ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ವೆಸ್ಟ್ ಇಂಡೀಸ್ ವಿರುದ್ಧ ಭಾರತಕ್ಕೆ ಸೂಪರ್ ಸೋಲು
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಧೋನಿ ಪಡೆ ನಿರೀಕ್ಷೆ ಮಟ್ಟದಲ್ಲಿ ಫಾರ್ಮ್ ಪ್ರದರ್ಶಿಸಲಿಲ್ಲ. 29 ರನ್ ಆಗುವಷ್ಟರಲ್ಲೇ ಗಂಭೀರ್, ರೈನಾ ಮತ್ತು ರೋಹಿತ್ ಶರ್ಮ ಅವರ ವಿಕೆಟ್ ಕಳೆದುಕೊಂಡಿತು. ಯುವರಾಜ್ ಸಿಂಗ್ (67) ಮತ್ತು ಯೂಸುಫ್ ಪಠಾಣ್ (31) ಮಾತ್ರ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಭಾರತ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 153 ರನ್ ಗಳ ಸಾಧಾರಣ ಮೊತ್ತ ಪೇರಿಸಿತು. ವೆಸ್ಟ್ ಇಂಡೀಸ್ ಪರ ಬ್ರಾವೋ 4 ಮತ್ತು ಎಡ್ವರ್ಡ್ 3 ವಿಕೆಟ್ ಪಡೆದರು.
154 ರನ್ ಗಳ ಗುರಿ ಬೆನ್ನಟ್ಟಿದ ವೆಸ್ಟ್ ಇಂಡೀಸ್ ಇನ್ನು 1.2 ಓವರ್ ಬಾಕಿ ಇರುತ್ತಲೇ ಕೇವಲ ಮೂರು ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ತಂಡದ ಪರ ನಾಯಕ ಗೇಲ್ 22, ಸಿಮ್ಮೊಂಸ್ 44 ಮತ್ತು ಬ್ರಾವೋ 66 ರನ್ ಗಳಿಸಿದರು. ಆಲ್ ರೌಂಡರ್ ಆಟ ಪ್ರದರ್ಶಿಸಿದ ಬ್ರಾವೋ ಪಂದ್ಯಶ್ರೇಷ್ಟ ಪ್ರಶಸ್ತಿಗೆ ಭಾಜನರಾದರು. ಭಾರತ ತನ್ನ ಮುಂದಿನ ಪಂದ್ಯ ಇಂಗ್ಲೆಂಡ್ ವಿರುದ್ಧ ಭಾನುವಾರ ಆಡಲಿದೆ.
(ಏಜೆನ್ಸೀಸ್)
Comments
ಭಾರತ india ಕ್ರಿಕೆಟ್ ಲಂಡನ್ yuvraj singh ಯುವರಾಜ್ ಸಿಂಗ್ ವೆಸ್ಟ್ ಇಂಡೀಸ್ ಕ್ರಿಸ್ ಗೇಲ್ t20 world cup 2009 chris gayle west indies
Story first published: Saturday, June 13, 2009, 10:54 [IST]