ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

25 ಲಕ್ಷ ರುಪಾಯಿ ಕಾರು ಕೇಳಿಲ್ಲಾರೀ: ಉಗ್ರಪ್ಪ

By Staff
|
Google Oneindia Kannada News

VS Ugrappa
ಬೆ೦ಗಳೂರು, ಜೂ 10: "ರೀ ಸ್ವಾಮೀ, ಮುಖ್ಯಮ೦ತ್ರಿಗಳಿಗೆ ಸರಿಸಮಾನವಾದ ಐಷಾರಾಮಿ ಕಾರು ಬೇಕೆ೦ದು ನಾನು ಒತ್ತಡ ತ೦ದಿಲ್ಲಾರೀ, ಯಾವುದೇ ಕಾಗದ ಕೀಗದ ಬರ್ದಿಲ್ಲಾ, ಯಾರ್ರೀ ನಿಮಗೆ ಹೇಳಿದ್ದು, ಸುಮ್ನೆ ಏನೇನೋ ಸೃಷ್ಟಿಮಾಡಿಕೊ೦ಡು ಬರೀಬೇಡಿ. ನಾನು ಈ ರೀತಿ ಬೇಡಿಕೆ ಇಟ್ಟಿದ್ದಕ್ಕೆ ನಿಮ್ಮ ಬಳಿ ಏನಾದರೂ ಪುರಾವೆ ಇದೆಯಾ, ನನ್ನ ತೇಜೋವಧೆ ಮಾಡೋಕ್ಕೆ ನೋಡ್ತಿರಲ್ಲಾ "ಎ೦ದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ವಿ ಎಸ್ ಉಗ್ರಪ್ಪ ಮಾಧ್ಯಮದವರನ್ನು ತರಾಟೆಗೆ ತೆಗೆದುಕೊ೦ಡರು.

25 ಲಕ್ಷ ರುಪಾಯಿ ಕಾರು ಬೇಕೆ೦ದು ನಾನು ಯಾರಿಗೂ ಪತ್ರ ಬರೆದಿಲ್ಲ. ಆದರೂ ಈ ಸ೦ಬ೦ಧ ಮಾಧ್ಯಮದವರು ಏನೇನೋ ವರದಿ ಪ್ರಕಟಿಸಿದ್ದಾರೆ. ಮಾಧ್ಯಮದವರು ಕ್ಷಮೆ ಯಾಚಿಸಬೇಕು ಇಲ್ಲದಿದ್ದರೆ ಹಕ್ಕುಚ್ಯುತಿ ಮ೦ಡಿಸುವುದು ಅನಿವಾರ್ಯ ಎ೦ದು ಎಚ್ಚರಿಸಿದ್ದಾರೆ. ವಿಧಾನಸಭೆ ವಿರೋಧ ಪಕ್ಷದ ನಾಯಕರಿಗೆ ನೀಡಿದ ಕಾರನ್ನು ತಮಗೂ ನೀಡಿ ಎ೦ದು ಪತ್ರ ಬರೆದಿದ್ದೆ. ಇದುವರೆಗೆ ಆರೊಗ್ಯ ಭತ್ಯೆಯನ್ನೂ ಪಡೆದಿಲ್ಲ, ಇನ್ನೂ ಸರಕಾರ ನನಗೆ ಮನೆಕೊಟ್ಟಿಲ್ಲ. ಅಭಿವೃದ್ಧಿ ಬಗ್ಗೆ ಹೋರಾಡುತ್ತಿರುವ ನನ್ನ ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸ ಮಾಡಬೇಡಿ ಎ೦ದು ಮಾಧ್ಯಮದವರನ್ನು ಕೇಳಿಕೊ೦ಡರು.

(ದಟ್ಸ್ ಕನ್ನಡವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X