ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿದ್ಯಾರ್ಥಿನಿಲಯ ಕಟ್ಟಡ ನಿರ್ಮಾಣಕ್ಕೆ ಸಹಾಯಧನ

By Staff
|
Google Oneindia Kannada News

ಬೆಂಗಳೂರು, ಜೂ. 12 : 2009-10 ನೇ ಸಾಲಿನಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ವಿಶ್ವಕರ್ಮ, ಕ್ಷತ್ರಿಯ, ಕುರುಬ, ಮಡಿವಾಳ, ದೇವಾಂಗ, ಬಿಲ್ಲವ ಮುಂತಾದ ಸಮಾಜದ ಅಭಿವೃದ್ಧಿ ಕಾರ್ಯಕ್ರಮದಡಿ ಸಮುದಾಯ ಭವನ, ವಿದ್ಯಾರ್ಥಿ ನಿಲಯಗಳ ಕಟ್ಟಡ ನಿರ್ಮಾಣಕ್ಕೆ ಸಹಾಯಧನ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ಈ ಸಮುದಾಯ ಭವನ ನಿರ್ಮಿಸಲು ಉದ್ದೇಶಿಸಿರುವ ಕಟ್ಟಡಗಳ ಅಂದಾಜು ವೆಚ್ಚ ಕನಿಷ್ಠ ರೂ 10 ಲಕ್ಷ ರುಪಾಯಿಗಳಾಗಿರಬೇಕು. ಸರ್ಕಾರದ ವತಿಯಿಂದ ರೂ 5 ಲಕ್ಷ ರುಪಾಯಿಗಳನ್ನು ಸಹಾಯಧನಕ್ಕಾಗಿ ಮಂಜೂರು ಮಾಡಲಾಗುವುದು. ಬಾಕಿ ಹಣವನ್ನು ಸಂಸ್ಥೆಯವರೇ ಭರಿಸಬೇಕು.

ಆಸಕ್ತಿಯುಳ್ಳ ರಾಜ್ಯದ ನೊಂದಾಯಿತ ಸಂಘ-ಸಂಸ್ಥೆಗಳು ಅನುದಾನ ಮಂಜೂರಾತಿಗೆ ಸ್ಥಳ, ನಿವೇಶನದ ದಾಖಲಾತಿಗಳು, ಕಟ್ಟಡ ನಿರ್ಮಿಸಲು ಪರವಾನಿಗೆ, ಅನುಮೋದಿತ ನಕ್ಷೆ ಮತ್ತು ಅಂದಾಜು ವೆಚ್ಚ ಇತ್ಯಾದಿ ದಾಖಲಾತಿಗಳನ್ನು ನಿಗದಿತ ನಮೂನೆಯ ಅರ್ಜಿಯೊಂದಿಗೆ ಸಂಬಂಧಪಟ್ಟ ಜಿಲ್ಲಾಧಿಕಾರಿಗಳ (ಡಿ.ಸಿ) ಶಿಫಾರಸ್ಸು ಹಾಗೂ ಜಿಲ್ಲಾ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಅಧಿಕಾರಿಗಳ ತನಿಖಾ ವರದಿಯೊಂದಿಗೆ ನಿರ್ದೇಶಕರು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ನಂ 10 ಡಿ, ಮೂರನೇ ಮಹಡಿ, ಟ್ಯಾಂಕ್ ಬೆಡ್ ಏರಿಯಾ, ವಸಂತನಗರ, ಬೆಂಗಳೂರು 560052 ಇವರಿಗೆ ತಲುಪುವಂತೆ ಸಲ್ಲಿಸಬಹುದು.

ಲಭ್ಯವಿರುವ ಆಯವ್ಯಯಕ್ಕೆ ಅನುಗುಣವಾಗಿ ಪ್ರಸ್ತಾವನೆಗಳನ್ನು ಪರಿಗಣಿಸಿ ಅನುದಾನ ಮಂಜೂರು ಮಾಡಲು ಕ್ರಮವಹಿಸಲಾಗುವುದು. ಸಮುದಾಯ ಭವನ, ವಿದ್ಯಾರ್ಥಿ ನಿಲಯದ ಕಟ್ಟಡವನ್ನು ನಿರ್ಮಿಸಲು ಸರ್ಕಾರಿ ಅನುದಾನವನ್ನು ಹೊರತುಪಡಿಸಿ ಉಳಿದಂತೆ ಬೇಕಾಗುವ ಹೆಚ್ಚುವರಿ ಮೊತ್ತವನ್ನು ಸಂಸ್ಥೆಯೇ ಭರಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಹಾಗೂ ಅರ್ಜಿ ನಮೂನೆಗಾಗಿ ಆಯಾ ಜಿಲ್ಲೆಯ ಜಿಲ್ಲಾ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ.

(ದಟ್ಸ್ ದನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X