ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಬಿಎಂಪಿ : 198 ವಾರ್ಡ್ ಗಳಾಗಿ ಅಧಿಸೂಚನೆ

By Staff
|
Google Oneindia Kannada News

Draft delimitation of BBMP wards notified
ಬೆಂಗಳೂರು, ಜೂ. 18 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಗೆ 198 ಕರಡು ವಾರ್ಡ್ ಗಳನ್ನು ರಚಿಸಿ ರಾಜ್ಯ ಬುಧವಾರ ಗೆಜಟ್ ಅಧಿಸೂಚನೆ ಹೊರಡಿಸಿದೆ. ಈಗ ಹೊರಡಿಸಿರುವ ವಾರ್ಡ್ ಗಳ ಮರುವಿಂಗಡಣೆ ಕರಡು ರಚನೆ ಸಂಬಂಧ ಯಾವುದಾದರೂ ಆಕ್ಷೇಪಗಳಿದ್ದಲ್ಲಿ ಜೂನ್ 30ರೊಳಗೆ ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಗೆ ಲಿಖಿತ ರೂಪದಲ್ಲಿ ಸಲ್ಲಿಸಲು ತಿಳಿಸಲಾಗಿದೆ.

ಕಳೆದ 2007 ರ ಜನವರಿ 16ರಂದು ಏಳು ನಗರಸಭೆಗಳು, ಒಂದು ಪಟ್ಟಣ ಪಂಚಾಯತಿ ಹಾಗೂ 110 ಗ್ರಾಮಗಳನ್ನು ಬೆಂಗಳೂರು ಮಹಾನಗರ ಪಾಲಿಕೆಗೆ ಸೇರ್ಪಡೆಗೊಳಿಸುವ ಮೂಲಕ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ರಚಿಸಿತ್ತು. ಅಂದಿನಿಂದಲೂ ವಾರ್ಡ್ ಗಳ ರಚನೆ ಆಗಿರಲಿಲ್ಲ. ಸರಕಾರ ಇದೀಗ ಅಂತಿಮವಾಗಿ ಕರಡು ಅಧಿಸೂಚನೆ ಹೊರಡಿಸಿದೆ.

ಬಿಬಿಎಂಪಿಗೆ ಕನಿಷ್ಠ 200 ವಾರ್ಡ್ ಗಳನ್ನು ರಚಿಸಲು ಅವಕಾಶವಿದ್ದು, ರಾಜ್ಯ ಸರಕಾರ ಈಗ 198 ವಾರ್ಡ್ ಗಳ ರಚನೆ ಮಾಡಿದೆ. ಇಡೀ ಬಿಬಿಎಂಪಿ ವ್ಯಾಪ್ತಿಯನ್ನು 198 ವಾರ್ಡ್ ಗಳನ್ನಾಗಿ ವಿಂಗಡಿಸಲಾಗಿದೆ. ಪ್ರತಿಯೊಂದು ವಾರ್ಡ್ ಗೂ ಒಂದೊಂದು ಹೆಸರು ಮತ್ತು ಆ ವಾರ್ಡಿನ ಸಂಖ್ಯೆ ಮತ್ತು ವ್ಯಾಪ್ತಿಯನ್ನು ಪ್ರತ್ಯೇಕವಾಗಿ ವಿವರಿಸಲಾಗಿದೆ. ಪರಿಶಿಷ್ಟ ಜಾತಿ ಮತ್ತು ವರ್ಗ, ಹಿಂದುಳಿದ ವರ್ಗ ಮತ್ತು ಮಹಿಳೆಯರಿಗೆ ಮೀಸಲಾದ ವಾರ್ಡ್ ಗಳನ್ನು ನಂತರ ಹೊರಡಿಸಲಾಗುವುದು ಎಂದು ಸರಕಾರ ತಿಳಿಸಿದೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X