ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜನತೆ ನೀಡಿದ ತೀರ್ಪನ್ನು ಒಪ್ಪಿಕೊಳ್ಳುವೆ : ಅಡ್ವಾಣಿ

By Staff
|
Google Oneindia Kannada News

LK Advani
ವಿರಾಜಪೇಟೆ, ಡೂ. 24 : ಮತ್ತೊಮ್ಮೆ ಪಕ್ಷದ ಅಧ್ಯಕ್ಷ ಹುದ್ದೆ ವಹಿಸಿಕೊಳ್ಳುವ ಇಚ್ಚೆ ತಮಗಿಲ್ಲ ಎಂದು ಬಿಜೆಪಿ ಹಿರಿಯ ಮುಖಂಡ ಎಲ್ ಕೆ ಅಡ್ವಾಣಿ ಹೇಳಿದ್ದಾರೆ. ವಿಶ್ರಾಂತಿಗಾಗಿ ಕೊಡಗಿಗೆ ಆಗಮಿಸಿರುವ ಅಡ್ವಾಣಿ ತಮ್ಮನ್ನು ಭೇಟಿ ಮಾಡಿದ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

ತಾವು ಮತ್ತೊಮ್ಮೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳುವ ಬಗ್ಗೆ ದಿಲ್ಲಿಯ ಮಾಧ್ಯಮಗಳ್ಳಿ ವರದಿ ಪ್ರಕಟವಾಗಿದೆ. ಆದರೆ, ಮತ್ತೊಮ್ಮೆ ರಾಷ್ಟ್ರೀಯ ಅಧ್ಯಕ್ಷ ಸ್ಥಾನದ ವಹಿಸಿಕೊಳ್ಳುವ ಇಚ್ಚೆ ತಮಗಿಲ್ಲ. ಪ್ರಸ್ತುತ ಅಧ್ಯಕ್ಷ ರಾಜನಾಥ್ ಸಿಂಗ್ ಪಕ್ಷವನ್ನು ಉತ್ತಮವಾಗಿ ನಡೆಸುತ್ತಿದ್ದಾರೆ ಎಂದರು. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನ ಪಡೆಯುತ್ತದೆ ಎಂಬ ನಿರೀಕ್ಷೆ ಇತ್ತು. ಅದು ಈಡೇರಲಿಲ್ಲ. ಆದಕ್ಕೆ ಈಗೇನು ಮಾಡಲಾಗುವುದಿಲ್ಲ. ಕೇಂದ್ರದಲ್ಲಿ ಸ್ಥಿರ ಸರಕಾರಕ್ಕಾಗಿ ಕಾಂಗ್ರೆಸ್ ನೇತೃತ್ವದ ಯುಪಿಎಗೆ ರಾಷ್ಟ್ರದ ಜನತೆ ಬೆಂಬಲ ನೀಡಿದ್ದಾರೆ ಎಂದು ಆಡಳಿತರೂಢ ಪಕ್ಷದವರು ಹೇಳುವುದನ್ನು ಒಪ್ಪುತ್ತೇನೆ. ರಾಷ್ಟ್ರದ ಜನತೆ ನೀಡಿದ ತೀರ್ಪಿಗೆ ತಲೆಬಾಗುತ್ತೇನೆ ಎಂದು ಅವರು ಹೇಳಿದರು.

ಮೂರಂಕಿ ಸ್ಥಾನ ಪಡೆಯುವುದು ಕಾಂಗ್ರೆಸ್ ಮತ್ತು ಬಿಜೆಪಿಗೆ ಮಾತ್ರ ಸಾಧ್ಯವಾಗಿದೆ. ದೇಶದಲ್ಲಿ ತನಗೆ ಅಪಾರ ಬೆಂಬಲವಿದೆ ಎಂದು ಹೇಳಿಕೊಳ್ಳುತ್ತಿದ್ದ ಕಮ್ಯುನಿಸ್ಟ್ ಪಕ್ಷಗಳು ತನ್ನ ಬಲ ಕಳೆದುಕೊಂಡಿವೆ. ಬಿಜೆಪಿಗೆ 116 ಸ್ಥಾನಗಳು ಬಂದರೆ, ಅವರಿಗೆ ಕೇವಲ 16 ಸ್ಥಾನ ಸಿಕ್ಕಿವೆ ಎಂದು ಹೇಳಿದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X