ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿವಮೊಗ್ಗದಲ್ಲಿ ರಾಮೋಜಿ ಮಾದರಿಯ ಫಿಲ್ಮ್ ಸಿಟಿ

By Staff
|
Google Oneindia Kannada News

BY Raghavendra, shivamogga mp
ಶಿವಮೊಗ್ಗ, ಜೂ. 18 : ಆಂಧ್ರದ ರಾಮೋಜಿರಾವ್ ಫಿಲ್ಮ್ ಸಿಟಿ ಮಾದರಿಯಲ್ಲಿ ಶಿವಮೊಗ್ಗದಲ್ಲಿಯೂ ಬೃಹತ್ ಫಿಲ್ಮ್ ಸಿಟಿಯನ್ನು ಸ್ಥಾಪಿಸಲಾಗುವುದು ಮತ್ತು ವಿಶ್ವವಿಖ್ಯಾತ ಜೋಗ ಜಲಪಾತದ ಅಭಿವೃದ್ಧಿಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದ್ದಾರೆ.

ಅವರು ಗುರುವಾರ ಬೆಳಿಗ್ಗೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನೂತನ ಸಂಸದರ ಕಾರ್ಯಾಲಯವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು ಹೊಸ ರೈಲು ಮಾರ್ಗ, ಜೋಗದ ಅಭಿವೃದ್ಧಿ, ಫಿಲ್ಮ್ ಸಿಟಿ ಕುರಿತಂತೆ ವಿವರ ನೀಡಿದರು.

ವರ್ತೂರು ಪ್ರಕಾಶ್ ಮಾಡಿರುವ ಆರೋಪವನ್ನು ತಳ್ಳಿಹಾಕಿದ ಅವರು, ತಮ್ಮ ತಂದೆ ಯಾವುದೇ ರೀತಿಯ ಕುಟಂಬ ರಾಜಕಾರಣ ಮಾಡುತ್ತಿಲ್ಲ. ಆಡಳಿತದಲ್ಲಿಯೂ ಅವರ ಕುಟುಂಬ ಯಾವುದೇ ಹಸ್ತಕ್ಷೇಪವನ್ನು ಮಾಡುವುದಿಲ್ಲ. ನಾನು 15 ವರ್ಷಗಳಿಂದ ಬಿಜೆಪಿ ಸಾಮಾನ್ಯ ಕಾರ್ಯಕರ್ತನಾಗಿ ಶ್ರಮಿಸಿದ್ದೇನೆ. ಈ ಕಾರಣಕ್ಕಾಗಿ ತಮಗೆ ಟಿಕೇಟ್ ನೀಡಲಾಗಿದೆ. ಅಲ್ಲದೇ, ಮುಖ್ಯಮಂತ್ರಿ ಕುಟುಂಬವು ಆಡಳಿತದಲ್ಲಿ ಯಾವುದೇ ರೀತಿಯ ಹಸ್ತಕ್ಷೇಪವನ್ನು ಮಾಡುತ್ತಾರೆ ಎಂಬ ಆರೋಪ ಕೂಡ ಸತ್ಯಕ್ಕೆ ದೂರವಾದುದು. ಅಭಿವೃದ್ಧಿಯ ವಿಷಯಗಳಲ್ಲಿ ಮಾತ್ರ ಸರ್ಕಾರದೊಂದಿಗೆ ತಾವು ಸಂಪರ್ಕವಿಟ್ಟುಕೊಂಡಿರುವುದಾಗಿ ತಿಳಿಸಿದರು.

ಮಾಜಿ ಮುಖ್ಯಮಂತ್ರಿ ಬಂಗಾರಪ್ಪರ ವಿರುದ್ಧ ಹರಿಹಾಯ್ದ ರಾಘವೇಂದ್ರ, ಬಿಜೆಪಿ ಹಣ, ಹೆಂಡ ಹಂಚಿ ಗೆದ್ದಿದ್ದಾರೆ ಎಂಬ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಜನರು ಬಿಜೆಪಿಯ ಜನಪರ ಆಡಳಿತವನ್ನು ನೋಡಿ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳನ್ನು ಮೆಚ್ಚಿ ಗೆಲ್ಲಿಸಿದ್ದಾರೆಯೇ ಹೊರತು ಬೇರೇನೂ ಅಲ್ಲ. ಬಂಗಾರಪ್ಪನವರು ಹಿರಿಯರು. ಸೋಲು ಗೆಲುವು ಸಾಮಾನ್ಯ ಎಂಬುದನ್ನು ಅರಿತುಕೊಂಡು ನಮಗೆ ಮಾರ್ಗದರ್ಶನ ನೀಡಬೇಕು ಎಂದರು.

ಕೇಂದ್ರ ಮತ್ತು ರಾಜ್ಯ ಸರಕಾರದ ಜೊತೆಗೆ ಸೇರಿಕೊಂಡು ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುವೆ. ಈಗಾಗಲೇ ಶಿವಮೊಗ್ಗ-ತಾಳಗುಪ್ಪ, ತಾಳಗುಪ್ಪ-ಹೊನ್ನಾವರ, ಹರಿಹರ-ಶಿವಮೊಗ್ಗಗಳ ಮಧ್ಯೆ ರೈಲು ಮಾರ್ಗಕ್ಕೆ ಮನವಿ ಮಾಡಲಾಗಿದೆ. ಹೊನ್ನಾವರ-ತಾಳಗುಪ್ಪ ಸಂಪರ್ಕಕ್ಕೆ ಸಾವಿರ ಕೋಟಿ ರು. ಬೇಕಾಗಿದ್ದು, ಈಗಾಗಲೇ 250 ಕೋಟಿ ರು. ಮಂಜೂರಾಗಿದೆ. ಭದ್ರಾವತಿ-ಶಿವಮೊಗ್ಗ ನಡುವಿನ ಚತುಸ್ಪಥ ರಸ್ತೆಯನ್ನು ಲಯನ್ಸ್ ಸಫಾರಿವರೆಗೂ ವಿಸ್ತರಿಸಲಾಗುವುದು ಎಂದು ಅವರು ವಿವರಿಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X