ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತಕ್ಕೆ ಕೊನೆಯ ಪಂದ್ಯದಲ್ಲೂ ಸೋಲು

By Staff
|
Google Oneindia Kannada News

India face miserable end to world cup
ಟ್ರೆಂಟ್ ಬ್ರಿಡ್ಜ್, ಜೂ.17: ಮತ್ತೆ ನಿರಾಶಾದಾಯಕ ಪ್ರದರ್ಶನ ಮುಂದುವರಿಸಿದ ಟೀಂ ಇಂಡಿಯಾ ದಕ್ಷಿಣಆಫ್ರಿಕಾ ವಿರುದ್ಧದ ಎರಡನೇ ಟಿ20 ವಿಶ್ವಕಪ್ ನಲ್ಲಿನ ತನ್ನ ಕೊನೆಯ ಪಂದ್ಯದಲ್ಲಿ 12 ರನ್ ಗಳಿಂದ ಸೋಲು ಅನುಭವಿಸಿದೆ.

ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ದಕ್ಷಿಣಆಫ್ರಿಕಾ ನಿಗದಿತ ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 130 ರನ್ ಗಳ ಸಾಧಾರಣ ಮೊತ್ತ ಪೇರಿಸಿತ್ತು. ದಕ್ಷಿಣಆಫ್ರಿಕಾ ಪರ ನಾಯಕ ಸ್ಮಿತ್ 26, ಡಿವಿಲ್ಲಿಯರ್ಸ್ 63 ರನ್ ಗಳಿಸಿದರು. ಭಾರತದ ಪರವಾಗಿ ಜಹೀರ್, ಆರ್ ಪಿ ಸಿಂಗ್, ಜಡೇಜಾ, ರೈನಾ ಮತ್ತು ಹರ್ಭಜನ್ ತಲಾ ಒಂದೊಂದು ವಿಕೆಟ್ ಪಡೆದರು.

131 ರನ್ ಗಳ ಗುರಿ ಬೆನ್ನಟ್ಟಿದ ಭಾರತಕ್ಕೆ ಗಂಭೀರ್ (21) ಮತ್ತು ರೋಹಿತ್ ಶರ್ಮ (29) ಉತ್ತಮ ಆರಂಭಿಕ ಜೊತೆಯಾಟ ನೀಡಿದರು. ಆದರೆ ಮಧ್ಯಮ ಕ್ರಮಾಂಕದ ಆಟಗಾರ ವೈಫಲ್ಯತೆಯಿಂದಾಗಿ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 118 ರನ್ ಗಳಿಸಲಷ್ಟೇ ಗಳಿಸಲು ಶಕ್ತವಾಯಿತು. ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಡಿವಿಲ್ಲಿಯರ್ಸ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು.

ಗ್ರೂಪ್ 'ಇ' ನಿಂದ ದಕ್ಷಿಣಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ಮತ್ತು ಗ್ರೂಪ್ 'ಎಫ್' ನಿಂದ ಶ್ರೀಲಂಕಾ ಮತ್ತು ಪಾಕಿಸ್ತಾನ ಸೆಮಿ ಫೈನಲ್ ಪ್ರವೇಶಿಸಿದೆ. ನಾಳೆ ನಡೆಯುವ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ( ಜೂ 18) ದಕ್ಷಿಣಆಫ್ರಿಕಾ ಪಾಕಿಸ್ತಾನ ತಂಡವನ್ನು ಮತ್ತು ಶುಕ್ರವಾರ ನಡೆಯುವ ಎರಡನೇ ಪಂದ್ಯದಲ್ಲಿ (ಜೂ 19) ಶ್ರೀಲಂಕಾ ವೆಸ್ಟ್ ಇಂಡೀಸ್ ತಂಡವನ್ನು ಎದುರಿಸಲಿದೆ.

(ದಟ್ಸ್ ಕನ್ನಡ ಕ್ರೀಡಾವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X