ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ವೆಂಟಿ-20 ಕ್ರಿಕೆಟ್ ಗೆ ಯೂನಿಸ್ ಅಲ್ವಿದಾ

By Staff
|
Google Oneindia Kannada News

Younis Khan
ಲಾರ್ಡ್ಸ್, ಜೂ. 22 : ಪಾಕಿಸ್ತಾನಕ್ಕೆ 2009ರ ಟ್ವೆಂಟಿ-20 ವಿಶ್ವಕಪ್ ಗೆದ್ದುಕೊಟ್ಟ ಪಾಕಿಸ್ತಾನ ಕ್ರಿಕೆಟ್ ತಂಡದ ತಂಡದ ನಾಯಕ ಯೂನಿಸ್ ಖಾನ್ ಟ್ವೆಂಟಿ-20 ಅಂತಾರಾಷ್ಟ್ರೀಯ ಪಂದ್ಯಗಳಿಗೆ ವಿದಾಯ ಹೇಳುವ ಕ್ರಿಕೆಟ್ ಜಗತ್ತಗೆ ಅಚ್ಚರಿ ಮೂಡಿಸಿದ್ದಾರೆ. ಘಟಾನುಘಟಿ ತಂಡಗಳನ್ನು ಮಣಿಸಿ ಫೈನಲ್ ಪಂದ್ಯದಲ್ಲಿ ಶ್ರೀಲಂಕ ತಂಡವನ್ನು ಅತ್ಯಂತ ಸಮರ್ಕಕವಾಗಿ ಸೋಲಿಸುವ ಮೂಲಕ ಪಾಕಿಸ್ತಾನಕ್ಕೆ ಮೊದಲ ಟ್ವೆಂಟಿ -20 ವಿಶ್ವಕಪ್ ಗೆದ್ದುಕೊಟ್ಟ ಯಶಸ್ವಿ ನಾಯಕ ಯೂನೀಸ್ ಖಾನ್ ಏಕಾಏಕಿ ಟ್ವೆಂಟಿ-20 ಪಂದ್ಯಾವಳಿಗೆ ರಾಜೀನಾಮೆ ಘೋಷಿಸಿರುವುದು ಅಭಿಮಾನಿಗಳಲ್ಲಿ ತೀವ್ರ ನಿರಾಶೆ ಉಂಟು ಮಾಡಿದೆ.

ಇದು ನನ್ನ ಕೊನೆಯ ಟ್ವೆಂಟಿ-20 ಅಂತಾರಾಷ್ಟ್ರೀಯ ಪಂದ್ಯ. ದೇಶಕ್ಕೆ ವಿಶ್ವಕಪ್ ಗಳಿಸಿಕೊಟ್ಟ ಸಂತೋಷ ನನ್ನಲ್ಲಿದೆ. ಟ್ವೆಂಟಿ-20 ಕ್ರಿಕೆಟ್ ಆಡುವ ವಯಸ್ಸು ನನ್ನದಲ್ಲ. ಇದಕ್ಕೆ ಯುವಕರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು. ಟೆಸ್ಟ್ ಮತ್ತು ಏಕದಿನ ಕ್ರಿಕೆಟ್‌ನತ್ತ ಹೆಚ್ಚಿನ ಗಮನ ಹರಿಸುವ ಸಲುವಾಗಿ ವಿದಾಯ ಹೇಳುತ್ತಿದ್ದೇನೆ. ಪಾಕ್ ತಂಡದಲ್ಲಿ ಯುವಪ್ರತಿಭಾವಂತ ಆಟಗಾರರಿದ್ದಾರೆ. ಅವರು ದೇಶದ ಹೆಸರು ಮಿಂಚುವಂತೆ ಮಾಡಬಲ್ಲರು ಎಂದು ಹೇಳಿಕೆ ನೀಡಿದ್ದಾರೆ.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X