ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರ‌್ಯಾಗಿಂಗ್ ತಡೆಗೆ ಹೆಲ್ಪ್ ಲೈನ್ 1800 180 5522

By Staff
|
Google Oneindia Kannada News

Kapil Sibal
ನವದೆಹಲಿ, ಜೂ.21:ಶಾಲಾ, ಕಾಲೇಜುಗಳಲ್ಲಿ ರ‌್ಯಾಗಿಂಗ್ ನಂತ ಅಮಾನವೀಯ ಕೃತ್ಯ ನಡೆಯದಂತೆ ತಡೆಯಲು ಕೇಂದ್ರ ಸರ್ಕಾರ ಮುಂದಾಗಿದ್ದು, ಉಚಿತ ದೂರವಾಣಿ ಸಂಖ್ಯೆಯನ್ನು ಸಾರ್ವಜನಿಕ ಸೇವೆಗೆ ಮುಕ್ತಗೊಳಿಸಿದೆ. ರಾಘವನ್ ಸಮಿತಿ ವರದಿ ಮೇರೆಗೆ ಸುಪ್ರೀಂ ಕೋರ್ಟ್ ಹೆಲ್ಪ್ ಲೈನ್ ಆರಂಭಿಸುವಂತೆ ನಿರ್ದೇಶನ ನೀಡಿತ್ತು.

ದೆಹಲಿಯಲ್ಲಿ ಕೇಂದ್ರೀಕೃತವಾದ ಈ ಕಾಲ್ ಸೆಂಟರ್ ಗೆ ರ‌್ಯಾಗಿಂಗ್ ಗೆ ಒಳಗಾದ ವಿದ್ಯಾರ್ಥಿ ಕರೆ ನೀಡಿದ 15 ನಿಮಿಷಗಳಲ್ಲಿ ತಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಪ್ರಕ್ರಿಯೆ ಆರಂಭವಾಗುತ್ತದೆ. 24 ಗಂಟೆಗಳ ಕಾಲ ಕಾರ್ಯ ನಿರ್ವಹಿಸುವ ಈ ಹೆಲ್ಪ್ ಲೈನ್ ಅಲ್ಲದೆ ಇನ್ನೊಂದು ಸಂಖ್ಯೆ 155222 ಸ್ಥಾಪಿಸಲೂ ಕ್ರಮ ಕೈಗೊಳ್ಳಲಾಗುವುದು. ದೂರುಗಳನ್ನು [email protected] ಗೂ ಕಳುಹಿಸಬಹುದು ಎಂದು ಮಾನವ ಸಂಪನ್ಮೂಲ ಸಚಿವ ಕಪಿಲ್ ಸಿಬಲ್ ತಿಳಿಸಿದರು.

ಎಜುಕೇಶನ್ ಕನ್ಸಲ್ಟನ್ಸಿ ಇಂಡಿಯಾ ಲಿ(ಇಡಿಸಿಐಎಲ್) ಮತ್ತು ಬಿಎಸ್ ಎನ್ ಎಲ್ ಯುಜಿಸಿ ಪರವಾಗಿ ಹೆಲ್ಪ್ ಲೈನ್ ಕಾರ್ಯ ನಿರ್ವಹಣೆ ಮಾಡುತ್ತಿವೆ. ಯುಜಿಸಿಯ ಎಲ್ಲಾ ಕಾಲೇಜಿನ ವಿದ್ಯಾರ್ಥಿಗಳ ವಿವರ ಸಂಗ್ರಹ ಮಾಡಿ, ದೂರು ಬಂದಾಗ ಪರಿಶೀಲಿಸಿ ಪ್ರತಿಕ್ರಿಯೆ ನೀಡಲಾಗುತ್ತದೆ. ಪ್ರತಿ ದೂರಿಗೆ ನೋಂದಣಿ ಸಂಖ್ಯೆ ಇರುತ್ತದೆ. ಸಂಬಂಧಪಟ್ಟ ಕಾಲೇಜಿನ ಪ್ರಾಚಾರ್ಯರಿಗೆ, ಹಾಸ್ಟೆಲ್ ವಾರ್ಡನ್ ಗೆ, ಜಿಲ್ಲಾ ಪೋಲೀಸ್ ಮುಖ್ಯಸ್ಥರಿಗೆ, ಜಿಲ್ಲಾಡಳಿತಕ್ಕೆ ದೂರಿನ ಮಾಹಿತಿ ರವಾನಿಸಲಾಗುತ್ತದೆ. ದೂರು ನೀಡಿದವರ ಮಾಹಿತಿ ಗೌಪ್ಯವಾಗಿಡಲಾಗುತ್ತದೆ.

ರ‌್ಯಾಗಿಂಗ್ ನಡೆದದ್ದು ಸಾಬೀತಾದರೆ ಕೃತ್ಯ ಎಸೆಗಿದವನಿಗೆ 2.5ಲಕ್ಷ ರುವರೆಗೆ ದಂಡ ಹಾಗೂ ಪ್ರವೇಶ ರದ್ದು ಮಾಡಲಾಗುವುದು. ಈ ಸೌಲಭ್ಯವನ್ನು ಮುಕ್ತವಾಗಿ ಬಳಸಬೇಕೆಂದು ಸಚಿವ ಸಿಬಲ್ ಹೇಳಿದರು.

(ಏಜೆನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X