ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂದುವರೆದ ಆಸೀಸ್ ಕಮಂಗಿಗಳ ಹುಚ್ಚಾಟ

By Staff
|
Google Oneindia Kannada News

ಮೆಲ್ಬೋರ್ನ್, ಜೂ. 15 : ಆಸ್ಟ್ರೇಲಿಯಾ ಸರಕಾರ ಕಣ್ಮುಚ್ಚಿ ಕುಳಿತಿದೆ. ಭಾರತ ಸರಕಾರ ಅಸಹಾಯಕವಾಗಿದೆ. ಆಸೀಸ್ ನಾಡಲ್ಲಿ ಭಾರತೀಯ ವಿದ್ಯಾರ್ಥಿಗಳ ಜೀವನ ದಿನದಿಂದ ದಿನಕ್ಕೆ ದುರ್ಬರವಾಗತೊಡಗಿದೆ. ಅಲ್ಲಿನ ಪ್ರಧಾನಿ ಕೆವಿನ್ ರುಡ್ ಜನಾಂಗೀಯ ಹಲ್ಲೆಗೆ ಸೂಕ್ತ ಕ್ರಮಕೈಗೊಳ್ಳುತ್ತೇವೆ ಎಂದು ಭಾರತಕ್ಕೆ ಭರವಸೆ ನೀಡಿದರೂ ಕಾಂಗರೂ ಕಮಂಗಿಗಳ ಹುಚ್ಚಾಟ ಮಾತ್ರ ನಿರಾತಂಕವಾಗಿ ನಡೆದಿದೆ. ಇದರೊಂದಿಗೆ ಭಾರತೀಯ 14 ವಿದ್ಯಾರ್ಥಿಗಳ ಮೇಲೆ ದಾಳಿ ನಡೆದಂತಾಗಿದೆ.

ಶನಿವಾರ ಮತ್ತೆ ಭಾರತೀಯ ವಿದ್ಯಾರ್ಥಿ 20 ವರ್ಷದ ಸನ್ನಿ ಬಜಾಜ್ ಎಂಬಾತ ಮೇಲೆ ದಾಳಿ ನಡೆದಿದೆ. ಡೀಕನ್ ವಿಶ್ವವಿದ್ಯಾಲಯದಲ್ಲಿ ಈ ಘಟನೆ ನಡೆದಿದ್ದು, ಇಬ್ಬರು ಆಸ್ಟ್ರೇಲಿಯನ್ನರು ಸನ್ನಿ ಬಜಾಜ್ ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೇ, ಮನಬಂದಂತೆ ಥಳಿಸಿದ್ದಾರೆ. ನನ್ನ ಹತ್ತಿರ ಬಂದ ಆ ಇಬ್ಬರು ವ್ಯಕ್ತಿಗಳು ಹಣ ಕೇಳಿದರು. ನಾನು ಇಲ್ಲ ಎಂದಿದ್ದಕ್ಕೆ ತೀವ್ರವಾಗಿ ಹೊಡದರು ಎಂದು ಸನ್ನಿ ವಾಹಿನಿಯೊಂದರಲ್ಲಿ ಹೇಳಿಕೊಂಡಿದ್ದಾನೆ. ಸನ್ನಿಗೆ ಬೆರಳು, ಬೆನ್ನು, ಹೊಟ್ಟೆಗೆ ತೀವ್ರವಾಗಿ ಗಾಯವಾಗಿದೆ. ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X