮಟ್ಟದ ಸಾಮಾಜಿಕ ಅಭಿವೃದ್ಧಿಯ ಚಟುವಟಿಕೆ ಆಯೋಜನಾ ಸ್ಪರ್ಧೆಯನ್ನು ಶಿಕ್ಷಣ,ಪರಿಸರ,ಸಾಹಿತ್ಯ,ಕಲೆ,ಸಂಗೀತ ಮತ್ತು ಕ್ರೀಡೆ ಈ ಕ್ಷೇತ್ರಗಳಲ್ಲಿ ಏರ್ಪಡಿಸಿದೆ.

ಕೇವಲ 15 ದಿನಗಳಲ್ಲಿ,ಅತ್ಯಂತ ಕಡಿಮೆ ಖರ್ಚಿನಲ್ಲಿ ಕಾರ್ಯರೂಪುಗೊಂಡು ಯಶಸ್ವಿಯಾದ 5 ಅತ್ಯುತ್ತಮ ಕಾರ್ಯಚಟುವಟಿಕೆಗಳಿಗೆ ಆಗ ಸ್ಟ್ 1 ರಂದು ನಡೆಯುವ ಕಾರ್ಯಕ್ರಮದಲ್ಲಿ ಬಹುಮಾನ ನೀಡಲಾಗುತ್ತದೆ.ಆಸಕ್ತ ವ್ಯಕ್ತಿಗಳು/ಸಂಸ್ಥೆಗಳು ತಮ್ಮ ಸ್ವವಿವರಗಳೊಂದಿಗೆ ಸಮಿತಿಯನ್ನು ಸಂಪರ್ಕಿಸಬಹುದು.

1.ಶಿಕ್ಷಣ ಕ್ಷೇತ್ರ
2. ಪರಿಸರ ನೈರ್ಮಲ್ಯ ಮತ್ತು ಸಂರಕ್ಷಣೆ
3. ಸಾಹಿತ್ಯ, ಸಂಗೀತ, ಚಿತ್ರಕಲೆ.
4. ಕ್ರೀಡೆ.

ನಿಯಮಗಳು:
1. ಭಾಗವಹಿಸುವ ವ್ಯಕ್ತಿ/ಸಂಸ್ಥೆಯು ಅತ್ಯಂತ ಕಡಿಮೆ ಖರ್ಚಿನಲ್ಲಿ ತಮ್ಮ ಕಾರ್ಯ ಯೋಜನೆಯನ್ನು ಪೂರ್ಣಗೊಳಿಸಬೇಕು. ಗರಿಷ್ಠ ಖರ್ಚು ರು1000 ಮಾತ್ರ ಮಾಡಿರಬೇಕು.
2. ಕೇವಲ ಹದಿನೈದು ದಿವಸಗಳೊಳಗಾಗಿ ಈ ಯೋಜನೆಯನ್ನು ಕಾರ್ಯರೂಪಕ್ಕೆ ತಂದಿರಬೇಕು.
3. ಮೇಲ್ಕಂಡ ನಿಬಂಧನೆಗಳಿಗೆ ಬದ್ಧರಾಗಿರುವ ಸಾಕ್ಷಿಗಾಗಿ ಪುರಾವೆಗಳನ್ನು(ಛಾಯಾಚಿತ್ರ,ರಸಿತಿಗಳು) ಹೊಂದಿರಬೇಕು.
4. ಸಮಾಜ ಸೇವಕರ ಸಮಿತಿಯು 5 ಉತ್ತಮ ಯೋಜನೆಗಳನ್ನು ಗುರುತಿಸಿ ಬಹುಮಾನವನ್ನು ನಿರ್ಧರಿಸುತ್ತದೆ. ಗರಿಷ್ಠ ಖರ್ಚು ಮಾಡಿರುವ ಮೊಬಲಗನ್ನು ಈ ಐದು ಬಹುಮಾನ ವಿಜೇತರಿಗೆ ಮಾತ್ರ ಹಿಂತಿರುಗಿಸಲಾಗುತ್ತದೆ. ಸಮಿತಿಯ ನಿರ್ಧಾರವೇ ಅಂತಿಮ.
5.ಪೂರ್ಣಗೊಂಡ ಯೋಜನೆಯ ವಿವರಗಳನ್ನು ಸಮಿತಿಗೆ ಸಲ್ಲಿಸುವ ಕಡೆಯ ದಿನಾಂಕ 15-ಜುಲೈ2009
6. ಬಹುಮಾನಗಳನ್ನು ಆಗಸ್ಟ್ -1 ರಂದು ನಡೆಯುವ ಕಾರ್ಯಕ್ರಮದಲ್ಲಿ ನೀಡಲಾಗುವುದು.
7. ಈ ಸ್ಪರ್ಧೆಗೆ ಯಾವುದೇ ಪ್ರವೇಶ ಧನ ಇರುವುದಿಲ್ಲ.

ಸೂಚನೆ: ಅತ್ಯಂತ ಕಡಿಮೆ ಹಣ ಬಳಸಿ ಸೃಜನಶೀಲವಾಗಿ ಅಭಿವೃದ್ಧಿ ಕಾರ್ಯ ಎಂದು ತೋರಿಸುವ ಕ್ರಿಯಾಶೀಲರಿಗೆ ಆದ್ಯತೆ.

ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ:
ರಾಜಕುಮಾರ್ :9448171069
ರಾಘವೇಂದ್ರ :98866 83008

ಅಂಚೆ ವಿಳಾಸ:
ಸಮಾಜ ಸೇವಕರ ಸಮಿತಿ
171, ಸುಬ್ಬರಾಮ ಚೆಟ್ಟಿ ರಸ್ತೆ,
ನೆಟ್ಟಕಲ್ಲಪ್ಪ ಬಸ್ ನಿಲ್ದಾಣದ ಹಿಂಭಾಗ,
ಬಸವನಗುಡಿ, ಬೆಂಗಳೂರು - 560004

ಈ-ಮೇಲ್ ವಿಳಾಸ : [email protected]
(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X